ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರವ ಸರ್ಜಾ ಮತ್ತು ಜೋಗಿ ಪ್ರೇಮ್ ಅವರ ಕಾಂಬಿನೇಶನ್ ನಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ವಿಷಯ ತಿಳಿದ ಧ್ರವ ಮತ್ತು ಪ್ರೇಮ್ ಫ್ಯಾನ್ಸ್ ಫುಲ್ ಸೆಲಬ್ರೇಟ್ ಮಾಡಿದ್ದಾರೆ. ಕೆಲವು ದಿನಗಳಿಂದ ಧ್ರವ ಮತ್ತು ಪ್ರೇಮ್ ಕಾಂಬಿನೇಶನ್ ನಲ್ಲಿ ಸಿನಿಮಾ ಬರುತ್ತಾ? ಇಲ್ವಾ ? ಎಂಬ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು, ನೆನ್ನೆಯಷ್ಟೆ ಧ್ರವ ತಮ್ಮ ಸೋಶಿಯಲ್ ಮೀಡಿಯಾ ಪೇಜ್ಗಳಲ್ಲಿ ಅವರ 6ನೇ ಸಿನಿಮಾ ಬಗ್ಗೆ ಇಂದು ಅನೌನ್ಸ್ ಮಾಡುವ ಬಗ್ಗೆ ವೀಡಿಯೋ ಒಂದನ್ನು ಶೇರ್ ಮಾಡಿದ್ದರು. ಹಾಗಾಗಿ ದೃವಸರ್ಜಾ ಅವರ ಅಭಿಮಾನಿಗಳಿಗೆ ಬಹಳ ಕುತೂಹಲ ಮೂಡಿತ್ತು, ಯಾರು ಸಿನಿಮಾ ನಿರ್ದೇಶನ ಮಾಡ್ತಾರೆ ಅಂತ, ,ಈಗ ಆ ಎಲ್ಲಾ ಊಹಾಪೋಹ ಗಳಿಗೆ ತೆರೆ ಬಿದ್ದಿದ್ದು ಜೋಗಿ ಪ್ರೇಮ್ ಅವರು ಧ್ರವ ಸರ್ಜಾ ಅವರ 6ನೇ ಸಿನಿಮಾವನ್ನ ನಿರ್ದೇಶನ ಮಾಡುತ್ತಿರುವುದು ಅಫಿಶಿಯಲಿ ಅನೌನ್ಸ್ ಆಗಿದೆ.

ಸಿನಿಮಾ ಟೈಟ್ಲ್ ಸಿಕ್ರೇಟ್, ಸ್ಟೋರಿ ಕೃಷ್ಣಾರ್ಜುನ ಯುದ್ದ ನಾ?
ಚಿತ್ರ ಕೆವಿಎನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ಚಿತ್ರದ ಟೈಟಲ್ ಏನು ಎಂದು ಗುಟ್ಟು ಬಿಟ್ಟು ಕೊಡದ ನಿರ್ದೇಶಕ ಪ್ರೇಮ್ ಮುಂದಿನ ದಿನಗಳಲ್ಲಿ ಚಿತ್ರದ ಟೈಟಲ್ ಏನೆಂದು ತಿಳಿಸಲಿದ್ದಾರೆ, ಆದರೆ ಒಂದು ಮಾಹಿತಿಯ ಪ್ರಕಾರ ಸಿನಿಮಾ ಕೃಷ್ಣಾರ್ಜುನ ಯುದ್ದದ ಕುರಿತಾಗಿದ್ದು ಇದು ಪೌರಾಣಿಕ ಕಥೆಯ ಇನ್ಫ್ಲೂಯೆನ್ಸ್ ನಿಂದ ಹುಟ್ಟಿಕೊಂಡಿರುವ ಕಥೆ ಇರಬಹುದು ಎಂದು ಹೇಳಲಾಗುತ್ತಿದೆ. ಕೃಷ್ಣಾರ್ಜುನ ಯುದ್ದ ಎಂಬ ಟೈಟಲ್ ಇರಬಹುದು ಎಂದು ಗೆಸ್ ಮಾಡಲಾಗುತ್ತಿದೆ
ತಮ್ಮ ಒಂಬತ್ತನೇ ಚಿತ್ರದ ಕುರಿತು ಇಂದು ನಿರ್ದೇಶಕ ಪ್ರೇಮ್ ಟ್ವೀಟ್ ಮಾಡಿದ್ದಾರೆ. ”ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ. ನಿಮ್ಮ ಪ್ರೀತಿ ಪ್ರೋತ್ಸಾಹ ಅಭಿಮಾನ, ಆಶೀರ್ವಾದ ಸದಾ ಹೀಗೆ ಇರಲಿ” ಎಂದು ನಿರ್ದೇಶಕ ಪ್ರೇಮ್ ಟ್ವೀಟಿಸಿದ್ದಾರೆ. ಜೊತೆಗೆ ಧ್ರುವ ಸರ್ಜಾ ಜೊತೆಗಿನ ಸಿನಿಮಾದ ಅಧಿಕೃತ ಘೋಷಣೆಯ ವಿಡಿಯೋವನ್ನು ಪ್ರೇಮ್ ಹಂಚಿಕೊಂಡಿದ್ದಾರೆ.. ಚಿತ್ರದ ಉಳಿದ ತಾರಾ ಬಳಗದ ಬಗ್ಗೆ ಇನ್ನಷ್ಟೆ ಮಾಹಿತಿ ಹೊರಬೀಳಬೇಕಿದೆ.
ಕೇಕ್ ಕಟ್ ಮಾಡಿ ಸೆಲೆಬ್ರೆಟ್ ಮಾಡಿದ ಫ್ಯಾನ್ಸ್:
ಈ ವಿಷಯಕ್ಕಾಗಿ ಕಾಯುತ್ತಿದ್ದ ಧ್ರವ ಮತ್ತು ಜೋಗಿ ಪ್ರೇಮ್ ಫ್ಯಾನ್ಸ್ ವಿಷಯ ಅನೌನ್ಸ್ ಆದ ಕೂಡಲೆ ನಿರ್ದೇಶಕ ಪ್ರೇಮ್ ಅವರನ್ನು ಗ್ರೀಟ್ ಮಾಡಿ ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡಿದ್ದಾರೆ. ಇದೇ ವೇಳೆ ಪ್ರೇಮ್ ಅವರಿಗೆ ಕೇಕ್ ತಿನ್ನಿಸಿ ವಿಶ್ ಮಾಡಿದ್ದಾರೆ. ಫ್ಯಾನ್ಸ್ ಮಾಡುತ್ತಿದ್ದ ಸೆಲೆಬ್ರೇಶನ್ ನಲ್ಲಿ ಭಾಗಿಯಾಗಿ ಮಾತನಾಡಿದ ಜೋಗಿ ಪ್ರೇಮ್ ಧ್ರವ ಸರ್ಜಾ ನನಗೆ ತಮ್ಮ ಇದ್ದ ಹಾಗೆ, ನನ್ನ ಫ್ಯಾಮೀಲಿ ಯ ಆಪ್ತ, ಧ್ರವ ಅವರ ಸಿನಿಮಾ ಪ್ರೀತಿಯನ್ನ ನಾನು ಕಣ್ಣಾರ ನೋಡಿದ್ದೇನೆ ಅವನ ಡೆಡಿಕೇಶನ್ ನನಗೆ ತುಂಬ ಇಷ್ಟ ಆ ಕಾರಣಕ್ಕೆ ಅವರ ಜೊತೆ ಸಿನಿಮಾ ಮಾಡಲು ಮನಸ್ಸು ಮಾಡಿದ್ದು ಎಂದು ಪ್ರೇಮ್ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡರು. ಆಗ ಅಭಿಮಾನಿಯೊಬ್ಬರು ಮಾತನಾಡಿ ಬರಿ ಜನ ಮಾತ್ರ ಅಲ್ಲಾ ಇಡೀ ಇಂಡಸ್ಟ್ರೀ ನಿಮ್ ಕಡೆ ತಿರುಗಿ ನೋಡುತ್ತೆ ಸರ್ ಎಂದು ಹೇಳಿ ತಮ್ಮ ಅಭಿಮಾನವನ್ನ ವ್ಯಕ್ತಪಡಿಸಿ ಪ್ರೇಮ್ ಅವರ ಹೊಸ ಚಿತ್ರಕ್ಕೆ ವಿಶ್ ಮಾಡಿದರು.
****