ಶ್ರೀನಿ ಅಭಿನಯದ “ಓಲ್ಡ್ ಮಾಂಕ್’ ಸಿನಿಮಾದ ಮೊದಲ ಟ್ರೇಲರ್ ಕೂಡ ಈ ವಾರ ಹೊರಬಂದಿದ್ದು, ಪವರ್‌ಸ್ಟಾರ್ ಪುನೀತ್ ರಾಜಕುಮಾರ್ “ಓಲ್ಡ್ ಮಾಂಕ್’ ನ ಟ್ರೇಲರ್ ಬಿಡುಗಡೆಗೊಳಿಸಿದ್ದಾರೆ.ಇದೇ ವೇಳೆ ಮಾತನಾಡಿದ ಪುನೀತ್ ರಾಜಕುಮಾರ್, “ಶ್ರೀನಿ ಹಿಂದಿನ ಸಿನಿಮಾಗಳನ್ನು ನೋಡಿದ್ದೆ. ಡಬಲ್ ಮೀನಿಂಗ್‌ನಂತಿದ್ದರೂ, ಈ ಟ್ರೇಲರ್ ನಲ್ಲಿರುವ ಡೈಲಾಗ್ಸ್ ಚೆನ್ನಾಗಿದೆ.ಈ ಸಿನಿಮಾಕೂಡ ಹಾಗೇಚೆನ್ನಾಗಿರುತ್ತದೆ ಎಂಬ ನಂಬಿಕೆ ಇದೆ’ ಎಂದು ಹಾರೈಸಿದರು.

ಚಿತ್ರದ ಬಗ್ಗೆ ಮಾತನಾಡಿದ ನಾಯಕ ಮತ್ತು ನಿರ್ದೇಶಕ ಶ್ರೀನಿ, “ವೈಕುಂಠದಲ್ಲಿ ಮಹಾವಿಷ್ಣು ಹಾಗೂ ನಾರದರ ಸಂಭಾಷಣೆ ಮೂಲಕ ಈ ಸಿನಿಮಾದ ಕಥೆ ಶುರುವಾಗುತ್ತದೆ. ಸಾಕಷ್ಟುಟೈಟಲ್ ಹುಡಕಾಟನಡೆದ ನಂತರ ಸಿನಿಮಾದ ಸಬ್ಜೆಕ್ಟ್ ಸೂಕ್ತವೆಂಬ ಕಾರಣಕ್ಕೆ “ಓಲ್ಡ್ ಮಾಂಕ್’ ಟೈಟಲ್ ಸೆಲೆಕ್ಟ್ ಮಾಡಿದ್ದೇವೆ. ಇದೊಂದು ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಸಿನಿಮಾ. ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು
ಇನ್ನು ಅದಿತಿ ಪ್ರಭುದೇವ “ಓಲ್ಡ್ ಮಾಂಕ್’ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. “ಇಲ್ಲಿಯವರೆಗೆ ನಾನು ಮಾಡಿದ ಸಿನಿಮಾಗಳಿಗಿಂತ ವಿಭಿನ್ನ ಪಾತ್ರ ಮತ್ತು ಸಬ್ಜೆಕ್ಟ್ಈ ಸಿನಿಮಾದಲ್ಲಿದೆ. ತುಂಬ ಖುಷಿಯಿಂದ ಈ ಸಿನಿಮಾ ಮಾಡಿದ್ದೇವೆ. ನೋಡುಗರಿಗೂ ಸಿನಿಮಾ ಅಷ್ಟೇ ಖುಷಿ ಕೊಡುತ್ತದೆ. “ಓಲ್ಡ್ ಮಾಂಕ್’ ಮೇಲೆ ತುಂಬ ನಿರೀಕ್ಷೆ ಇದೆ’ ಅನ್ನೋದು ಚಿತ್ರದ ನಾಯಕಿ ಅದಿತಿ ಅವರ ಮಾತು.
ಇನ್ನುಳಿದಂತೆ ಹಿರಿಯ ನಟ ರಾಜೇಶ್, ಸುನೀಲ್ ರಾವ್, ಸುಜಯ್ ಶಾಸ್ತ್ರಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. “ಓಲ್ಡ್ ಮಾಂಕ್’ ಹಾಡುಗಳಿಗೆ ಸೌರಭ್- ವೈಭವ್ ಸಂಗೀತ, ಪ್ರಸನ್ನ ಸಂಭಾಷಣೆ ಇದೆ.
****