ಕನ್ನಡದಲ್ಲಿ ಹೊಸದೊಂದು ರೆಟ್ರೋ ಸಿನಿಮಾ ತೆರೆ ಮೇಲೆ ಬರಲು ರೆಡಿ ಆಗ್ತಾ ಇದ್ದು, ಅದರಲ್ಲಿ ಧರ್ಮ ಕೀರ್ತಿರಾಜ್ ನಾಯಕನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಹಲವು ದಶಕಗಳ ಹಿಂದಿನ ಕಥೆ ಸಿನಿಮಾವಾಗುತ್ತಿದೆ. ಹೌದು ಡಾ. ಶಿವರಾಜ್ ಜಾಣಗೆರೆ ಯವರ ಬಯೋಪಿಕ್ ಚಿತ್ರವಾಗುತ್ತಿದ್ದು, ಅದಕ್ಕೆ ಕ್ಯಾಡ್ ಬರೀಸ್ ಎಂದು ಹೆಸರಿಡಲಾಗಿದೆ. ಇನ್ನು ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಗೆ ಜೋಡಿಯಾಗಿ ಅದ್ವಿತಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಡಾ. ಶಿವರಾಜ್ ಜಾಣಗೆರೆ ಅವರು ಗಾಯಕರು ಹೌದು. ಅವರಿದ್ದ ಕಾಲದ ಕಥೆಯಾದ್ದರಿಂದ ಸಿನಿಮಾದ ಮೊದಲ ಭಾಗ ರೇಟ್ರೋ ಸ್ಟೈಲ್ ನಲ್ಲಿ ಇರಲಿದೆಯಂತೆ ಹಾಗೂ ಅಲ್ಲಿ ಆ ಕಾಲಕ್ಕೆ ಹೊಂದಿಕೆಯಾಗುವಂತಹ ಸ್ಕೂಟರ್, ಕಾರ್, ಕಾಸ್ಟ್ಯೂಮ್ ಹಾಗು ಜೀವನಶೈಲಿಯೆಲ್ಲವೂ ರೆಟ್ರೋ ಮಾದರಿಯಲ್ಲೇ ಇರಲಿವೆ.

‘ಕ್ಯಾಡ್ ಬರೀಸ್’ ಸಿನಿಮಾವನ್ನು ರಮೇಶ್ ಯಾದವ್ ನಿರ್ದೇಶನ ಮಾಡುತ್ತಿದ್ದು ಈ ಹಿಂದೆ ಹಲವಾರು ತೆಲುಗು ಮತ್ತು ಕನ್ನಡ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಡಾ ಶಿವರಾಜ್ ಜಾಣಗೆರೆ ಅವರ ಜೀವನದಲ್ಲಿ ಬಹಳಷ್ಟು ಏರಿಳಿತಗಳು ಇದ್ದವು. ಇಂದಿನ ಕಮರ್ಷಿಯಲ್ ನ ಕಾರಣಕ್ಕಾಗಿ ಕತೆಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ ಮತ್ತು ಸಿನಿಮಾದ ಹೀರೋ ಡಾಕ್ಟರ್ ಆಗಿರದೆ ಗಾಯಕ ಆಗಿರುತ್ತಾರೆ. ಇನ್ನು ಚಿತ್ರದ ಚಿತ್ರೀಕರಣವನ್ನು ಕುಣಿಗಲ್, ಜಾಣಗೆರೆ ಹಾಗೂ ಬೆಂಗಳೂರಿನಲ್ಲಿ ಮಾಡಲಾಗಿದೆ. ಸಿನಿಮಾದ ನಾಯಕಿಯಾಗಿರುವ ಅದ್ಭುತ ಶೆಟ್ಟಿ ಅವರ ಪಾತ್ರ ಬಹಳ ಚೆನ್ನಾಗಿದೆ ಹಳೆಕಾಲದ ಹುಡುಗಿಯಂತೆ ಅದ್ವಿತಿ ಶೆಟ್ಟಿ ಸಖತ್ ಆಗಿ ಆಕ್ಟ್ ಮಾಡಿದ್ದಾರೆ. ಇದರಿಂದ ಧರ್ಮ ಕೀರ್ತಿರಾಜ್ ಹಾಗೂ ಅದ್ವಿತಿ ಶೆಟ್ಟಿ ಕಾಂಬಿನೇಶನ್ ಸಕ್ಸಸ್ ಆಗಲಿದೆ ಎನ್ನುತ್ತಾರೆ ನಿರ್ದೇಶಕ ರಮೇಶ್ ಯಾದವ್.
ಚಿತ್ರದ ಕುರಿತು ನಟಿ ಅದ್ವಿತಿ ಶೆಟ್ಟಿ ಕೂಡ ಮಾತನಾಡಿದ್ದು, ಕ್ಯಾಡ್ ಬರೀಸ್ ನಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿದೆ, ಕಥೆ ಕೂಡ ಡಿಫರೆಂಟ್ ಆಗಿದೆ ಹಾಗಾಗಿ ನಾನು ಈ ಸಿನಿಮಾ ಮಾಡಲು ಒಪ್ಪಿಕೊಂಡೆ. ಈ ಚಿತ್ರದಲ್ಲಿ ನನ್ನ ಪಾತ್ರ ಶ್ರೀಮಂತ ಹುಡುಗಿಯಾಗಿದ್ದು, 2 ಶೆಡ್ ನಲ್ಲಿ ನಟಿಸಿದ್ದೇನೆ. ಅಮ್ಮನಿಗೂ ಸ್ಟೋರಿ ಇಷ್ಟವಾಯ್ತು. ಲವ್ ಮಾಡೋದು, ಡುಯೇಟ್ ಹಾಡುವುದಕ್ಕೆ ಚಿತ್ರ ಸೀಮಿತವಾಗಿರದೆ ನಾಯಕ ಮತ್ತು ನಾಯಕಿ ಇಬ್ಬರ ನಟನೆಗೆ ಬಹಳ ಸ್ಕೋಪ್ ಇದೆ. ಧರ್ಮ ಕೀರ್ತಿರಾಜ್ ಅವರ ಪಾತ್ರವೂ ಕೂಡ ವಿಭಿನ್ನವಾಗಿದೆ ಎಂದು ಹೇಳಿದ್ದಾರೆ.