ಡಾಲಿ ಧನಂಜಯ್ ಹಾಗೂ ರೆಬಾ ಮೋನಿಕಾ ಜಾನ್ ಜೋಡಿಯಾಗಿ ಅಭಿನಯದ ರತ್ನನ್ ಪ್ರಪಂಚ ಚಿತ್ರದ ಟ್ರೇಲರ್ ಹೊಂಬಾಳೆ ಫಿಲಮ್ಸ್ ಯೂಟ್ಯೂಬ್ ಚಾನಲ್‌ನಲ್ಲಿ ಅಂದು ಮಧ್ಯಾಹ್ನ 12.34ಕ್ಕೆ ಬಿಡುಗಡೆ ಆಗಿದ್ದು, ಟ್ರೇಲರ್ ನಲ್ಲಿ ಉಮಾಶ್ರೀ ಮತ್ತು ಡಾಲಿ ಅಮ್ಮ ಮತ್ತು ಮಗನಾಗಿ ಕಾಣಿಸಿಕೊಂಡಿದ್ದು ಇಬ್ಬರ ನಡುವಿನ ಕಾಮಿಡಿ ಸೀಕ್ವೆನ್ಸ್ ಹೊಟ್ಟೆ ಹುಣ್ಣಾಗಿಸುವಂತೆ ಮಾಡುತ್ತದೆ. ಟ್ರೇಲರ್ ನಲ್ಲಿ ಕಾಣಿಸಿಕೊಂಡಿರುವ ಧನಂಜಯ್ ,ರೇಬಾ, ಉಮಾಶ್ರೀ, ಅನು ಪ್ರಭಾಕರ್, ರವಿಶಂಕರ್ ಎಲ್ಲರ ಕಾಮಿಡಿ ಪಂಚ್ ಡೈಲಾಗ್ ಗಳನ್ನು ಪ್ರೇಕ್ಷಕರು ಸಕತ್ ಎಂಜಾಯ್ ಮಾಡುತ್ತಾರೆ. ಶೃತಿ ಅವರು ಸೀರಿಯಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಬಗ್ಗೆ ಇನ್ನಷ್ಟು ಕುತೂಲಹ ಮೂಡಿಸುತ್ತದೆ.

ರತ್ನಾಕರನ ಪ್ರಪಂಚ
ರೋಹಿತ್ ಪದಕಿ ನಿರ್ದೇಶನದ, ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಾಣದ, ಕೆಆರ್‌ಜಿ ಸ್ಟುಡಿಯೋ ಅವರ ಮೊದಲ ನಿರ್ಮಾಣದ ಚಿತ್ರ ರತ್ನನ್ ಪ್ರಪಂಚ, ವರಮಹಾಲಕ್ಷ್ಮೀ ಹಬ್ಬದ ದಿನ ಟ್ರೇಲರ್ ರಿಲೀಸ್ ಆಗಿದ್ದು ಸಿನಿ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಡಾಲಿ ಧನಂಜಯ್ ಈ ಹಿಂದೆ ಹಲವಾರು ಚಿತ್ರದಲ್ಲಿ ಅಭಿನಯಿಸಿದ್ದರೂ ರತ್ನನ್ ಪ್ರಪಂಚ ಚಿತ್ರದ ರತ್ನಾಕರನ ಪಾತ್ರ ಮಧ್ಯಮ ವರ್ಗದ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಟಗರು, ಯುವರತ್ನ ಚಿತ್ರದಲ್ಲಿ ನೆಗೆಟೀವ್ ಶೇಡ್ ಗಳಲ್ಲಿ ಅಭಿನಯಿಸಿ ಅಪಾರ ಅಭಿಮಾನಿ ವರ್ಗವನ್ನ ಸೃಷ್ಠಿಸಿಕೊಂಡಿರುವ ಧನಂಜಯ್ ರತ್ನನ್ ಪ್ರಪಂಚದ ಮೂಲಕ ಎಂಟ್ರಟೇನ್ ಮತ್ತು ಕಾಮಿಡಿ ಯಿಂದ ಎಲ್ಲ ವರ್ಗದ ಪ್ರೇಕ್ಷಕನಿಗೂ ಇಷ್ಟವಾಗುವುದು ನಿಶ್ಚಿತ.
ಕೊರೊನಾ ಕಾರ್ಮೋಡಗಳು ಆವರಿಸಿರುವ ಈ ಹೊತ್ತಲ್ಲಿ ಪ್ರತಿಯೊಂದು ಮನಸ್ಸಿಗೂ ರಿಲ್ಯಾಕ್ಸ್ ನೀಡುವ ಚಿತ್ರ ರತ್ನನ್ ಪ್ರಪಂಚ ಆಗಿರಲಿ, ಆದಷ್ಟು ಬೇಗ ಕೊರೊನಾ ಆತಂಕಗಳು ದೂರವಾಗಿ ಚಿತ್ರ ಬಿಡುಗಡೆಯಾದರೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸುವಂತಾಗಲಿ ಎಂದು ಕನ್ನಡ ಪಿಚ್ಚರ್ ಹಾರೈಸುತ್ತದೆ.