ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 55 ನೇ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ. ಡಿ ಬಾಸ್ ಹೊಸ ಸಿನಿಮಾಗೆ ‘ಕ್ರಾಂತಿ’ ಎಂದು ಹೆಸರಿಡಲಾಗಿದೆ. ಹೆಸರಿನಲ್ಲೇ ಒಂದು ಅಗ್ರೆಷನ್ ಇದೆ. ಜೊತೆಗೆ ಫಸ್ಟ್ ಲುಕ್ ನಲ್ಲಿ ದರ್ಶನ್ ಲುಕ್ ಕೂಡಾ ರಗಡ್ ಆಗಿದೆ.ಇದು ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ. ವಿ. ಹರಿಕೃಷ್ಣ ನಿರ್ದೇಶನದಲ್ಲಿ ಈ ಸಿನಿಮಾ ಅದ್ಧೂರಿಯಾಗಿ ಮೂಡಿಬರಲಿದೆ.

ರಾಬರ್ಟ್ ಸಿನಿಮಾ ನಂತರ ದರ್ಶನ್ ಅವರು ಯಾವ ಸಿನಿಮಾ ಮಾಡ್ತಾರೆ ಎಂದು ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ದರ್ಶನ್ ಅಭಿನಯದ 55ನೇ ಸಿನಿಮಾವನ್ನು ಶೈಲಜಾ ನಾಗ್ ಮತ್ತು ಬಿ. ಸುರೇಶ ಅವರ ಮೀಡಿಯಾ ಹೌಸ್ ಸ್ಟುಡಿಯೋ ನಿರ್ಮಾಣ ಮಾಡಲಿದೆ. ಈ ವಿಚಾರವನ್ನು ಶೈಲಜಾ ನಾಗ್ ಅಧಿಕೃತವಾಗಿ ತಿಳಿಸಿದ್ದಾರೆ. ಈ ಹಿಂದೆ ದರ್ಶನ್ ನಾಯಕತ್ವದಲ್ಲಿ ‘ಯಜಮಾನ’ ಸಿನಿಮಾವನ್ನು ಮೀಡಿಯಾ ಹೌಸ್ ಸ್ಟುಡಿಯೋ ನಿರ್ಮಾಣ ಮಾಡಿತ್ತು. ಅ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು.
****