ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಮತ್ತು ಕುತೂಹಲ ಕೆರಳಿಸಿರುವ ಹೆಡ್ ಬುಷ್ ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ಇತ್ತೀಚೆಗೆ ವಸಿಷ್ಠ ಸಿಂಹ ಕೂಡ ಹೆಡ್ ಬುಷ್ ಚಿತ್ರದಲ್ಲಿ ನಟಿಸುತ್ತಿರುವ ಮಾಹಿತಿ ಹೊರಬಿದ್ದ ಬೆನ್ನಲ್ಲೆ ಈಗ ಮತ್ತೋರ್ವ ನಟನ ಆಗಮನದ ಮಾಹಿತಿಯನ್ನ ಡಾಲಿ ದನಂಜಯ್ ಅವರು ತಮ್ಮ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಮೋಸ್ಟ್ ಹ್ಯಾಂಡ್ ಸಮ್ ಆಂಡ್ ಟ್ಯಾಲೆಂಟೆಡ್ ನಟ ರಘು ಮುಖರ್ಜಿ ಹೆಡ್ ಬುಷ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನ ಹಿಡಿದಿಡುವ ಕಲೆಯನ್ನು ರಘು ಮುಖರ್ಜಿ ಅವರು ಕರಗತ ಮಾಡಿಕೊಂಡಿದ್ದಾರೆ. ಎಂತಹ ಪಾತ್ರಕ್ಕೂ ಜೀವ ತುಂಬಬಲ್ಲ ತಾಕತ್ತು ರಘು ಅವರದು, ಕಣ್ಣಿನಲ್ಲೆ ತಮ್ಮ ನಟನೆಯನ್ನ ನೋಡುಗರ ಹೃದಯಕ್ಕೆ ತಲುಪಿಸುವ ನಟನಾ ಕೌಶಲ್ಯ ರಘು ಅವರಿಗಿದೆ. ಸೋ ಈಗ ಹೆಡ್ ಬುಷ್ ಚಿತ್ರದಲ್ಲಿ ನಟಿಸುತ್ತಿರುವ ರಘು ಅವರ ಪಾತ್ರ ಏನಿರಬಹುದು ಎಂದು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.

ಹೆಡ್ ಬುಷ್ ಚಿತ್ರ ತಂಡ ಒಂದೊಂದೇ ಎಳೆಯನ್ನ ಬಿಟ್ಟು, ಪಾತ್ರ ವರ್ಗ ಮತ್ತು ಚಿತ್ರದ ಬಗ್ಗೆ ಸೆನ್ಸೇಷನ್ ಕ್ರಿಯೇಟ್ ಮಾಡಿ ಅಭಿಮಾನಿಗಳಿಗೆ ಫುಲ್ ಥ್ರಿಲ್ ಕೊಡುತ್ತಿದ್ದು, ಅಂಡರ್ವರ್ಲ್ಡ್ ಡಾನ್ ಆಗಿದ್ದ ಜಯರಾಜ್ ಜೀವನ ಕಥೆ ಆಧರಿಸಿ ಸಿದ್ಧವಾಗುತ್ತಿರುವ‘ಹೆಡ್ ಬುಷ್’ ಸಿನಿಮಾ ತೆರೆ ಮೇಲೆ ಬರುವವರೆಗು ಚಿತ್ರ ತಂಡ ಇನ್ನು ಏನೇನು ಸರ್ಪ್ರೈಸ್ ಕೊಡುತ್ತದೊ ಕಾದುನೋಡಬೇಕಿದೆ.

****