ಒಟಿಟಿ ಪ್ಲಾಟ್ ಫಾರ್ಮ್ಗಳಾದ ನೆಟ್ ಫ್ಲಿಕ್ಸ್ , ಅಮೇಜಾನ್ ಪ್ರೈಮ್ ಗಳು ಪ್ರೇಕ್ಷಕರಿಗೆ ವಿಶೇಷವಾದ ಕಥಾವಸ್ತು ಇರುವಂತಹ ಡಾಕ್ಯುಮೆಂಟರಿ ಹಾಗೂ ವೆಬ್ ಸೀರೀಸ್ ಗಳನ್ನು ಕಟ್ಟಿಕೊಡಲು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿವೆ.
ಈಗ ಅಂತಹದೇ ವಿಭಿನ್ನ ಕಥಾಹಂದರ ಇರುವ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆ, ನಂದಿನಿ ಲೇಔಟ್ ಪೊಲೀಸ್ ಠಾಣೆ ಮತ್ತು ಸುಬ್ರಹ್ಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಮೂರು ಕ್ರೈಂಗಳು ಈ ‘ಇಂಡಿಯಾ ಡಿಟೆಕ್ಟೀವ್ಸ್’ ವೆಬ್ ಸೀರಿಸ್ನ ಮೇಜರ್ ರೋಲ್ ಆಗಿವೆ. ಅಪರಾಧ ಜಗತ್ತಿನ 4 ವಿಶೇಷ ಪ್ರಕರಣಗಳನ್ನು ತೆರೆಯ ಮೇಲೆ ತರಲು ನೆಟ್ಫ್ಲಿಕ್ಸ್ ತಯಾರಾಗಿದೆ. ಈ ಸೀರೀಸ್ ನೈಜ ಸಾಕ್ಷ್ಯಚಿತ್ರ ಮಾದರಿಯಲ್ಲಿರಲಿದ್ದು, ನೆಟ್ ಫ್ಲಿಕ್ಸ್ನಲ್ಲಿ ಪ್ರಸಾರವಾಗುವ ಭಾರತದ ಮೊದಲ ನೈಜ ಘಟನೆಗಳನ್ನು ಆಧರಿಸಿದ ಕ್ರೈಮ್ ಸೀರೀಸ್ ಇದಾಗಿದೆ. ಈ ಚಿತ್ರಕ್ಕೆ ‘ಕ್ರೈಂ ಸ್ಟೋರೀಸ್: ಇಂಡಿಯಾ ಡಿಟೆಕ್ಟೀವ್ಸ್ ಎಂದು ಹೆಸರಿಡಲಾಗಿದ್ದು, ಸೆಪ್ಟೆಂಬರ್ 22ರಿಂದ ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.
‘ಇಂಡಿಯಾ ಡಿಟೆಕ್ಟೀವ್ಸ್’ ವೆಬ್ ಸೀರೀಸ್ ನ ಟ್ರೇಲರ್ ಬಿಡುಗಡೆಯಾಗಿದ್ದು ಇದು ಕನ್ನಡ ಭಾಷೆಯಲ್ಲಿರುವುದು ವೀಕ್ಷಕರಿಗೆ ಮತ್ತಷ್ಟು ಖುಷಿ ನೀಡಿದೆ.
****