ನಾಡ ಹಬ್ಬ ದಸರಾ ಇನ್ನೇನು ಕೆಲವೇ ದಿನಗಳಲ್ಲಿ ನಾಡಿನಾದ್ಯಂತ ಕಣ್ಮನ ಸೆಳೆಯಲು ತಯಾರಿ ನಡೆಸುತ್ತಿರುವ ಹೊತ್ತಲ್ಲೆ ಇತ್ತ ದಸರಾ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಕ್ತಾಯಗೊಂಡಿದ್ದೆ. ಹೌದು ನೀನಾಸಂ ಸತೀಶ ಮತ್ತು ಶರ್ಮಿಳಾ ಮಾಂಡ್ರೆ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ‘ದಸರಾ’ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ.

‘ದಸರಾ’ ಚಿತ್ರಕ್ಕೆ ಶರ್ಮಿಳಾ ಮಾಂಡ್ರೆ ನಾಯಕಿ ಕಂ ನಿರ್ಮಾಪಕಿಯೂ ಹೌದು, ಅರವೀಂದ ಶಾಸ್ತ್ರಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ದಸರಾ ಸಿನಿಮಾ ಈ ಹಿಂದೆ “ವೈತರಿಣಿ “ ಎಂದು ಟೈಟಲ್ ಇಡಲಾಗಿತ್ತು. ನಂತರ ಚಿತ್ರದ ಹೆಸರನ್ನು ದಸರಾ ಎಂದು ಬದಲಾಯಿಸಲಾಯಿತು.

ದಸರಾ ಚಿತ್ರ ಒಂದು ಥ್ರಿಲ್ಲರ್ ಕಥೆಯಾಗಿದ್ದು ಇದರಲ್ಲಿ ನೀನಾಸಂ ಸತೀಶ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೊರೊನ ಲಾಕ್ ಡೌನ್ ಕಾರಣದಿಂದ ಚಿತ್ರೀಕರಣ ಮುಗಿಸುವುದು ಸ್ವಲ್ಪ ತಡವಾಗಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.
****