ಇಂದು ಸಲಾರ್ ಚಿತ್ರತಂಡ ರಾಜಮನಾರ್ ಎಂಬ ಪಾತ್ರದ ಅನಾವರಣ ಮಾಡಿದೆ. ಈ ಪಾತ್ರದಲ್ಲಿ ಖ್ಯಾತ ನಟ ಜಗಪತಿಬಾಬು ಅಭಿನಯಿಸುತ್ತಿದ್ದಾರೆ. ಅವರ ಪಾತ್ರದ ಫಸ್ಟ್ ಲುಕ್ ಇದೀಗ ಬಿಡುಗಡೆಯಾಗಿದೆ.

ಕನ್ನಡದ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸಲಾರ್ ಸಿನಿಮಾ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟಿಸಿದೆ. ಎರಡು ಹಂತದ ಚಿತ್ರೀಕರಣವೂ ನಡೆದಿದೆ. ಪ್ರಭಾಸ್ ಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಈ ಸಿನಿಮಾ ತೆಲುಗು, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
****