ಮಲೆಯಾಳಂ ನ ಖ್ಯಾತ ನಟಿ ಚಿತ್ರಾ ಅವರು ಇಂದು ಮುಂಜಾನೆ ಚೈನ್ನೈನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ಚಿತ್ರಾ ಅವರು ಪತಿ ವಿಜಯರಾಘವನ್ ಪುತ್ರಿ ಮಹಾಲಕ್ಷ್ಮಿ ಅವರನ್ನು ಅಗಲಿದ್ದಾರೆ. ತಮಿಳು ಟೆಲಿವಿಷನ್ನಲ್ಲಿ ಬಹಳ ಚಿರಪರಿಚಿತರಾಗಿದ್ದ ಚಿತ್ರಾ, ತಮ್ಮ ನಟನೆಯಿಂದಲೇ ಜನರ ಮನಸ್ಸನ್ನು ಗೆದ್ದಿದ್ದರು. ತಮಿಳು, ಮಲೆಯಾಳಂ ಮಾತ್ರವಲ್ಲದೇ ವಿವಿಧ ಭಾಷೆಗಳಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.
ಮಲಯಾಳಂನಲ್ಲಿ ಅವರು ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ‘ಅಟ್ಟಕಳಶಂ’. ಆ ಚಿತ್ರದಲ್ಲಿ ಮೋಹನ್ ಲಾಲ್ ಮತ್ತು ಪ್ರೇಮ್ ನಜಿರ್ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಚಿತ್ರಾಗೆ ಸಿಕ್ಕಿತ್ತು. ಮಾಲಿವುಡ್ನ ಮತ್ತೋರ್ವ ಸ್ಟಾರ್ ನಟ ಮಮ್ಮೂಟ್ಟಿ ಜೊತೆಗೂ ಅವರು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
****