29.4 C
Bengaluru
Sunday, February 5, 2023
spot_img

ಸ್ಯಾಂಡಲ್ ವುಡ್ ಡಾಲಿ ಗೆ ಜನ್ಮ ದಿನದ ಸಂಭ್ರಮ : ಆಚರಣೆ ಮಾಡುವುದಿಲ್ಲಾ ಎಂದ ಧನಂಜಯ್

ಇಂದು ಡಾಲಿ ಧನಂಜಯ್ ಅವರಿಗೆ 35 ನೇ ವರ್ಷದ ಜನ್ಮ ದಿನದ ಸಂಭ್ರಮ. ಆದರೆ ಡಾಲಿ ಧನಂಜಯ್ ಅವರು ತಮ್ಮ ಹುಟ್ಟು ಹಬ್ಬದ ಸಂಭ್ರಮಾಚರಣೆ ಮಾಡದಿರಲು ನಿರ್ಧರಿಸಿದ್ದಾರೆ, ಕೊರೊನಾ ದ ಆತಂಕಗಳು ಇನ್ನೂ ದೂರವಾಗದ ಹಿನ್ನಲೆಯಲ್ಲಿ ಮತ್ತು ಇದರ ನಡುವೆ ಜನ ಸಾಮಾನ್ಯರು ಪಡುತ್ತಿರುವ ಕಷ್ಟಗಳನ್ನು ಕಣ್ಣಾರೆ ಕಂಡಿರುವ ಡಾಲಿ ಧನಂಜಯ್ ಈ ಸಂಧರ್ಭದಲ್ಲಿ ಹುಟ್ಟು ಹಬ್ಬದ ಆಚರಣೆಗಳು ಸರಿಯಾದುದ್ದಲ್ಲ ಎಂಬ ತೀರ್ಮಾನಕ್ಕೆ ಬಂದು ಆಚರಣೆಯಿಂದ ದೂರ ಉಳಿದಿದ್ದಾರೆ.

ಧನಂಜಯ್ ಅವರಿಗೆ 35 ನೇ ವರ್ಷದ ಜನ್ಮ ದಿನದ ಸಂಭ್ರಮ
ಧನಂಜಯ್ ಅವರಿಗೆ 35 ನೇ ವರ್ಷದ ಜನ್ಮ ದಿನದ ಸಂಭ್ರಮ

ಕಳೆದ ಎರಡು ವರ್ಷದಿಂದ ಕೊರೊನಾ ಕಾರಣಕ್ಕೆ ಸ್ಯಾಂಡಲ್ ವುಡ್ ನ ಹಲವು ಸ್ಟಾರ್ ನಟರು, ಸೆಲೆಬ್ರೆಟಿಗಳು ಇದೇ ತೀರ್ಮಾನಕ್ಕೆ ಬಂದಿರುವುದನ್ನು ಗಮನಿಸಬಹುದು. ‘ಸ್ಟಾರ್’ ನಟ ಎಂದಮೇಲೆ ಅಭಿಮಾನಿಗಳ ಸಂಖ್ಯೆಯು ದೊಡ್ದದಾಗೇ ಇರುತ್ತದೆ. ಇದರಿಂದ ಸಹಜವಾಗಿಯೇ ಜನ್ಮದಿನದಂತಹ ಆಚರಣೆಗಳಲ್ಲಿ ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಸೇರುತ್ತಾರೆ. ಆದರೆ, ಇಂತಹ ಕೊರೊನಾ ವೈರಸ್ ಹಾವಳಿ ನಡುವೆ ಅಷ್ಟೊಂದು ಜನರು ಒಟ್ಟಿಗೆ ಸೇರುವುದು ಖಂಡಿತಾ ಅಪಾಯಕಾರಿ. ಇದನ್ನರಿತ ಸೆಲೆಬ್ರಿಟಿಗಳು ತಮ್ಮ ಬರ್ತ್‌ಡೇ ಆಚರಣೆಯನ್ನು ಕ್ಯಾನ್ಸಲ್ ಮಾಡುತ್ತಿದ್ದಾರೆ. ಆ ಸಾಲಿಗೆ ಈಗ ಸ್ಯಾಂಡಲ್‌ವುಡ್‌ನ ‘ಡಾಲಿ’  

ಡಾಲಿ ತಮ್ಮ ಜನ್ಮ ದಿನಾಚರಣೆ ಬಗ್ಗೆ ವೀಡಿಯೋ ಒಂದನ್ನು ಶೇರ್ ಮಾಡಿದ್ದು ಅದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ‘ಪ್ರತಿವರ್ಷ ಆಗಸ್ಟ್ 23ರಂದು ನನ್ನ ಜನ್ಮದಿನವನ್ನು ತುಂಬ ಚೆನ್ನಾಗಿ ಆಚರಣೆ ಮಾಡುತ್ತಿದ್ರಿ. ಇಡೀ ದಿನ ನನಗೇ ಗೊತ್ತಿಲ್ಲದೇ ಕಳೆದುಹೋಗ್ತಾ ಇತ್ತು. ತುಂಬ ಸಮಯ ನಿಮ್ಮೊಂದಿಗೆ ಕಳೆಯುತ್ತಿದ್ದೆ. ನೀವೆಲ್ಲ ಬಂದು ನನಗೆ ವಿಶ್ ಮಾಡುತ್ತಿದ್ರಿ. ಮನೆಯ ಹತ್ತಿರ ಸೇರುತಿದ್ರಿ. ಕಳೆದ ಎರಡು ವರ್ಷಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ನನ್ನ ಬರ್ತ್ ಡೇಯನ್ನು ಆಚರಣೆ ಮಾಡಿದ್ದೀರಿ. ನನ್ನೊಂದಿಗೆ ನೀವು ಕೂಡ ದಾನ ಮಾಡಿದ್ದೀರಿ. ಆದರೆ, ಈ ಸಲ ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ಯಾವುದೇ ಆಚರಣೆ ಇರಲ್ಲಎಂದಿದ್ದಾರೆ ಧನಂಜಯ.

‘ಯಾಕೆಂದರೆ, ಕೊರೊನಾದಿಂದಾಗಿ ಪರಿಸ್ಥಿತಿ ಹೇಗಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ನಮ್ಮ ಮನೆಯ ಸುತ್ತಮುತ್ತ ಕೂಡ ವಯಸ್ಸಾಗಿರುವವರು ಇರುವುದರಿಂದ ಯಾವುದೇ ಆಚರಣೆ ಮಾಡುತ್ತಿಲ್ಲ. ನಮ್ಮ ಕಡೆಯಿಂದ ಯಾರಿಗೂ ತೊಂದರೆ ಆಗುವುದು ಬೇಡ. ನಾನು ಕೂಡ ಅಂದು ಮನೆಯಲ್ಲಿ ಇರುವುದಿಲ್ಲ, ಊರಲ್ಲೂ ಇರುವುದಿಲ್ಲ. ನೀವು ಎಲ್ಲಿ ಇರುತ್ತಿರೋ, ಅಲ್ಲಿಂದಲೇ ವಿಶ್ ಮಾಡಿ. ನಿಮ್ಮ ಹಾರೈಕೆ ಹೀಗೆ ಇರಲಿ. ಇದೆಲ್ಲ ಸರಿಯಾದ ಮೇಲೆ ಎಲ್ಲರೂ ಸೇರೋಣ, ಇನ್ನೂ ಅದ್ದೂರಿಯಾಗಿ ಆಚರಿಸೋಣ’ ಎಂದು ಹೇಳಿದ್ದಾರೆ ಧನಂಜಯ.

ಕನ್ನಡ ಚಿತ್ರರಂಗದ ಹೆಚ್ಚು ಬೇಡಿಕೆಯ ನಟನಾಗಿರುವ ಡಾಲಿ ಇಂದು 35 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ, ಅವರ ಎಲ್ಲಾ ಚಿತ್ರಗಳು ಯಶಸ್ವಿಯಾಗಿ, ಜನಸಾಮಾನ್ಯರ ಬಗ್ಗೆ ನಿಮಗಿರುವ ಕಾಳಜಿ, ನೀವು ಮಾಡುತ್ತಿರುವ ಸಮಾಜಮುಖಿ ಕೆಲಸಗಳು ಇನಷ್ಟು ಜೀವಗಳಿಗೆ ಆಸರೆ ನೀಡುವಂತಾಗಲಿ ಎಂದು ನಿಮ್ಮ ಜನುಮ ದಿನದಂದು ಕನ್ನಡ ಪಿಚ್ಚರ್ ತಂಡ ಶುಭಾಶಯ ಕೋರುತ್ತದೆ. Wish You Happy Birthday ಡಾಲಿ.

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles