ಬಿಗ್ ಬಾಸ್ ಸೀಸನ್-8 ಸ್ಪರ್ಧಿಯಾಗಿದ್ದ, ಮುಗ್ಧತೆ, ಮನರಂಜನೆಗೆ ಮುಕುಟವೆಂಬಂತೆ ಖ್ಯಾತಿಗಳಿಸಿ ಬಂದಂತಹ ನಟಿ ಶುಭಾ ಪೂಂಜಾ ಈಗ ಲಂಬಾಣಿ ಹುಡುಗಿಯಾಗಿ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.

ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಶುಭಾಪೂಂಜಾ ಸಿನಿಮಾವನ್ನು ನಿರ್ಮಾಣಮಾಡಿ ನಟನೆಯನ್ನು ಕೂಡ ಮಾಡಿದರು. ಈಗ ಬಿಗ್ ಬಾಸ್ ನಿಂದ ಹೊರಬಂದ ನಂತರ ಶುಭಾಪೂಂಜಾ ‘ಅಂಬುಜ’ ಎಂಬ ಹೊಸ ಚಿತ್ರದಲ್ಲಿ ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರುವ ತಯಾರಿಯಲ್ಲಿದ್ದಾರೆ.

ಅಂಬುಜ ಚಿತ್ರ ಹಾರರ್ ಕಥೆಯನ್ನು ಒಳಗೊಂಡಿದ್ದು, ಅದರಲ್ಲಿ ಶುಭಾ ಪ್ರಧಾನ ಪಾತ್ರದಲ್ಲಿ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ಶೇಡ್ ಲಂಬಾಣಿ ಹುಡುಗಿಯಾಗಿ, ಮತ್ತೊಂದು ಶೇಡದ ಪತ್ರಕರ್ತೆಯಾಗಿ ಶುಭಾ ಸ್ಕ್ರೀನ್ ಮೇಲೆ ಬರಲಿದ್ದಾರೆ. ಪಾತ್ರಕ್ಕೆ ತಕ್ಕಂತೆ ಶುಭಪುಂಜ ಲಂಬಾಣಿ ಹುಡುಗಿಯ ಉಡುಪಿನಲ್ಲಿ ಅಲಂಕಾರಗೊಂಡಿದ್ದಾರೆ. ಆ ಉಡುಪನ್ನು ಸಿದ್ಧಪಡಿಸಲು ಸತತ ನಾಲ್ಕು ತಿಂಗಳುಗಳ ಕಾಲ ಸಮಯ ಇಡಿದಿದ್ದು, ಗದಗ ಜಿಲ್ಲೆಯ ಲಂಬಾಣಿಗಳು ಉಡುಪನ್ನು ತಯಾರಿಸಿದ್ದಾರೆ ಮತ್ತು ಅದರ ತೂಕ ಬರೋಬ್ಬರಿ 20 ಕೆಜಿ ಇದೆಯಂತೆ.

ಇನ್ನೂ ಈ ಸಿನಿಮಾ ರಾಯಚೂರಿನಲ್ಲಿ ನಡೆದಂತಹ ಘಟನೆಯೊಂದನ್ನು ಆಧರಿಸಿ ನಿರ್ಮಾಣವಾಗುತ್ತಿದ್ದು, ವಿಜ್ಞಾನ ಬೆಳೆದಂತೆಲ್ಲ ಮೌಢ್ಯತೆ ಮರೆಯಾಗಬೇಕು ಆದರೆ ಮೌಢ್ಯಕ್ಕೆ ಬಡವರ ಮುಗ್ಧ ಮಕ್ಕಳನ್ನು ಹೇಗೆ ದುರುಪಯೋಗವಾಗುತ್ತಿದ್ದಾರೆ ಎಂಬುದನ್ನು ಈ ಸಿನಿಮಾದ ಮೂಲಕ ತೋರಿಸಲಾಗುತ್ತಿದೆ. ಈ ಚಿತ್ರದ ಚಿತ್ರೀಕರಣ ಗದಗದಲ್ಲಿರುವ ಲಂಬಾಣಿ ತಂಡ ಹಾಗೂ ಚಿಕ್ಕಮಗಳೂರಿನ ಸ್ಥಳಗಳಲ್ಲಿ ನಡೆಯಲಿದೆ ಎಂದು ಸಿನಿಮಾದ ನಿರ್ಮಾಪಕರಾದ ಕಾಶಿನಾಥ್ ಮಡಿವಾಳರ್ ಹೇಳಿದ್ದಾರೆ.
ಸಿನಿಮಾ ಅಂದ್ರೆ ಅಲ್ಲಿ ಕಾಮಿಡಿ ಇದ್ರೇನೆ ಚೆಂದ ಹಾಗಾಗಿ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನ ಗೋವಿಂದೇಗೌಡ, ಪ್ರಿಯಾಂಕ ಮತ್ತಿತರರು ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು ಅನನ್ಯ ಭಟ್, ಅನುರಾಧಾ ಭಟ್, ರಾಜೇಶ್ ಕೃಷ್ಣನ್ ಹಾಗೂ ಎಂ. ಡಿ. ಪಲ್ಲವಿ ಹಾಡುಗಳನ್ನು ಹಾಡಿದ್ದು, ಪ್ರಸನ್ನಕುಮಾರ್ ಅಂಬುಜ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
****