ಕೆಲವು ದಿನಗಳಿಂದ ತೆಲಗು ಚಿತ್ರರಂಗದ ಸ್ಟಾರ್ ನಟರಾದ ಅಕ್ಕಿನೇನಿ ನಾಗ ಚೈತನ್ಯ ಮತ್ತು ಪತ್ನಿ ಸಮಂತಾ ಅವರ ಸಂಸಾರದಲ್ಲಿ ಬಿರುಕು ಮೂಡಿದೆ ಎಂಬ ಮಾತು ಕೇಳಿ ಬರುತ್ತಿದ್ದ ಬೆನ್ನಲ್ಲೆ ನಟ ಅಕ್ಕಿನೇನಿ ನಾಗ ಚೈತನ್ಯ ಅಭಿನಯದ ತೆಲುಗು ಚಲನಚಿತ್ರ ಲವ್ ಸ್ಟೋರಿಯ ಟ್ರೇಲರ್ ಅನ್ನು ಪತ್ನಿ ಸಮಂತಾ ಹಂಚಿಕೊಂಡಿದ್ದಾರೆ. ಇದಕ್ಕಾಗಿ ಅಕ್ಕಿನೇನಿ ನಾಗ ಚೈತನ್ಯ ಪತ್ನಿ ಸಮಂತಾ ಅಕ್ಕಿನೇನಿ ಅವರಿಗೆ ಟ್ವಿಟರ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಇವರಿಬ್ಬರ ಸಾಂಸಾರಿಕ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದವು ಆದರೆ ಈಗ ಸಮಂತಾ ಮತ್ತು ಚೈತನ್ಯ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.ಸೆಪ್ಟಂಬರ್ 24 ರಂದು ಸಾಯಿ ಪಲ್ಲವಿ ಮತ್ತು ಅಕ್ಕಿನೇನಿ ಅವರ ಲವ್ ಸ್ಟೋರಿ ಚಿತ್ರ ಬಿಡುಗಡೆ ಆಗಲಿದೆ ಹೀಗಾಗಿ ತನ್ನ ಟ್ವೀಟ್ ನಲ್ಲಿ ಸಮಂತಾ ವಿಶೇಷವಾಗಿ ಸಾಯಿ ಪಲ್ಲವಿಗೆ ಶುಭ ಹಾರೈಸಿದ್ದಾರೆ.
****