ಇತ್ತೀಚೆಗೆ ‘ನೀ ಸಿಗೋವರೆಗೂ’ ಸಿನಿಮಾದ ಮುಹೂರ್ತದ ಪ್ರೆಸ್ ಮೀಟ್ ಸಂದರ್ಭದಲ್ಲಿ ಕಿಚ್ಚ ಸುದೀಪ್ ಗೆಸ್ಟ್ ಆಗಿ ಬಂದು ಶಿವಣ್ಣನ ಬಗ್ಗೆ ಮಾತನಾಡುತ್ತಾ ಶಿವಣ್ಣನ ಬಗ್ಗೆ ನನಗೆ ಬಹಳ ಜಲಸ್ ಆಗತ್ತೆ ಕಾರಣ ಏನಂದ್ರೆ ಶಿವಣ್ಣ ಅವರಿಗೆ 59 ವರ್ಷ ವಯಸ್ಸಾಗಿದ್ರು 124 ಸಿನಿಮಾ ಮಾಡಿದ್ರೂ ಇನ್ನು ಲವ್ ಸ್ಟೋರಿ ಇರುವ ಲವರ್ ಬಾಯ್ ಸಿನಿಮಾಗಳು ಸಿಕ್ತಿವೆ, ಆದ್ರೆ ನಮ್ಗೆ ಈಗಾಗ್ಲೆ ಯಾರೂ ಲವರ್ ಬಾಯ್ ಸಿನಿಮಾ ಅಲ್ಲಾ ಕಡೇ ಪಕ್ಷ ಲವ್ ಸೀನ್ ಡ್ಯೂಯೇಟ್ ಸಾಂಗ್ಸ್ ನೇ ಕೊಡ್ತಿಲ್ಲಾ ಅಂತ ಸುದೀಪ್ ಶಿವಣ್ಣ ಅವರನ ಛೇಡಿಸಿದ್ರು. ಹೌದು ಶಿವಣ್ಣ ಅವರಿಗೆ ವಯಸ್ಸು 59 ತುಂಬಿದ್ರು ಇನ್ನು ಯಂಗ್ ಆಂಡ್ ಎನರ್ಜಿಟಿಕ್ ಬಾಯ್ ರೀತಿ ಶಿವಣ್ಣ ಗಮನ ಸೆಳೆಯುತ್ತಾರೆ.

‘ನೀ ಸಿಗೋವರೆಗೂ’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಡಿಫರೆಂಟ್ ಹೇರ್ ಸ್ಟೈಲ್ ಮತ್ತು ಡಿಫರೆಂಟ್ ಕಾಸ್ಟ್ಯೂಮ್ಸ್ ನಿಂದ ಗಮನ ಸೆಳೆಯುತ್ತಿದ್ದಾರೆ. ‘ಇದೊಂದು ಎಮೋಷನಲ್ ಲವ್ ಸ್ಟೋರಿ. ನನ್ನದು ಇದರಲ್ಲಿ ಎರಡು ರೀತಿ ಪಾತ್ರ. ನಿರ್ದೇಶಕರು ಚಿತ್ರಕಥೆ ಹೆಣೆದಿರುವ ರೀತಿ ತುಂಬಾ ಚೆನ್ನಾಗಿದೆ. ಮಫ್ತಿ, ಟಗರು, ದಿ ವಿಲನ್ ಥರದ ಡಿಫರೆಂಟ್ ಸಿನಿಮಾಗಳನ್ನು ಮಾಡಿದ್ದೇನೆ. ಈಗ ಲವ್ ಸ್ಟೋರಿ ಸಿನಿಮಾ ಮಾಡ್ತಾ ಇದ್ದೇನೆ. ಈ ಸಿನಿಮಾ ಟೈಟಲ್ ನಾನೇ ಸಜೆಸ್ಟ್ ಮಾಡಿದೆ. ಸಿನಿಮಾದಲ್ಲಿ ಒಂದು ಹುಡುಕಾಟ ಇದೆ. ಹಾಗಾಗಿ, ಒಂದು ಐಡಿಯಾ ಬಂತು. ನಮ್ಮ ‘ಭಜರಂಗಿ 2’ ಸಿನಿಮಾದಲ್ಲಿ ‘ನೀ ಸಿಗೋವರೆಗೂ’ ಅಂತ ಒಂದು ಹಾಡು ಇದೆ. ಅದು ನನಗೆ ಇಷ್ಟ. ಈ ಸಿನಿಮಾಗೆ ‘ನೀ ಸಿಗೋವರೆಗೂ‘ ಅನ್ನೋದು ಸೂಟ್ ಆಗ್ತಾ ಇತ್ತು. ಅದಕ್ಕೆ ನಾನೇ ಸಜೆಸ್ಟ್ ಮಾಡಿದೆ’ ಎಂದು ಈ ಸಿನಿಮಾದ ಬಗ್ಗೆ ಶಿವಣ್ಣ ಹೇಳಿಕೊಂಡಿದ್ದರು.

ಶಿವಣ್ಣ ಅವರು ಸ್ಯಾಂಡಲ್ ವುಡ್ ನ ಸಕತ್ ಬ್ಯೂಸಿ ನಟ ಅವರಿಗೆ ಎಲ್ಲ ರೀತಿಯ ಪಾತ್ರಗಳನ್ನು ಮಾಡಿ ಅನುಭವ ಈ 59 ರ ವಯಸ್ಸಿನಲ್ಲೂ ಇನ್ನು ಕಾಲೇಜು ಹುಡುಗನಂತೆ ಕಂಗೊಳಿಸುವ ಶಿವಣ್ಣನ ಲುಕ್ ಗೆ ಫ್ಯಾನ್ಸ್ ಪುಲ್ ಫಿದಾ ಆಗಿದ್ದಾರೆ. ಲಾಂಗ್ ಹಿಡಿದು ಮಾಸ್ ಲುಕ್ಕಿಗೂ ಸೈ, ರೋಸ್ ಹಿಡಿದು ಕ್ಲಾಸ್ ಲುಕ್ಕಿಗೂ ಜೈ ಎನ್ನುವಂತಿರುತ್ತೆ ಶಿವಣ್ಣ ಅವರ ಎನರ್ಜಿ. ಹಾಗಾಗಿ ಶಿವಣ್ಣ ಅಭಿಮಾನಿಗಳು ಪ್ರೀತಿಯಿಂದ ಕೇಳ್ತಿರ್ತಾರೆ ‘ನಮ್ ಶಿವಣ್ಣನಿಗೆ ವಯಸ್ಸೇ ಆಗಲ್ವಾ’ ಅಂತ..! ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಅಭಿನಯದ 122ನೇ ಸಿನಿಮಾ ‘ಭಜರಂಗಿ 2’ ಇನ್ನೂ ತೆರೆಕಾಣಬೇಕಿದೆ. ಆಗಲೇ ಅವರ 127ನೇ ಸಿನಿಮಾ ಕೂಡ ಅನೌನ್ಸ್ ಆಗಿದೆ. ಅಭಿಮಾನಿಗಳಿಗೆ ಮಾತ್ರವಲ್ಲದೆ ಇಂಡಸ್ಟ್ರೀಯವರಿಗೂ ಶಿವಣ್ಣನನ್ನು ಕಂಡರೆ ಇನ್ನಿಲ್ಲದ ಪ್ರೀತಿ.
****