ಸ್ಯಾಂಡಲ್ ವುಡ್ ನ ಖ್ಯಾತ ಗಾಯಕ ಹೇಮಂತ್ ಇಂದು ವೈಧ್ಯೆ ಕೃತಿಕಾ ಅವರನ್ನು ವಿವಾಹವಾಗಿದ್ದಾರೆ. ಬೆಂಗಳೂರಿನ ಅವಧಾನಿ ಕನ್ವೆನ್ಷನ್ ಸೆಂಟರ್ ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಕೃತಿಕಾ ಅವರೊಂದಿಗೆ ಹೇಮಂತ್ ಸಪ್ತಪದಿ ತುಳಿದಿದ್ದಾರೆ.

ಸಪ್ತಪದಿ ತುಳಿದ ಗಾಯಕ ಹೇಮಂತ್ ಕುಮಾರ್
ಗಾಯಕ ಹೇಮಂತ್ ಅವರು ಕನ್ನಡ ಚಿತ್ರರಂಗದ ಖ್ಯಾತ ಹಾಡುಗಾರ, ಪ್ರೀತ್ಸೆ ಸಿನಿಮಾಕ್ಕೆ ಹಾಡಿದ ಪ್ರೀತ್ಸೆ ಪ್ರೀತ್ಸೆ… ಹಾಡು ಗಾಯಕ ಹೇಮಂತ್ ಅವರಿಗೆ ಅತೀ ಹೆಚ್ಚು ಜನಪ್ರೀಯತೆ ತಂದುಕೊಟ್ಟಿತು. ಹಂಸಲೇಖ ಅವರ ಗರಡಿಯಲ್ಲಿ ಶಿಶ್ಯರಾಗಿ ಪಳಗಿದ್ದ ಹೇಮಂತ್ ಸಾಕಷ್ಟು ಹಿಟ್ ಸಾಂಗ್ ಗಳನ್ನು ಕನ್ನಡ ಚಿತ್ರರಂಹಕ್ಕೆ ನೀಡಿದ್ದಾರೆ. ಎಲ್ಲಾ ಸ್ಟಾರ್ ನಟರಿಗೂ ಗಾಯನ ಮಾಡಿರುವ ಹೇಮಂತ್ ಹಲವಾರು ಸಂಗೀತ ನಿರ್ದೇಶಕ ಸಂಗೀತಕ್ಕೆ ಸ್ವರ ನೀಡಿದ್ದಾರೆ. ಇದರಲ್ಲಿ ಹಂಸಲೇಖ, ವಿ.ಮನೋಹರ್, ಅರ್ಜುನ್ ಜನ್ಯ, ಗುರುಕಿರಣ್ ಪ್ರಮುಖರಾಗಿದ್ದಾರೆ. ಹೇಮಂತ್ ವಿವಾಹವಾಗಿರುವ ಕೃತಿಕಾ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ವೈಧ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.