ಹೌದು ಡ್ರಗ್ ಸೇವನೆಗೆ ಸಂಬಂಧಿಸಿದಂತೆ ನಟಿಯರ ಕೂದಲಿನ ಸ್ಯಾಂಪಲನ್ನು ಪರೀಕ್ಷೆಗೆ ಹೈದರಾಬಾದ್ ಗೆ ಕಳುಹಿಸಲಾಗಿತ್ತು. ಇದೀಗ ಹೈದರಾಬಾದ್ ನ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯ ಪ್ರಕಾರ ನಟಿ ರಾಗಿಣಿ ಹಾಗೂ ಸಂಜನಾ ಡ್ರಗ್ ಸೇವನೆ ಮಾಡಿರುವುದು ದೃಡಪಟ್ಟಿದೆ.
ಈ ಹಿಂದೆಯೂ ಡ್ರಗ್ ಮಾಫಿಯಾ ಬಗ್ಗೆ ಮಾಹಿತಿ ನೀಡಿ ಭಾರಿ ಸುದ್ದಿಯಾಗಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಪ್ರಯೋಗಾಲಯದ ವರದಿ ದೃಡಪಟ್ಟ ಹಿನ್ನಲೆಯಲ್ಲಿ ಒಂದು ಪ್ರೆಸ್ ಮೀಟ್ ಕರೆದು ಪ್ರತಿಕ್ರಿಯಿಸಿದ್ದಾರೆ. ಪ್ರಯೋಗಾಲ ನೀಡಿರುವ ಸ್ಯಾಂಪಲ್ ನ ವರದಿಯಿಂದಾಗಿ ಸಮಾದಾನವಾಗಿದೆ. ಇದು ಖುಷಿ, ಸೋಲು , ಗೆಲುವಿನ ಪ್ರಶ್ನೆಯಲ್ಲ ಬದಲಾಗಿ ನನಗೆ ಯಾರ ಮೇಲು ವಯುಕ್ತಿಕ ದ್ವೇಷವೂ ಇಲ್ಲಾ, ಯಾರನ್ನು ಬೆಟ್ಟು ಮಾಡಿ ತೋರಿಸುತ್ತಿಲ್ಲಾ ನಾನು ಒಬ್ಬ ಪತ್ರಕರ್ತನಾಗಿ ನನಗಿದ್ದ ಮಾಹಿತಿಯನ್ನು ಇಡೀ ಸಿಸಿಬಿ ತಂಡಕ್ಕೆ ನೀಡಿದ್ದೆ ಅಷ್ಟೆ. ಹಾಗೆ ನೋಡಿದರೆ ಈಗ ಸಿಕ್ಕಿರುವುದು ಚಿಕ್ಕ ಚಿಕ್ಕ ಮೀನುಗಳಷ್ಟೆ, ದೊಡ್ಡ ದೊಡ್ಡ ತಿಮಿಂಗಿಲಗಳು ಬಾಕಿ ಇವೆ ಎಂದಿದ್ದಾರೆ.

ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಾಂದರ್ಭಿಕ ಚಿತ್ರ
ಬೆಂಗಳೂರು ಒಂದು ಡ್ರಗ್ ಮಾಫಿಯಾದ ಕೇಂದ್ರವಾಗಿದೆ, ಸ್ಯಾಂಡಲ್ ವುಡ್ ಒಂದು ಪವಿತ್ರವಾದ ದೇವಾಲಯ ನಿರ್ದೇಶಕನಾಗಿ ಅದನ್ನ ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದೇನೆ ಎಂದರು. ನನಗಿದ್ದ ಮಾಹಿತಿ ಆದರಿಸಿ ಗೃಹ ಸಚಿವರಿಗೆ ದೂರು ನೀಡಿದ್ದೆ ಆಗ ನನ್ನ ಮೇಲೆ ಸಾಕಷ್ಟು ಜನ ಟೀಕೆ, ನಿಂದನೆಗಳನ್ನು ಮಾಡಿದ್ದರು, ಇಂದ್ರಜಿತ್ ಗೆ ಮಾಡಲು ಕೆಲಸವಿಲ್ಲಾ ಎಂದಿದ್ದರು. ಈಗಲೂ ಹೇಳುತ್ತೇನೆ ಬೆಂಗಳುರು ಡ್ರಗ್ ದಂದೆಯ ಕೇಂದ್ರವಾಗಿದೆ, ವರದಿ ದೃಡಪಟ್ಟ ಹಿನ್ನಲೆಯಲ್ಲಿ ಇನ್ನಷ್ಟು ತನಿಕೆಯಾದರೆ ಮತ್ತಷ್ಟು ಸತ್ಯಾಸತ್ಯತೆ ಹೊರಬರುತ್ತದೆ ಎಂದರು.
****