ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಶ್ರೀಮುರಳಿ ಅಭಿನಯದ ‘ಮದಗಜ’ ಸಿನಿಮದ ಚಿತ್ರೀಕರಣ ಇಂದು ಪೂರ್ಣಗೊಂಡಿದ್ದು, ಚಿತ್ರದ ಶೂಟಿಂಗ್ ಕಂಪ್ಲೀಟ್ ಆದ ಕಾರಣ ಇಡೀ ಚಿತ್ರ ತಂಡ ಕೇಕ್ ಕತ್ತರಿಸಿ ಸಂತಸ ಹಂಚಿಕೊಂಡಿದೆ.
ಮದಗಜ ಚಿತ್ರದ ಶೂಟಿಂಗ್ ಉತ್ತರ ಪ್ರದೇಶದ ವಾರನಾಸಿ, ಹೈದರಾಬಾದ್, ಬೆಂಗಳೂರು ಮತ್ತು ಮೈಸೂರಿನಲ್ಲಿ ಮೂರು ಹಂತಗಳಲ್ಲಿ ನಡೆದಿದ್ದು, ಇಡೀ ಚಿತ್ರ ತಂಡದ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡ ಕಾರಣ ಸತತ 74 ದಿನಗಳ ಕಾಲ ಶೂಟಿಂಗ್ ಮಾಡಿರುವ ಚಿತ್ರ ತಂಡ ಇದೊಂದು ಪ್ರತಿಭಾವಂತ ತಂಡ ಮತ್ತು ಅದ್ಭುತ ಶಕ್ತಿ ಎಂದು ಹೇಳಿದೆ.

ಇತ್ತಿಚೆಗೆ ಫೈಟಿಂಗ್ ಸೀನ್ ಶೂಟಿಂಗ್ ವೇಳೆ ಜೂನಿಯರ್ ಆರ್ಟಿಸ್ಟ್ ಕಾಲಿಗೆ ಪಟ್ಟು ಬಿದ್ದ ಪರಿಣಾಮ ಶ್ರೀಮುರಳಿಯೇ ಸ್ವತಃ ಆಸ್ಪತ್ರಗೆ ಸೇರಿಸಿ, ಚಿಕಿತ್ಸೆ ಕೊಡಿಸಿ ಪುಟ್ಟರಾಜು ಅವರಿಲ್ಲಿ ಕ್ಷಮೆ ಕೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿರುವ ಮದಗಜ ಸಿನಿಮಾ ಪಕ್ಕಾ ಫ್ಯಾಮಿಲಿ ಆಕ್ಷನ್ ಡ್ರಾಮಾ ಆಗಿದ್ದು, ಶ್ರೀಮುರಳಿ ಅಭಿಮಾನಿಗಳಿಗೆ ಇದು ಇಷ್ಟ ಆಗಲಿದೆ ಎಂದು ಹೇಳಲಾಗಿದೆ.ರಾಬರ್ಟ್ ಚಿತ್ರ ನಿರ್ಮಿಸಿರುವ ಉಮಾಪತಿ ಶ್ರೀನಿವಾಸ್ ಮದಗಜ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಮಹೇಶ್ ಕುಮಾರ್ ಹಾಗೂ ಶ್ರೀಮುರಳಿ ಕಾಂಬಿನೇಶನ್ ನ ಮೊದಲ ಚಿತ್ರ. ಚಿತ್ರದಲ್ಲಿ ಶ್ರೀಮುರಳಿಗೆ ಆಶಿಕಾ ರಂಗನಾಥ್ ಜೋಡಿಯಾಗಿದ್ದು. ತೆಲುಗು ನಟ ಜಗಪತಿ ಬಾಬು ಪ್ರಮುಖ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ.ಚಿತ್ರಕ್ಕೆ ನವೀನ್ ಕುಮಾರ್ ಅವರು ಛಾಯಾಗ್ರಹಣವಿದ್ದು, ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಚೇತನ್ ಕುಮಾರ್, ರವಿಬಸ್ರೂರು ಸಾಹಿತ್ಯವಿದೆ. ಮದಗಜ ಚಿತ್ರ ಕನ್ನಡ, ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
****