ಸ್ಯಾಂಡಲ್ ವುಡ್ ನ ಕಿಚ್ಚ ಸುದೀಪ್ ಸೆಪ್ಟಂಬರ್ 2ರಂದು ತಮ್ಮ 49ನೇ ಹುಟ್ಟುಹಬ್ಬವನ್ನು ಆಪ್ತ ಸ್ನೇಹಿತರೊಂದಿಗೆ ಮತ್ತು ಕುಟುಂಬದವರೊಂದಿಗೆ ಆಚರಿಸಿಕೊಂಡಿದ್ದರು. ಕೊರೊನಾ ಭೀತಿಯ ಹಿನ್ನಲೆಯಲ್ಲಿ ಸಾರ್ವಜನಿಕವಾಗಿ ತಮ್ಮ ಅಭಿಮಾನಿಗಳೊಂದಿಗೆ ಜನ್ಮ ದಿನವನ್ನು ಆಚರಿಸಲು ಸಾಧ್ಯವಾಗದಿದ್ದಕ್ಕೆ ಸ್ವತಃ ಸುದೀಪ್ ಅವರು ಬೇಸರ ಮಾಡಿಕೊಂಡಿದ್ದರು. ಅಭಿಮಾನಿಗಳಿಗೆ ತಾವು ಇರುವ ಜಾಗದಿಂದಲೇ ವಿಶ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು.

ಇಂದು (ಸೆ.3) ಶುಕ್ರವಾರ ಮುಂಜಾನೆಯೇ ಕಿಚ್ಚ ಸುದೀಪ್ ತಮ್ಮ ಕುಟುಂಬ ಸಮೇತರಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ದರ್ಶನ ಮಾಡಿ ಆಶಿರ್ವಾದ ಪಡೆದಿದ್ದಾರೆ. ಚಾಮುಂಡಿ ತಾಯಿತ ದರ್ಶನ ಪಡೆದು ಹೊರಬಂದ ಕಿಚ್ಚ ಸುದೀಪ್ ರನ್ನು ನೋಡಲು ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಇದೇ ವೇಳೆ ತಮ್ಮ ನೆಚ್ಚಿನ ನಟನಿಗೆ ಜೈಕಾರ ಕೂಗಿ ಹರ್ಷ ವ್ಯಕ್ತಪಡಿಸಿದರು.
****