23.8 C
Bengaluru
Thursday, December 8, 2022
spot_img

“ಸೂಪರ್ ಸ್ಟಾರ್” ನಿರಂಜನ್ ಮಾಸ್ & ಕ್ಲಾಸ್ ಲುಕ್ ನಲ್ಲಿ :ಅ 20 ಕ್ಕೆ ಸಿನಿಮಾ ಕಂಟೆಂಟ್ ಟೀಸರ್ ರಿಲೀಸ್

ರಿಯಲ್ ಸ್ಟಾರ್ ಉಪೇಂದ್ರ ಅವರ ಕುಟುಂಬದ ಕುಡಿ ಅಣ್ಣನ ಮಗ ನಿರಂಜನ್  ‘ ಸೂಪರ್ ಸ್ಟಾರ್ ‘ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಗೊತ್ತೇ ಇದೆ, ಆಗಸ್ಟ್ 20 ರಂದು ಸೂಪರ್ ಸ್ಟಾರ್ ಚಿತ್ರದ ಕಂಟೆಂಟ್ ಟ್ರೈಲರ್ ರಿಲೀಸ್ ಆಗುತ್ತಿದೆ. ಕಳೆದ ವರ್ಷ ಇದೇ ದಿನ ಸಿನಿಮಾದ ಟೈಟಲ್ ಲಾಂಚ್ ಮಾಡಲಾಗಿತ್ತು. ವರಮಹಲಕ್ಷ್ಮಿ ಹಬ್ಬದಂದು ಟ್ರೈಲರ್ ರಿಲೀಸ್ ಮಾಡಲು ಚಿತ್ರ ತಂಡ ತಯಾರಿ ಮಾಡಿಕೊಂಡಿದೆ.

ಕನ್ನಡ ಪಿಚ್ಚರ್ ಜೊತೆ ಮಾಹಿತಿ ಹಂಚಿಕೊಂಡ ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಸೂಪರ್ ಸ್ಟಾರ್ ಸಿನಿಮಾ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಮಾಡಿದ್ದೇವೆ, ಯಾವ ವಿಷಯದಲ್ಲೂ ಕಾಂಪ್ರಮೈಸ್ ಮಾಡಿಕೊಳ್ಳದೆ ಪ್ರತಿ ಶಾಟ್ ಗಳನ್ನು ಶೂಟ್ ಮಾಡಿದ್ದೇವೆ, ಸೂಪರ್ ಸ್ಟಾರ್ ನಲ್ಲಿ  ನಿರಂಜನ್ ಮಾಸ್ ಲುಕ್ ಅಲ್ಲದೆ ಕ್ಲಾಸ್ ಲುಕ್ ನಲ್ಲೂ ಕಾಣಿಸುತ್ತಾರಂತೆ, ಎಲ್ಲಾ ಕ್ಯಾಟಗರಿಯ ಪ್ರೇಕ್ಷಕರಿಗೂ ನಿರಂಜನ್ ಇಷ್ಟವಾಗುತ್ತಾರಂತೆ. ಹೊಸಬರನ್ನ ಹಾಕಿಕೊಂಡು ಸಿನಿಮಾ ಮಾಡುವುದು ಬೇಡ ಎಂದು ಕೆಲವರು ಕಾಲೆಳೆದಿದ್ದು ಉಂಟಂತೆ ಆದರೆ ಯಾವುದಕ್ಕು ತಲೆ ಕೆಡಿಸಿಕೊಳ್ಳದ ರಮೇಶ್ ಸಿನಿಮಾ ಮಾಡಿ ಮಾತನಾಡಿದವರಿಗೆಲ್ಲಾ ಉತ್ತರ ಕೊಟ್ಟಿದ್ದಾರೆ, ಇಲ್ಲಿಯ ವರೆಗೂ ಸಿನಿಮಾದ ನಾಯಕನಿಗಾಗಲಿ , ರಿಯಲ್ ಸ್ಟಾರ್ ಉಪೇಂದ್ರ ಅವರಿಗಾಗಲಿ ಕಂಟೆಂಟ್ ಟ್ರೈಲರ್ ಅನ್ನು ತೋರಿಸಿಲ್ಲವಂತೆ, ಹಾಗಾಗಿ  ಆಗಸ್ಟ್ 20 ರಂದು ರಿಲೀಸ್ ಮಾಡುತ್ತಿರುವ ಕಂಟೆಂಟ್ ಮೇಲೆ ಎಲ್ಲರಿಗೂ ಕುತೂಹಲ ಇದೆಯಂತೆ. ಒಟ್ಟಾರೆ ತೆರೆ ಮೇಲೆ ನಿರಂಜನ ಸುಧೀಂದ್ರ ಅವರು ಮಾಸ್ ಮತ್ತು ಕ್ಲಾಸ್ ಲುಕ್ ನಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ.

ನಿರ್ದೇಶಕ ರಮೇಶ್‌ ವೆಂಕಟೇಶ್‌ ಬಾಬುಗೂ ಇದು ಮೊದಲ ಸಿನಿಮಾವಾಗಿದ್ದು, ಹಿಂದೆ ಅವರು ತೆಲುಗಿನ ಸ್ಟಾರ್‌ ನಿರ್ದೇಶಕ ಸುಕುಮಾರ್‌ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಸುಮಾರು 9 ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದಾರೆ. ನಿರ್ದೇಶಕರೇ ತಮ್ಮ ಹೋಮ್‌ ಬ್ಯಾನರ್‌ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ರಾಘವೇಂದ್ರ ಎಂಬವರು ಸಂಗೀತ ಸಂಯೋಜಿಸುತ್ತಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles