21.8 C
Bengaluru
Wednesday, November 30, 2022
spot_img

ಬರ್ತ್ ಡೇ ದಿನ ಫ್ಯಾನ್ಸ್ ನಿಂದ ದೂರ: ಸಾರಿ ಕೇಳಿದ ಅಭಿನಯ ಚಕ್ರವರ್ತಿ..!

ಸೆಪ್ಟಂಬರ್ 2 ಅಭಿನಯ ಚಕ್ರವರ್ತಿ ಸುದೀಪ್ ಅವರ ಹುಟ್ಟುಹಬ್ಬ. ಆ ದಿನ ತಮ್ಮ ನೆಚ್ಚಿನ ನಟನನ್ನು ಭೇಟಿ ಮಾಡಬೇಕು ಎಂದು ಅಭಿಮಾನಿಗಳೆಲ್ಲರೂ ಕಾಯುತ್ತಿರುತ್ತಾರೆ. ಆದರೆ ಕೊರೊನಾ ಕಾರಣದಿಂದ ಸುದೀಪ್ ಅವರು ಯಾರನ್ನು ಭೇಟಿಯಾಗದಿರಲು ನಿರ್ಧರಿಸಿದ್ದಾರೆ, ಆ ಕಾರಣಕ್ಕೆ ಕ್ಷಮೆಯನ್ನು ಕೇಳಿದ್ದಾರೆ.

ಹೌದು ಇದೇ ಸೆಪ್ಟಂಬರ್ 2 ಕ್ಕೆ ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ 50 ನೇ ವರ್ಷದ ಜನುಮ ದಿನದ ಸಂಭ್ರಮ. ಪ್ರತಿ ವರ್ಷ ಕಿಚ್ಚನ ಹುಟ್ಟುಹಬ್ಬ ಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಕಿಚ್ಚ ನ ಅಭಿಮಾನಿಗಳು ಸುದೀಪ್ ಅವರನ್ನು ಭೇಟಿ ಮಾಡಿ ಶುಭಾಶಯಗಳನ್ನು ತಿಳಿಸಿ ತಮ್ಮ ನಾಯಕನ ಹುಟ್ಟುಹಬ್ಬವನ್ನು ವಿಜೃಂಬಣೆಯಿಂದ ಅದ್ದೂರಿಯಾಗಿ ಆಜರಣೆ ಮಾಡುತ್ತಿದ್ದರು. ಆದರೆ ಕಳೆದ ವರ್ಷ ಮತ್ತು ಈ ವರ್ಷ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಕಳೆದ ರಡು ವರ್ಷದಿಂದ ಕೋವಿಡ್ ಇರುವ ಕಾರಣ ಹೆಚ್ಚು ಜನರು ಸೇರಲು ಆಗುತ್ತಿಲ್ಲ. ಆಗಾಗಿ ಸುದೀಪ್ ಅವರು ಟ್ವೀಟ್ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.  ‘ಅಭಿಮಾನಿಗಳ ಆರೋಗ್ಯವೇ ಮುಖ್ಯ’ ಎಂದಿದ್ದಾರೆ.

ಕಿಚ್ಚನ ಕಾಳಜಿಯ ಸಂದೇಶ

ಸೆಪ್ಟಂಬರ್ 2 ರಂದು ಕಿಚ್ಚನ ಜನ್ಮ ದಿನ ಇರುವ ಕಾರಣ ತನ್ನ ಅಭಿಮಾನಿಗಳು ಜಾಗೃತರಾಗಿ ತಾವು ಇರುವ ಜಾಗದಿಂದಲೇ ತಮ್ಮ ಅಭಿಮಾನದ ವಿಶ್ ಅನ್ನು ತಿಳಿಸುವಂತೆ ಮನವಿ ಮಾಡಿದ್ದಾರೆ. ಕಿಚ್ಚ ನ ಸಂದೇಶ ಹೀಗಿದೆ “ನನ್ನೆಲ್ಲಾ ಪ್ರೀತಿಯ ಅಭಿಮಾನಿ ಸ್ನೇಹಿತರಲ್ಲಿ ಮನವಿ.. ಕೋವಿಡ್ ಸಂಕಷ್ಟದ ಈ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ಈ ವರ್ಷವೂ ನಾನು ನನ್ನ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಿಕೊಳ್ಳಲು ಆಗುತ್ತಿಲ್ಲ. ನೀವು ಇದ್ದಲ್ಲಿಂದಲೇ ನಿಮ್ಮ ಪ್ರೀತಿ ತುಂಬಿದ ಶುಭಾಶಯಗಳನ್ನು ತಿಳಿಸಿ. ನಿಮ್ಮ ಆರೋಗ್ಯವೇ ನನಗೆ ಮುಖ್ಯ” ಎಂದು ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಸಂದೇಶ ಕೊಟ್ಟಿದ್ದಾರೆ.

ಸುದೀಪ್​ ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳು ಕೂಡ ಹುಟ್ಟುಹಬ್ಬದ ಆಚರಣೆಯನ್ನು ಕ್ಯಾನ್ಸಲ್​ ಮಾಡಿಕೊಂಡಿದ್ದಾರೆ. ಸ್ಟಾರ್​ ನಟರ ಬರ್ತ್​ಡೇ ಸೆಲೆಬ್ರೇಷನ್​ ಎಂದರೆ ಅಲ್ಲಿ ಸಾವಿರಾರು ಜನರು ಸೇರುತ್ತಾರೆ. ಅದರಿಂದ ಕೋವಿಡ್​ ಹರಡುವ ಸಾಧ್ಯತೆ ದಟ್ಟವಾಗಿರುತ್ತದೆ. ಹಾಗಾಗಿ ಅಭಿಮಾನಿಗಳ ಆರೋಗ್ಯದ ದೃಷ್ಟಿಯಿಂದ ಸಂಭ್ರಮಾಚರಣೆಗೆ ಬ್ರೇಕ್​ ಹಾಕುವುದೇ ಉತ್ತಮ ಎಂದು ಎಲ್ಲ ಸೆಲೆಬ್ರಿಟಿಗಳು ಕಳೆದೊಂದು ವರ್ಷದಿಂದ ನಿರ್ಧರಿಸಿ, ಅದನ್ನೇ ಫಾಲೋ ಮಾಡುತ್ತಾ ಬಂದಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles