1975ರಲ್ಲಿ ತೆರೆಕಂಡ ದೇವರ ಗುಡಿ ಚಿತ್ರದ ಈ ಗೀತೆಯನ್ನು ಚಿ ಉದಯ್ ಶಂಕರ್ ರಚನೆ, ರಾಜನ್ ನಾಗೇಂದ್ರ ಸಂಗೀತ ನೀಡಿದ ಈ ಹಾಡನ್ನು ಅನಿಲ್ ಕುಂಬ್ಳೆ ಹಾಡಿ ಕನ್ನಡಿಗರ ಮನ ತಣಿಸಿದ್ದಾರೆ.
ಈ ಹಾಡನ್ನು ಹಾಡಲು ಕಾರಣವೂ ಇದೆ ಏನೆಂದರೆ, ದುಬೈನಲ್ಲಿ ಪಂಜಾಬ್ ಕಿಂಗ್ಸ್ ಆಯೋಜಿಸಿದ ಮನರಂಜನಾ ಕಾರ್ಯಕ್ರಮದಲ್ಲಿ ಕೋಚ್ ಅನಿಲ್ ಕುಂಬ್ಳೆ ಕನ್ನಡ ಸಿನಿಮಾದ ಜನಪ್ರಿಯ ಹಾಡು ಹಾಡುವ ಮೂಲಕ ಎಲ್ಲಾ ಕನ್ನಡಿಗರ ಮನಗೆದ್ದಿದ್ದಾರೆ. ಮನರಂಜನಾ ಕಾರ್ಯಕ್ರಮದಲ್ಲಿ ಅನಿಲ್ ಕುಂಬ್ಳೆ ಕನ್ನಡದ ಅತ್ಯಂತ ಜನಪ್ರಿಯ ಮಾಮರ ಎಲ್ಲೋ ಕೋಗಿಲೆ ಎಲ್ಲೋ ಹಾಡು ಹಾಡಿದ್ದಾರೆ.

ಪಂಜಾಬ್ ಕಿಂಗ್ಸ್ ತಂಡದ ಮನರಂಜನಾ ಕಾರ್ಯಕ್ರಮದಲ್ಲಿ ಕ್ರಿಕೆಟಿಗರು ಹಾಡು ಹಾಡಿದ್ದಾರೆ. ಆದರೆ ಕುಂಬ್ಳೆ ಹಾಡು ಇದೀಗ ಹೈಲೈಟ್ ಆಗಿದೆ. ಅಂತಾರಾಷ್ಟ್ರೀಯ ಪಂದ್ಯವಿರಲಿ, ಟೀಂ ಇಂಡಿಯಾಗೆ ಮಾರ್ಗದರ್ಶನ ಮಾಡುತ್ತಿರುವ ಸಂದರ್ಭ, ಐಪಿಎಲ್ ಹೀಗೆ ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅನಿಲ್ ಕುಂಬ್ಳೆ ಕನ್ನಡವನ್ನು ಅತ್ಯಂತ ಹೆಮ್ಮೆಯಿಂದ ಮಾತನಾಡಿದ್ದಾರೆ. ಕುಂಬ್ಳೆ ಅತ್ಯಂತ ಸ್ಪಷ್ಟ ಕನ್ನಡದಲ್ಲಿ ಮಾತನಾಡಬಲ್ಲರು ಅನ್ನೋದು ಮತ್ತೊಂದು ವಿಶೇಷ.
****