ಡಾ. ರಾಜ್ ಕುಟುಂಬದ ಕುಡಿ ಅಣ್ಣಾವ್ರ ಮೊಮ್ಮಗಳು ಧನ್ಯರಾಮ್ ಕುಮಾರ್ ಹಾಗೂ ನಟ ಸೂರಜ್ ಅಭಿನಯದ “ನಿನ್ನ ಸನಿಹಕೆ” ಚಿತ್ರ ಬಿಡುಗಡೆ ಮುಂದೂಡಲಾಗಿದೆ. ಇದೇ ಅಗಸ್ಟ್ 20 ಕ್ಕೆ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಘೋಷಣೆಮಾಡಿತ್ತು. ಆದರೆ ಕೊರೊನ ಗೈಡ್ ಲೈನ್ ನಿಂದ 100% ಆಸನಗಳ ಭರ್ತಿ ಇಲ್ಲದ ಕಾರಣಕ್ಕೆ ಸಿನಿಮಾ ಬಿಡುಗಡೆ ದಿನಾಂಕವನ್ನ ದಿಡೀರ್ ಮುಂದೂಡಲಾಗಿದೆ.

ಚಿತ್ರ ತಂಡ ಬಿಡುಗಡೆ ಮಾಡಿರುವ ಪ್ರೆಸ್ ನೋಟ್
ಇದು ಧನ್ಯ ಅವರ ಚೊಚ್ಚಲ ಸಿನಿಮ ಆಗಿದ್ದು ಬೆಳ್ಳಿ ತೆರೆ ಮೇಲೆ ಅಣ್ಣಾವ್ರ ಮೊಮ್ಮಗಳ ನಟನೆ ಹೇಗೆ ಬರಲಿದೆ ಎಂದು ಡಾ.ರಾಜ್ ಅಭಿಮಾನಿಗಳು ಕಾತರರಾಗಿದ್ದಾರೆ, ಚಿತ್ರದ ಹಾಡುಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದು ಸಕತ್ ರೆಸ್ಪಾನ್ಸ್ ಸಿಕ್ಕಿದೆ.