ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿನಯದ ‘ಲವ್ ಯೂ ರಚ್ಚು’ ಸಿನಿಮಾದ ಶೂಟಿಂಗ್‌ನಲ್ಲಿ ವಿದ್ಯುತ್ ಅವಘಡ ಸಂಭವಿಸಿದ ಪರಿಣಾಮ ವಿವೇಕ್ ಎಂಬ ಫೈಟರ್ ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಚಿತ್ರದ ನಿರ್ದೇಶಕ ಶಂಕರ್, ಫೈಟ್ ಮಾಸ್ಟರ್ ವಿನೋದ್ ಮತ್ತು ಕ್ರೇನ್ ಆಪರೇಟರ್ ಮಹಾದೇವ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಬಿಡದಿ ಪೊಲೀಸರು ಕರೆದರೆ ವಿಚಾರಣೆಗೆ ಹೋಗುತ್ತೇನೆ ಎಂದು ನಿನ್ನೆ ಹೇಳಿದ್ದ ಗುರು ದೇಶಪಾಂಡೆ ಇಂದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಗುರು ದೇಶಪಾಡೆ ಮೃತ ವಿವೇಕ್ ಕುಟುಂದವರೊಂದಿಗೆ ಮಾತನಾಡಿದ್ದು 10 ಲಕ್ಷ ಪರಿಹಾರ ನೀಡುತ್ತೇನೆ ಎಂದಿದ್ದಾರೆ ಎನ್ನುವ ಮಾಹಿತಿ ಹೊರಬಂದಿದೆ.

ರಚಿತ ರಾಮ್ ಗೆ ಫುಲ್ ಕ್ಲಾಸ್ :
ತನ್ನದೆ ಸಿನಿಮಾದ ಚಿತ್ರೀಕರಣ ವೇಳೆ ಇಂಥ ದುರಂತ ನಡೆದರೂ ನಟಿ ರಚಿತಾ ರಾಮ್ ಯಾವುದೇ ಪ್ರತಿಕ್ರಿಯೆ ನೀಡರಲಿಲ್ಲ. ಆದರೆ ಇಂಥ ಸಮಯದಲ್ಲೂ ರಚಿತಾ ಸಾಮಾಜಿಕ ಜಾಲತಾಣದಲ್ಲಿ ತನ್ನ ಫೋಟೋ ಶೇರ್ ಮಾಡಿದ್ದರು. ಇದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದ್ದು, ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಳಿಕ ವಿವೇಕ್ ಸಾವಿಗೆ ಶ್ರದ್ಧಾಂಜಲಿ ಕೋರಿ ರಚಿತಾ ಟ್ವೀಟ್ ಮಾಡಿದರು. ವಿವೇಕ್ ಸಾವಿನ ಕುರಿತು ಪೋಸ್ಟ್ ಮಾಡುವ ಬದಲು ರಚಿತಾ, ಇಂದು ಬೆಳಗ್ಗೆ ತನ್ನ ಫೋಟೋ ಶೇರ್ ಮಾಡಿದ್ದರು. ರಚಿತಾ ಫೋಟೋ ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ಸರಿಯಾಗಿ ತರಾಟೆ ತೆಗೆದುಕೊಂಡಿದ್ದಾರೆ. ನಿಮ್ಮದೇ ಚಿತ್ರೀಕರಣ ಸೆಟ್ ನಲ್ಲಿ ಒಂದು ಜೀವ ಹೋಗಿದೆ. ಹೀಗಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿದೆ ನಿಮ್ಮ ಫೋಟೋ ಶೇರ್ ಮಾಡುತ್ತಿದ್ದೀರಾಲ್ಲಾ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಫೈಟರ್ ಸಾವಿನ ಬಗ್ಗೆ ರಚಿತಾ ಯಾವುದೇ ಪೋಸ್ಟ್ ಮಾಡಿರಲಿಲ್ಲ. ‘ಲವ್ ಯು ರಚ್ಚು’ ಸಿನಿಮಾದ ದುರ್ಘಟನೆ ಇಡೀ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ್ದರೂ ರಚಿತಾ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ.
‘ಸ್ವಲ್ಪನು ಕಾಮನ್ ಸೆನ್ಸ್ ಇಲ್ವಾ..‘
ರಚಿತಾ ನಡೆಯನ್ನು ಟೀಕಿಸಿರುವ ನೆಟ್ಟಿಗರು ಬಿಸಿ ಮುಟ್ಟಿಸಿದ್ದಾರೆ. ‘ಸ್ವಲ್ಪನು ಕಾಮನ್ ಸೆನ್ಸ್ ಇಲ್ವಾ ಮೇಡಂ ನಿಮಗೆ ಅಲ್ಲಿ ಒಂದು ಜೀವ ಹೋಗಿದೆ’ ಎಂದು ಒಬ್ಬರು ಕಾಮೆಂಟ್ ಮಾಡಿದ್ರೆ ಮತ್ತೊಬ್ಬ ವ್ಯಕ್ತಿ, ‘ತಾವೇ ನಟಿಸಿರುವ ಚಿತ್ರತಂಡದಿಂದ ಅವಗಡ ನಡೆದಿದೆ. ಅದರ ಬಗ್ಗೆ ಯೋಚಿಸೋದು ಬಿಟ್ಟು… ಈತರ’ ಎಂದು ಹೇಳಿದ್ದಾರೆ.
ರಚಿತಾ ರಾಮ್ ಟ್ವೀಟ್ ಗೆ ನೆಟ್ಟಿಗರು ಕಾಮೆಂಟ್ ಮಾಡಿ ‘ಟ್ವೀಟ್ ಮಾತ್ರನಾ ಅಥವಾ ಅವರ ಕುಟುಂಬಕ್ಕೆ ಏನಾದರು ಸಹಾಯ ಮಾಡುತ್ತೀರಾ’ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಕಾಮೆಂಟ್ ಮಾಡಿ ನಟ-ನಟಿಯರಿಗೆ ಕೊಡುವ ರಕ್ಷಣೆ, ಸುರಕ್ಷತೆಯನ್ನು ಉಳಿದವರಿಗೂ ಕೊಡಿ ಎಂದು ಹೇಳುತ್ತಿದ್ದಾರೆ.