‘ಪೊಗರು’ ನಂತರ ಸ್ವಲ್ಪ ಬಿಡುವಾಗಿದ್ದ ಆಕ್ಷನ್ ಪ್ರಿನ್ಸ ದೃವಾ ಸರ್ಜಾ ಗೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಸೆಟ್ ಆಗುವ ಮೂಲಕ ಸಕತ್ ಬ್ಯೂಸಿ ಆಗುತ್ತಿದ್ದಾರೆ. ಕಳೆದ ವಾರವಷ್ಟೆ (ಆಗಸ್ಟ್ 15) ದೃವಸರ್ಜಾ ಮತ್ತು ಎಪಿ ಅರ್ಜುನ್ ಅವರ ಕಾಂಬಿನೇಶನ್ ನಲ್ಲಿ ದೃವಸರ್ಜಾ ರ 5 ನೇ ಚಿತ್ರ ‘ಮಾರ್ಟಿನ್’ ಮುಹೂರ್ತ ನೆಡದು ಮೋಷನ್ ಪೋಸ್ಟರ್ ರಿಲೀಸ್ ಆಗಿ, ಸಕತ್ ರಗಡ್ ಲುಕ್ ಅಲ್ಲಿ ಕಾಣಿಸಿಕೊಂಡ್ಡಿದ್ದ ದೃವ ಈಗ ಮತ್ತೆ ಅವರ 6 ನೇ ಚಿತ್ರ ಸೆಟ್ಟೇರುತ್ತಿರುವ ಬಗ್ಗೆ ಸುಳಿವು ನೀಡಿದ್ದಾರೆ.

ಅದ್ದೂರಿ, ಬಹದ್ದೂರ್, ಬರ್ಜರಿ,ಪೊಗರು, ಮಾರ್ಟಿನ್ ನಂತರ ಬರುತ್ತಿರುವ ಚಿತ್ರ ಯಾವುದು?? ಎಂಬ ಕುತೂಹಲ ದೃವಾ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಒಂದು ಮೂಲದ ಪ್ರಕಾರ ಪ್ರೇಮ್ ಮತ್ತು ದೃವ ಸರ್ಜಾ ಅವರ ಕಾಂಬಿನೇಶನ್ ನಲ್ಲಿ ಸಿನಿಮ ಸೆಟ್ಟೇರಬಹುದು ಎಂಬ ಚರ್ಚೆಯೂ ಕೂಡ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದ್ದು ಆಗಸ್ಟ್ 24 ಅಂದರೆ ನಾಳೆ ದೃವ ಅವರ 6ನೇ ಸಿನಿಮಾದ ಸುದ್ದಿ ರಿವೀಲ್ ಆಗುತ್ತದೆ ಎಂಬ ವೀಡಿಯೋ ದೃವ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
****