ರಾಷ್ಟ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಟನೆಯ ‘ಪುಕ್ಸಟ್ಟೆಲೈಫು’ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ‘ಪುರುಸೊತ್ತೇ ಇಲ್ಲ’ ಎಂಬ ಟ್ಯಾಗ್ಲೈನ್ ಇರುವ ಈ ಚಿತ್ರವನ್ನು ಅರವಿಂದ ಕುಪ್ಳೀಕರ್ ನಿರ್ದೇಶಿಸಿದ್ದಾರೆ, ನಾಗರಾಜ ಸೋಮಯಾಜಿ ನಿರ್ಮಿಸಿದ್ದಾರೆ.

ಈಗಾಗಲೇ ಬಿಡುಗಡೆ ಮಾಡಿರುವ ಮೋಷನ್ ಪೋಸ್ಟರ್ನಲ್ಲಿ ಬೀಗ ರಿಪೇರಿ ಮಾಡುವ ಯುವಕನ ಪಾತ್ರದಲ್ಲಿ ವಿಜಯ್ ಕಾಣಿಸಿಕೊಂಡಿದ್ದಾರೆ. ಸುಲ್ತಾನ್ ಕೀ ಮೇಕರ್ಸ್ ಎಂಬ ಆತನ ಪೆಟ್ಟಿಅಂಗಡಿ, ಬಾಡಿಗೆಗೆ ಇದೆ ಬೋರ್ಡ್ ಹಾಕಿರುವ ಪೊಲೀಸ್ ಸ್ಟೇಶನ್ ಕುತೂಹಲ ಕೆರಳಿಸುತ್ತದೆ.ಇಡೀ ಟ್ರೇಲರ್ ನಲ್ಲಿ ಸಂಚಾರಿ ವಿಜಿ ಆವರಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ರಂಗಾಯಣ ರಘು, ಮಾತಂಗಿ ಪ್ರಸನ್ನ ಸೇರಿದಂತೆ ಇನ್ನು ಹಲವು ಕಲಾವಿದರ ದಂಡೇ ಇದೆ.

ಟ್ರೈಲರ್ ನೋಡಿರುವ ಸಂಚಾರಿ ವಿಜಯ್ ಅಭಿಮಾನಿಗಳು ವಿಜಯ್ ಅವರು ಅಭಿನಯಿಸಿರುವ ಚಿತ್ರಗಳ ಮೂಲಕ ಸದಾ ನಮ್ಮೊಂದಿಗೆ ಇರುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ವಿಜಯ್ ಅವರನ್ನು ನೆನೆದು ಭಾವುಕರಾಗಿದ್ದಾರೆ ನಮ್ಮೊಂದಿಗೆ ಇಲ್ಲವಾದರೂ ನೀವು ಅಭಿನಯಿಸಿರುವ ಸಿನಿಮಾಗಳ ಮೂಲಕ ನಮ್ಮೆಲ್ಲರ ಮನಸ್ಸಿನಲ್ಲಿ ಹಸಿರಾಗಿರುತ್ತೀರಿ ಎಂದು ಹೇಳಿದ್ದಾರೆ.
****