ದಿನೇಶ್ ಬಾಬು 50ನೇ ಚಿತ್ರ ಕಸ್ತೂರಿ ಮಹಲ್ ಟ್ರೈಲರ್ ರಿಲೀಸ್ ಆಗಿದೆ. ಸೆಟ್ಟೇರಿದಾಗ್ಲೇ ಸಾಕಷ್ಟು ವಿಚಾರಗಳಿಗೆ ಸದ್ದು ಸುದ್ದಿ ಮಾಡಿದ್ದ ಕಸ್ತೂರಿ ಮಹಲ್, ನಾಗರ ಪಂಚಮಿ ಪ್ರಯುಕ್ತ ಇವತ್ತು ಟ್ರೈಲರ್ ರಿಲೀಸ್ ಆಗಿದೆ.
ಟೈಟಲ್ ಮತ್ತು ಟೀಮ್ ವಿಚಾರವಾಗಿ ನಿರೀಕ್ಷೆ ಹುಟ್ಟಿಸಿದ್ದ ಕಸ್ತೂರಿ ಮಹಲ್ ಸಿನಿಮಾದ ಟ್ರೈಲರ್ ನಿರೀಕ್ಷೆಯನ್ನ ಉಳಿಸಿ ಕೊಂಡಿದೆ.

ಕಸ್ತೂರಿ ಮಹಲ್ ಟ್ರೈಲರ್ ರಿಲೀಸ್
ಟ್ರೈಲರ್ ಸಖತ್ ಇಂಟ್ರೆಸ್ಟಿಂಗ್ ಆಗಿ ಕಾಣುತ್ತಿದ್ದು. ಹಾರರ್ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ನಂತೆ ಕಾಣ್ತಿರೋ ಕಸ್ತೂರಿ ಮಹಲ್ ಟ್ರೈಲರ್ ಚಿತ್ರದ ಹಲವಾರು ವಿಶೇಷತೆಗಳನ್ನ ಬಿಚ್ಚಿಟ್ಟಿದೆ. ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ಕಾಣಿಸಿಕೊಂಡಿರೋ ಈ ಚಿತ್ರದಲ್ಲಿ ಸ್ಕಂದ ಅಶೋಕ್, ಶ್ರುತಿ ಪ್ರಕಾಶ್, ರಂಗಾಯಣ ರಘು, ನೀನಾಸಂ ಅಶ್ವಥ್ ಸೇರಿದಂತೆ ದೊಡ್ಡ ತಾರಾಬಳಗವಿದೆ.
ಮಲೆನಾಡಿನ ಮೂಡಿಗೆರೆಯ ಒಂದು ಹಳೇ ಮನೆಯಲ್ಲಿ ನಡೆಯೋ ಘಟಾನಾವಳಿಗನ್ನಾಧರಿಸಿ ಮಾಡಿರೋ ತರಹದ ಸಿನಿಮಾ ಇದಾಗಿದ್ದು, ಹಾರರ್ ಕಮ್ ಸೈಕಲಾಜಿಕಲ್ ಎಲಿಮೆಂಟ್ಸ್ ಟ್ರೈಲರ್ ನಲ್ಲಿ ಹೈಲೈಟ್ ಆಗಿ ಕಾಣ್ತಿವೆ. ಗ್ಲ್ಯಾಮರ್ ಡಾಲ್ ಶ್ವಾನಿ ಇದೇ ಮೊದಲ ಬಾರಿಗೆ ನಾಯಕಿ ಪ್ರಧಾನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಲೆಜೆಂಡರಿ ಡೈರೆಕ್ಚರ್ ದಿನೇಶ್ ಬಾಬು ಈ ಚಿತ್ರಕ್ಕೆ ತಮ್ಮ ಹಿಂದಿನ 49 ಚಿತ್ರಗಳ ಅನುಭವ ಮತ್ತು ಇವತ್ತಿನ ಹೊಸತನದ ಮುದ್ರೆಯನ್ನ ಒತ್ತಿದ್ದಾರೆ.

ಕಸ್ತೂರಿ ಮಹಲ್ ಟ್ರೈಲರ್ ರಿಲೀಸ್
ದಿನೇಶ್ ಬಾಬು ಸಿನಿಮಾ ಅಂದ್ರೆ, ಅಲ್ಲಿ ಮ್ಯೂಸಿಕ್ ಮತ್ತು ಸಿನಿಮಾಟೋಗ್ರಫಿಗೆ ವಿಶೇಷವಾಗಿರುತ್ತೆ. ಈ ಸಿನಿಮಾದಲ್ಲೂ ಅದು ಹೈಲೈಟ್ ಆಗಿಕಾಣ್ತಿದೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಮತ್ತು ಗೌತಮ್ ಶ್ರೀವಾತ್ಸವ್ ಸಂಗೀತ ಕಸ್ತೂರಿ ಮಹಲ್ ನ ಘಮಲನ್ನ ಹೆಚ್ಚಿಸಿದೆ. ಶ್ರೀ ಭವಾನಿ ಆರ್ಟ್ಸ್ ಬ್ಯಾನರ್ ನಡಿಯಲ್ಲಿ ರವೀಶ್ ಆರ್.ಸಿ ನಿರ್ಮಿಸಿರೋ ಕಸ್ತೂರಿ ಮಹಲ್ ಸಿನಿಮಾ ಇದೀಗ ರಿಲೀಸ್ ಗೆ ರೆಡಿಯಾಗಿದ್ದು, ಥಿಯೇಟರ್ ಗಳೂ ಸಂಪೂರ್ಣವಾಗಿ ತೆರೆಯೋದಕ್ಕಾಗಿ ಕಾಯ್ತಿದೆ ಚಿತ್ರತಂಡ.
ಟ್ರೈಲರ್ ಮೂಲಕ ನಿರೀಕ್ಷೆ ಮೂಡಿಸಿರೋ “ಕಸ್ತೂರಿ ಮಹಲ್” ಚಿತ್ರ ಸದ್ಯದಲ್ಲೇ ಪ್ರೇಕ್ಷಕರೆದುರಿಗೆ ಬರಲಿದೆ.
****