ಹೊಸ ಪ್ರತಿಭೆಗಳ ತಂಡ ಕೊಡಿ ಕಂಡ ವಿಶಿಷ್ಠ ಸಿಮಿ ಮೋರ್ ಸಾಹಸ ಸಿನಿಮಾ ಕರ್ಮಣ್ಯೇ ವಾದಿಕಾರ್ಸ್ತೆ. ಶ್ರೀ ಹರಿ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಪ್ರತೀಕ್, ದಿವ್ಯ ಹಾಗೂ ಡೊಲಾಮ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ರಿತ್ವಿಕ್ ಮುರಳಿಧರ್ ಸಂಗೀತ,ಉದಯ್ ಲೀಲಾ ಕ್ಯಾಮೆರಾ ವರ್ಕ್ ಇರೋ ಚಿತ್ರವನ್ನ ರಮೇಶ್ ರಾಮಯ್ಯರವರು ನಿರ್ಮಿಸಿದ್ದಾರೆ. ಅವನಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣ ವಾಗಿರೋ ಈ ಚಿತ್ರದ ಟ್ರೈಲರ್ ಇದೀಗ ರಿಲೀಸ್ ಆಗಿದ್ದು, ತಾಂತ್ರಿಕವಾಗಿ ಇಂಪ್ರೆಸೀವ್ ಆಗಿದೆ.

ಅಲ್ಲದೆ ಮೂರು ನಾಲ್ಕು ಜಾನರ್ ನಲ್ಲಿ ಕಥೆಯ ಛಾಯೆ ಇದ್ದು, ಸಿನಿಮಾ ಮೇಲೆ ನಿರೀಕ್ಷೆ ಹುಟ್ಟುವಂತಿದೆ. ಎಲ್ಲಾ ಆಂಗಲ್ ನಿಂದ್ಲೂ ಈ ಸಿನಿಮಾ ಇಂಟ್ರೆಸ್ಟಿಂಗ್ ಆಗಿ ಕಾಣ್ತಿದ್ದು ಸದ್ಯದಲ್ಲೇ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡೋ ಸನ್ನಾಹದಲ್ಲಿದೆ.
****