ಇತ್ತೀಚಿಗಷ್ಟೆ ಅಪಘಾತದಲ್ಲಿ ನಮ್ಮನ್ನಗಲಿದ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಗೆ ವಿಧಾನಸಭೆಯಲ್ಲಿ ಸಂತಾಪ ಸೂಚನೆ ಮಾಡಲಾಯಿತು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಜಯ್ ಸಾಧನೆ ಬಗ್ಗೆ ಮಾತನಾಡಿದರು. ರಾಷ್ಟ್ರ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಕರ್ನಾಟಕಕ್ಕೆ ಹೆಮ್ಮೆ ತಂದ ನಟನಿಗೆ ಸದನದಲ್ಲಿ ನಮನ ಸಲ್ಲಿಸಲಾಯಿತು. ಮಾಧುಸ್ವಾಮಿ ಸೇರಿದಂತೆ ಇನ್ನು ಕೆಲವರು ಸಂಚಾರಿ ವಿಜಯ್ ಬಗ್ಗೆ ಮಾತನಾಡಿ ಸಂತಾಪ ಸೂಚಿಸಿದರು.

ಖ್ಯಾತ ನಟ ಸಂಚಾರಿ ವಿಜಯ್ ನಿಧನರಾಗಿದ್ದು ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅಪಘಾತದಿಂದ ಅವರು ಅಕಾಲಿಕ ಮರಣಕ್ಕೆ (ಜೂ.15) ಒಳಗಾದರು. ಈಗ ಸದನದಲ್ಲೂ ಸಂಚಾರಿ ವಿಜಯ್ ಬಗ್ಗೆ ಪ್ರಸ್ತಾಪ ಆಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಜಯ್ ಸಾಧನೆ ಬಗ್ಗೆ ಮಾತನಾಡಿದರು.

ನಿನ್ನೆಯೇ ”ಸಂಚಾರಿ ವಿಜಯ್ ಅವರಿಗೆ ನಿನ್ನೆಯೇ ಸಂತಾಪ ಸಲ್ಲಿಸಬೇಕಾಗಿತ್ತು .ಆದ್ರೆ ಯಾಕೋ ಪಟ್ಟಿಯಲ್ಲಿರಲಿಲ್ಲ ಸಂಚಾರಿ ವಿಜಯ್ ಉತ್ತಮವಾದ , ಪ್ರತಿಭಾನ್ವಿತ ನಟರಾಗಿದ್ದರು” ಎಂದರು ಸಿದ್ದರಾಮಯ್ಯ.ರಾಷ್ಟ್ರ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಕರ್ನಾಟಕಕ್ಕೆ ಹೆಮ್ಮೆ ತಂದ ನಟನಿಗೆ ಸದನದಲ್ಲಿ ನಮನ ಸಲ್ಲಿಸಲಾಯಿತು.
****