ಎಲ್ಲಾ ಭಾಷೆಯನ್ನು ಗೌರವಿಸುತ್ತೇವೆ ಆದರೆ ಯಾವುದೂ ಕೂಡ ಹೇರಿಕೆ ಆಗಬಾರದು ಎಂದು ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಸಾಲು ಸಾಲು ಟ್ವಿಟ್ ಮಾಡಿದ್ದಾರೆ. ಅಂದ ಹಾಗೆ ಇವತ್ತು ದೇಶದಲ್ಲಿ ಹಿಂದಿ ದಿವಸ್ ಆಚರಣೆ ಕುರಿತು ಡಾಲಿ ಈ ರೀತಿ ಹೇಳಿದ್ದಾರೆ.

ಕನ್ನಡ ಕನ್ನಡ ಕನ್ನಡವೆಂದುಲಿ,
ಕನ್ನಡ ನಾಡಿನ ಓ ಕಂದ,
ಕನ್ನಡ ನಾಡಿನ ಕೀರ್ತಿಯ ಹಬ್ಬಿಸು,
ಕನ್ನಡ ತಾಯಿಗೆ ಆನಂದ. (ಬಾಲ್ಯದಲ್ಲಿ ಓದಿದ ಪದ್ಯವಾಗಿದೆ). ಎಲ್ಲ ಭಾಷೆಯನ್ನು ಗೌರವಿಸುತ್ತೇವೆ. ಆದರೆ ಯಾವುದೇ ಹೇರಿಕೆ ಸಲ್ಲದು ಎಂದು ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಇಂದು ಹಿಂದಿ ದಿವಸ ಆಚರಣೆಗೆ ಪ್ರಾದೇಶಿಕ ಭಾಷೆಗಳ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದಿ ಹೇರಿಕೆಯನ್ನು ನಿಲ್ಲಿಸಿ ಎಂಬ ಹ್ಯಾಶ್ ಟ್ಯಾಗ್ ಎಲ್ಲೆಡೆ ಟ್ರೆಂಡ್ ಆಗಿದ್ದು, ವಿವಿಧ ರಂಗದ ತಾರೆಯರು ಇದಕ್ಕೆ ದನಿಗೂಡಿಸಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟ, ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ನಟಿಸುತ್ತಿರುವ ಧನಂಜಯ, ಟ್ವೀಟ್ಗಬಳ ಮೂಲಕ ಹಿಂದಿ ಹೇರಿಕೆಯ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
****