ಭಾರತದ ಚಿತ್ರೋಧ್ಯಮ ಇಂದು ಡ್ರಗ್ ದಂಧೆಯಸುಳಿಯಲ್ಲಿ ಸಿಲುಕಿದೆ ಎಂಬುದಕ್ಕೆ ಪ್ರಸಕ್ತ ನಡೆಯುತ್ತಿರುವ ವಿದ್ಯಮಾನಗಳೇ ಸಾಕ್ಷಿ, ಚಿತ್ರರಂಗದ ಜೊತೆ ಡ್ರಗ್ ದಂಧೆಯ ಸಂಬಂಧ ತುಂಬ ಆಳವಾಗಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಒದಗುತ್ತಿವೆ. ಪೊಲೀಸರು ತನಿಖೆ ಮಾಡಿದಂತೆಲ್ಲಾ ಹೊಸ ನಟ ನಟಿಯರ ಹೆಸರು ತಳುಕಿಹಾಕಿಕೊಳ್ಳುತ್ತಿದೆ.

ಇಂದು ಬೆಳಗ್ಗಿನ ಜಾವವೇ ಪೊಲೀಸರು ಕೆಲವು ಸೆಲೆಬ್ರೆಟಿ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಗೋವಿಂದಪುರ ಡ್ರಗ್ಸ್ ಕೇಸ್ಗೆ ಸಂಬಂಧಿಸಿದಂತೆ ಪೂರ್ವ ವಿಭಾಗದ ಪೊಲೀಸರು ಈ ದಾಳಿ ನಡೆಸಿದ್ದಾರೆ. ನಟಿ ಸೋನಿಯಾ ಅಗರ್ವಾಲ್, ಡಿಜೆ ವಚನ್ ಚಿನ್ನಪ್ಪ, ಉದ್ಯಮಿ ಭರತ್ ಮುಂತಾದವರ ಮನೆಯಲ್ಲಿ ಶೋಧಕಾರ್ಯ ನಡೆಯುತ್ತಿದೆ. ರಾಜಾಜಿನಗರ, ಬೆನ್ಸನ್ ಟೌನ್, ಪದ್ಮನಾಭನಗರ ಮೊದಲಾದ ಏರಿಯಾಗಳಲ್ಲಿ ಇರುವ ಸೆಲೆಬ್ರೆಟಿ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಒಂದು ವೇಳೆ ಶೋಧಕಾರ್ಯದಲ್ಲಿ ಮಾದಕ ವಸ್ತುಗಳು ಸಿಕ್ಕರೆ ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ. ಡ್ರಗ್ ಪೆಡ್ಲರ್ ಥಾಮಸ್ ಈ ಹಿಂದೆ ನೀಡಿದ್ದ ಮಾಹಿತಿಯನ್ನು ಆಧರಿಸಿ ಪೊಲೀಸರು ಈ ಕಾರ್ಯಾಚರಣೆ ಮಾಡುತ್ತಿದ್ದಾರೆ.

ಕನ್ನಡದ ನಟಿಯರಾದ ರಾಗಿಣಿ ಮತ್ತು ಸಂಜನಾ ಅವರನ್ನು ಕಳೆದ ವರ್ಷ ಬಂಧಿಸಲಾಗಿತ್ತು. ಬಳಿಕ ಇಬ್ಬರು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇತ್ತೀಚಿಗಷ್ಟೆ ಇಬ್ಬರ ಹೇರ್ ಸ್ಯಾಂಪಲ್ ವರದಿ ಬಂದಿದ್ದು ಇಬ್ಬರೂ ಡ್ರಗ್ಸ್ ಸೇವಿಸಿರುವುದು ದೃಢವಾಗಿದೆ.
****