ಮದಗಜ ಶೂಟಿಂಗ್ ಸ್ಪಾಟ್ ನಿಂದ ಒಂದಲ್ಲಾ ಒಂದು ಸುದ್ದಿ ಬರ್ತಾನೆ ಇದೆ. ಇತ್ತೀಚೆಗೆ ಮದಗಜ ಚಿತ್ರೀಕರಣ ವೇಳೆ ಶ್ರೀಮುರಳಿ ಒಂದು ಪುಟ್ಟ ಮಗುವಿನೊಂದಿಗೆ ಬಿಸ್ಕೇಟ್ ಮತ್ತು ಚಿಪ್ಸ್ ಎಕ್ಸ್ಚೇಂಜ್ ಮಾಡಿಕೊಳ್ಳುವ, ಮಗುವಿನಿಂದ ಕಿಸ್ ಮಾಡಿಸಿಕೊಳ್ಳುವ ಕ್ಯೂಟ್ ವೀಡಿಯೋ ವೈರಲ್ ಆಗಿತ್ತು.

ಶೂಟ್ನಲ್ಲಿ ‘ಫೈಟರ್’ಗೆ ಪೆಟ್ಟು..! ಖುದ್ದು ಆರೋಗ್ಯ ವಿಚಾರಿಸಿದ ಶ್ರೀಮುರಳಿ..
ಈಗ ಮತ್ತೆ ಮದಗಜ ಶೂಟಿಂಗ್ ಸೆಟ್ ಅಲ್ಲಿ ಫೈಟಿಂಗ್ ಸೀನ್ ಶೂಟ್ ವೇಳೆ ಪುಟ್ಟರಾಜು ಎಂಬ ಜೂನಿಯರ್ ಅಸಿಸ್ಟಂಟ್ ಕಾಲಿಗೆ ಪೆಟ್ಟಾಗಿದ್ದು, ಈ ವೇಳೆ ಜೂನಿಯರ್ ಹತ್ತಿರಕ್ಕೆ ಬಂದ ಶ್ರೀಮುರಳಿ ಪುಟ್ಟರಾಜು ಅವರ ಕಾಲು ಮುಟ್ಟಿ ಆರೋಗ್ಯ ವಿಚಾರಿಸಿದ್ದು, ನಡೆದ ಘಟನೆ ಬಗ್ಗೆ ಕ್ಷಮೆ ಕೇಳಿದ್ದಾರೆ. ಈಗ ಜೂನಿಯರ್ ಅಸಿಸ್ಟಂಟ್ ಪುಟ್ಟರಾಜು ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
****