ಕೊರೋನಾ ದಿಂದ ಇಡೀ ದೇಶವೇ ತತ್ತರಿಸಿಹೋಗಿತ್ತು, ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಲಾಕ್ಡೌನ್ ಮಾಡಿದ್ದರ ಪರಿಣಾಮ ಎಲ್ಲಾ ಉದ್ಯಮಗಳು ನಷ್ಟದ ಹಾದಿ ಹಿಡಿದಿದ್ದವು, ಅದರಲ್ಲೂ ಕನ್ನಡ ಚಿತ್ರೋದ್ಯಮ ಮತ್ತು ಅದನ್ನೆ ಅವಲಂಭಿಸಿದ್ದ ಕಾರ್ಮಿಕರ ಬದುಕು ಬಾರಿ ಸಂಕಷ್ಟಕ್ಕೆ ಒಳಗಾಗಿತ್ತು, ಕೊರೊನ ನಿಯಂತ್ರಣಕ್ಕೆ ಬಂದ ಪರಿಣಾಮ 50% ಚಿತ್ರಮಂದಿರ ಭರ್ತಿಗೆ ಅವಕಾಶ ನೀಡಲಾಗಿತ್ತು, ಇದರ ಬೆನ್ನಲ್ಲೆ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳು ತೆರೆಕಾಣಲು ಸಿದ್ದವಿರುವುದರಿಂದ ಶೇ 100% ಆಸನಗಳ ಭರ್ತಿಗೆ ಚಿತ್ರ ನಿರ್ಮಾಪಕರು ಕಾಯುತ್ತಿದ್ದಾರೆ. ಹೀಗಾಗಿ 100% ಆಸನ ಭರ್ತಿಗೆ ಅವಕಾಶ ನೀಡುವಂತೆ ಕೋರಿ (ಬುಧವಾರ) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಖ್ಯಮಂತ್ರಿ ಬೊಮ್ಮಯಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ.

ಮುಖ್ಯಮಂತ್ರಿಗಳ ಪ್ರತಿಕ್ರಿಯೆ:
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮನವಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು ‘ಈ ವಿಚಾರವಾಗಿ ತಜ್ಞರ ಅಭಿಪ್ರಾಯ ಪಡೆದು ತೀರ್ಮಾನಿಸುತ್ತೇನೆ’ ಎಂದು ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ನಟಿ ತಾರಾ ಅವರು, ‘ಕೊರೊನಾದಿಂದಾಗಿ ಸಿನಿಮಾರಂಗ ತತ್ತರಿಸಿ ಹೋಗಿದೆ. ಮುಖ್ಯಮಂತ್ರಿಗಳು ನಮಗೆ ಚೆನ್ನಾಗಿ ಸ್ಪಂದಿಸಿದರು. ಸ್ವಾತಂತ್ರ್ಯ ದಿನಾಚರಣೆ ಬಳಿಕ ಮತ್ತೆ ನಾವೆಲ್ಲರೂ ಭೇಟಿ ಮಾಡಲು ಅವಕಾಶ ಕೊಡ್ತೀನಿ ಅಂದಿದ್ದಾರೆ, ಹೀಗಾಗಿ ಈ ಸಭೆ ಯಶಸ್ವಿಯಾಗಿದೆ. ತಜ್ಞರ ಜೊತೆ ಚರ್ಚಿಸಿ ಥಿಯೇಟರ್ಗಳಲ್ಲಿ ಶೇ. 100 ಆಸನ ಭರ್ತಿಗೆ ಅವಕಾಶ ನಿಡುವುದರ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.
****