ಕರ್ನಾಟಕದ ಮನೆ ಮನೆಗಳಲ್ಲಿ ಮನಸೋರೆಗೊಂಡಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಮತ್ತೆ ಪ್ರಾರಂಭವಾಗುತ್ತಿದ್ದು ಇದೇ ಆಗಸ್ಟ್ 14 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಈ ಹಿಂದೆ ಪ್ರಸಾರವಾಗುತ್ತಿದ್ದ ಶೋ ನ ಕೇಂದ್ರಬಿಂದು ಆಗಿದ್ದ ಖ್ಯಾತ ಗಾಯಕ ಎಸ್.ಪಿ.ಬಿ ಅವರು ಸ್ಪರ್ಧಿಗಳನ್ನು ಹುರುಪುಗೊಳಿಸುತ್ತಿದ್ದ ರೀತಿ, ತಪ್ಪುಗಳನ್ನು ಸರಿಪಡಿಸಿಕೊಳಲ್ಲು ನೀಡುತ್ತಿದ್ದ ಸಲಹೆಗಳು ಸ್ಫೂರ್ತಿದಾಯಕವಾಗಿದ್ದವು, ಈ ಕಾರ್ಯಕ್ರಮ ಅಸಂಖ್ಯಾತ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಹೊಸ ಗಾಯಕ ಗಾಯಕಿಯರನ್ನಾಗಿ ರೂಪಿಸಿತ್ತು. ಇಂದು ಎಸ್.ಪಿ.ಬಿ ಅವರು ಭೌತಿಕವಾಗಿ ನಮ್ಮೊಂದಿಗಿಲ್ಲ, ಈ ಕೊರತೆಯನ್ನ ತುಂಬಲು ಯಾರಿಂದಲೂ ಸಾಧ್ಯವಿಲ್ಲ, ಆದರೂ ಎದೆ ತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ಮೆರಗು ನೀಡಲು ವೇದಿಕೆಗೆ ಜೀವ ಕಳೆ ತುಂಬಲು ಎಸ್.ಪಿ.ಬಿ ಅವರ ಮಗ ಎಸ್.ಪಿ. ಚರಣ್ ಅವರು ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ.
ಸುಮಧುರ ಕಂಠದ ಜನಪ್ರೀಯ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ.., ಹಾಗೆಯೇ ಖ್ಯಾತ ಗಾಯಕ ರಘು ದೀಕ್ಷಿತ್ ರಂತಹ ಸಂಗೀತ ಕ್ಷೇತ್ರದ ದಿಗ್ಗಜರು ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಪ್ರಮುಖ ತೀರ್ಪುಗಾರರಾಗಿ ವೇದಿಕೆಗೆ ಮೆರುಗು ನೀಡಲಿದ್ದಾರೆ

ಪರಮೇಶ್ ಗುಂಡ್ಕಲ್
• ಕಲ್ಮಶವಿಲ್ಲದ, ನೆಗೆಟಿವಿಟಿ ಇಲ್ಲದೆ ಬರ್ತಾ ಇದ್ದ ರಿಯಾಲಿಟಿ ಕಾರ್ಯಕ್ರಮಗಳಲ್ಲಿ ಎದೆ ತುಂಬಿ ಹಾಡುವೆನು ಕೂಡ ಒಂದು… 2019 ರ ಕೊನೆಯಲ್ಲಿ ಕಾರ್ಯಕ್ರಮ ಆರಂಭಿಸೋಣ ಎಂಬ ಪತ್ರವನ್ನ ಎಸ್.ಪಿ.ಬಿ. ಇ-ಮೇಲ್ ಮೂಲಕ ಕಳುಹಿಸಿದ್ದರು ಆದರೆ ಸಾಧ್ಯವಾಗಲಿಲ್ಲ.. ಈಗ ಅವರ ಆಶಿರ್ವಾದದ ಮೂಲಕ ಈ ಕಾರ್ಯಕ್ರಮ ಹಳೆ ಮೆರುಗನ್ನ ಮತ್ತೆ ಕಟ್ಟಿಕೊಡಲಿದೆ. ಪರಮೇಶ್ ಗುಂಡ್ಕಲ್.

• ಎದೆ ತುಂಬಿ ಹಾಡುವೆನು ಗೆ ನೀವು ಬರಬೇಕು ಅಂತ ಕರೆದಾಗ ಎಕ್ಸೈಟ್ ಆಯ್ತು.., ಎಸ್.ಪಿ.ಬಿ ಸರ್ ಗುರು ನಾವೆಲ್ಲ ಶಿಷ್ಯವೃಂಧ. ಅವರು ಇದ್ದಿದ್ದರೆ ಇನ್ನೂ ಚೆಂದ ಇರ್ತಿತ್ತು. ಇಡೀ ಕಾರ್ಯಕ್ರಮ ಅವರ ಆಶಿರ್ವಾದದಿಂದಲೇ ನಡೆಯಲಿದೆ. ರಘು ದಿಕ್ಷೀತ್, ಗಾಯಕ

• ಎಸ್.ಪಿ.ಬಿ. ಸರ್ ಅಂದ್ರೆ ಹಿತವಾದ ಸುಮಧುರವಾದ ಒಂದು ಅನಿವಾರ್ಯತೆ ಅಂತ ಅವ್ರನ್ನ ಡಿಸ್ಕ್ರೈಬ್ ಮಾಡ್ತಿನಿ. ನಾನು ಇಷ್ಟು ವರ್ಷಗಳ ಕಾಲ ಜಡ್ಜ್ ಆಗಿಯೇ ಇದ್ದೆ.., ಎದೆ ತುಂಬಿ ಹಾಡುವೆನು ಅಂದಾಗ ಆ ಫೀಲ್ ಬೇರೆ ಸೋ ನಾನು ಒಪ್ಪಿದೆ. ಎಸ್.ಪಿ.ಬಿ. ಸರ್ ಅವ್ರ ಗಾಯನ ಶೈಲಿಗೆ ಸರಿಸಾಟಿಯಿಲ್ಲ… ಅವರೊಂದು ಎನ್ಸೈಕ್ಲೋಪೀಡಿಯಾ ಇದ್ದಾಗೆ. ಅವರು ಹಾಡದ ಶೈಲಿಯೇ ಇಲ್ಲ. ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮ ಇನ್ನು ಮುಂದೆ ಅವರ ಕುರಿತಾದ ಸಂಗೀತ ವಿಶೇಷತೆಯನ್ನ ಸಲಹೆಗಳ ರೂಪದಲ್ಲಿ ಸ್ಪರ್ಧಿಗಳಿಗೆ ತಿಳಿಸುವ ಉದ್ದೇಶವಿದೆ. ಯಾಕಂದ್ರೆ ಹುಡುಕುದ್ರು ಅವರಂತ ಗಾಯಕ ಜೀವ ಮತ್ತೊಂದಿಲ್ಲ. ಒಟ್ಟಾರೆ ಅವ್ರನ್ನ ಒಂದಲ್ಲ ಒಂದು ಬಗೆಯಲ್ಲಿ ನೆನಪಿಸುವ ಉದ್ದೇಶವಿದೆ. ಬೇರೆ ರಿಯಾಲಿಟಿ ಶೋಗಳಿಗಿಂತ ಈ ಕಾರಣಕ್ಕಾಗಿ ಇದು ಭಿನ್ನ. ರಾಜೇಶ್ ಕೃಷ್ಣನ್ ಹಿನ್ನೆಲೆ ಗಾಯಕ,

ವಿ. ಹರಿಕೃಷ್ಣ ಸಂಗೀತ ನಿರ್ದೇಶಕ
ದೇವರ ರೂಪದ ಕಲ್ಮಶವಿಲ್ಲದ ಬಾಲು ಸರ್ ಈ ಕಾರ್ಯಕ್ರಮದ ಜೀವಾಳ ಆಗಿದ್ರು. ಭಯವಿದೆ ಅವರಿದ್ದ ಸ್ಥಾನದಲ್ಲಿ ನಾವು ಇರೋಕೆ. ಸ್ಪರ್ಧಿಗಳಿರಲಿ ನಾವುಗಳು ತಪ್ಪು ಮಾಡದೆ ಇರಬೇಕು ಈ ವೇದಿಕೆಯಲ್ಲಿ. ಬಾಲು ಸರ್ ಅವ್ರಲ್ಲಿದ್ದ ವಿನಯ, ಪ್ರೀತಿ, ಶಿಸ್ತು, ತಾಳ್ಮೆಗಳೊಂದಿಗೆ ನಾವು ಈ ಕಾರ್ಯಕ್ರಮವನ್ನ ನಡೆಸಿಕೊಡಬೇಕಿದೆ. ಅವರೊಂದಿಗಿನ ನೆನಪುಗಳನ್ನ, ಹಂಚಿಕೊಳ್ಳುವ ಕಾರ್ಯಕ್ರಮವಾಗಲಿದೆ ಈಗ ಬರಲಿರುವ ಎದೆ ತುಂಬಿ ಹಾಡುವೆನು.. ವಿ. ಹರಿಕೃಷ್ಣ ಸಂಗೀತ ನಿರ್ದೇಶಕ
• ನನಗೆ ಹೆಚ್ಚು ಕನ್ನಡ ವಕ್ಯಾಬುಲರಿ ಗೊತ್ತಿಲ್ಲ ಕ್ಷಮಿಸಿ… ಅಪ್ಪನಿಗೆ ಕನ್ನಡದ ಬಗ್ಗೆ, ಕನ್ನಡಿಗರ ಬಗ್ಗೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಬಗ್ಗೆ ಅಪಾರ ಪ್ರೀತಿ ಇತ್ತು. ಈಟಿವಿ ಕನ್ನಡ ಎದೆ ತುಂಬಿ ಹಾಡುವೆನು ನಿಲ್ಲಿಸಿದಾಗ ಅಪ್ಪ ಸ್ವಲ್ಪ ನೊಂದುಕೊಂಡಿದ್ದರು. ಪರಮ್ ಸರ್ ಮತ್ತೆ ಶೋ ಮಾಡಲು ಕರೆದಾಗ ಅಪ್ಪ ಖುಷಿಯಾಗಿದ್ರು ಆದ್ರೆ ಅವಕಾಶ ಆಗಲಿಲ್ಲ. ಈಗ ಅವರಿಲ್ಲ.. ಅಪ್ಪ ಒಬ್ಬರೇ ನಿರೂಪಣೆ, ಸ್ಪರ್ಧಿಗಳ ಪರಿಚಯ, ತೀರ್ಪು ಎಲ್ಲಾ ಮಾಡ್ತಾ ಇದ್ರು ತುಂಬಾ ಶಾಕ್ ಅನ್ಸತ್ತೆ ಹೇಗೆ ಮಾಡ್ತಿದ್ರೋ ಎಲ್ಲವನ್ನೂ ಅಂತ.
ಮತ್ತೆ ಶುರುವಾಗುತ್ತಿರೋ ಈ ಕಾರ್ಯಕ್ರಮದಲ್ಲಿ ಮೂರು ಜನ ಜಡ್ಜಸ್ ಇದ್ದಾರೆ, ನಾನು ಕೂಡ ಅಕೇಶನ್ ಇದ್ದಾಗ ಬಂದು ಎಂಜಾಯ್ ಮಾಡ್ತಿನಿ ಹೆಚ್ಚೆಚ್ಚು ಕನ್ನಡವನ್ನ ಕಲಿಯುತ್ತೇನೆ. ಎಸ್.ಪಿ. ಚರಣ್ ಎಸ್.ಪಿ.ಬಿ. ಪುತ್ರ*(ಅಪ್ಪನ ಸಮಾಧಿ ನಿರ್ಮಾಣ ಕೆಲಸ ಆರಂಭವಾಗಲಿದೆ. ಎಸ್.ಪಿ.ಬಿ. ಫ್ಯಾನ್ಸ್ ಅಸೋಸಿಯೇಷನ್ ಎಲ್ಲಾ ಸೇರಿ ಸರ್ಕಾರವನ್ನ ಅಪ್ರೋಚ್ ಮಾಡಲಿದೆ.)
ಕೊವೀಡ್ ಕಾರಣಕ್ಕೆ ಬೇರೆ ಬೇರೆ ಊರುಗಳಲ್ಲಿ ಹೋಗಿ ಸ್ಪರ್ಧಿಗಳ ಸೆಲೆಕ್ಷನ್ ಮಾಡಲಾಗುತ್ತಿಲ್ಲ. ಸಣ್ಣ ವಯಸ್ಸಿನವರಿಂದ ವಯೋವೃದ್ಧರವರೆಗಿನವರು ಈ ಕಾರ್ಯಕ್ರಮದ ಸ್ಪರ್ಧಿಗಳಾಗಬಹುದು. ಎಸ್.ಪಿ.ಬಿ. ಸರ್ ಅವ್ರ ಮೂಲ ಶೋ ಗೆ ಧಕ್ಕೆಯಾಗದ ರೀತಿಯಲ್ಲಿ, ಇಂದಿನ ಸ್ಪರ್ಧಾ ಜಗತ್ತಿಗೆ ಹೊಂದಿಕೊಂಡಂತೆ ಈ ಕಾರ್ಯಕ್ರಮ ಮೂಡಿ ಬರಲು ಸಕಲ ತಯಾರಿ ಆಗ್ತಿದೆ.
ಟೇಲಿವಿಷನ್ ಜೊತೆಗೆ ವೂಟ್ ಅಲ್ಲಿಯೂ ಕಾರ್ಯಕ್ರಮ ಸಿಗಲಿದೆ.
ನಾಟಕೀಯತೆಗೆ ಅವಕಾಶವಿಲ್ಲ…, ಸ್ಕ್ರೀಪ್ಟೇಡ್ ಅದ್ಯಾವುದು ಇದರಲ್ಲಿರಲ್ಲ…. ಟಿ.ಆರ್.ಪಿ.ಗಾಗಿ ಇಲ್ಲಿ ಏನು ನಡೆಯಲ್ಲ.., ಟಿ.ಆರ್.ಪಿ.ಗಾಗಿ ಅನ್ನೋ ಕಲ್ಮಶ ಇದರಲ್ಲಿ ಇರಲ್ಲ… ಜಡ್ಜಸ್ ಅವ್ರಲ್ಲಿ ಎಸ್.ಪಿ.ಬಿ. ಅವ್ರನ್ನ ನೋಡೋದಲ್ಲ. ಅವರ ಹಾಡುಗಳು, ಅವರ ತೀರ್ಪಿನ ಶೈಲಿ, ಹಾಡಿನ ಶೈಲಿಯ ಸಲಹೆಗಳನ್ನ ಹೇಳುವಲ್ಲಿ ಎಸ್.ಪಿ.ಬಿ. ಸರ್ ಅವ್ರನ್ನ ಕಾಣಬೇಕು. ಆ ಜವಾಬ್ದಾರಿಯನ್ನ ಮೂರು ಜಡ್ಜಸ್ ನಿರ್ವಹಿಸಲಿದ್ದಾರೆ.
ಸೀಸನ್ ರೀತಿಯಲ್ಲೇ ಇರತ್ತೆ 16 ವಾರದಿಂದ 18 ವಾರ ಶೋ ನಡೆಯತ್ತೆ. 10 ಲಕ್ಷ ಬಹುಮಾನ ಇರತ್ತೆ ಗೆದ್ದವರಿಗಾಗಿ ಆದರೆ ಶೋ ಜನಪ್ರೀಯತೆಗೆ ತಕ್ಕಂತೆ ಆನಂತರದಲ್ಲಿ ಸ್ಪಾನ್ಸರ್ ಸಿಕ್ಕಿ ಹೆಚ್ಚುವ ಸಾಧ್ಯತೆಯೂ ಇದೆ.
****