17.8 C
Bengaluru
Saturday, December 10, 2022
spot_img

‘ಲವ್ ಯೂ ರಚ್ಚು’ ಶೂಟಿಂಗ್ನಲ್ಲಿ ಫೈಟರ್ ಸಾವು..!

ಅಜಯ್ ರಾವ್ ,ರಚಿತ ರಾಮ್ ನಟನೆಯ ಗುರು ದೇಶಪಾಂಡೆ ನಿರ್ಮಾಣದ “ಲವ್ ಯೂ ರಚ್ಚು” ಸಿನಿಮಾದ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಅವಘಡ ನಡೆದು ಓರ್ವ ಸಾಹಸ ಕಲಾವಿದ ವಿವೇಕ್ ಸಾವಿಗೀಡಾದ ಘಟನೆ ನಡೆದಿದೆ.

ಕನ್ನಡ ಸಿನಿಮಾದ “ ಲವ್ಯೂ ರಚ್ಚು “ ಸಿನಿಮಾದ ಸಾಹಸ ದೃಶ್ಯಗಳನ್ನು ಬಿಡದಿಯ ಈಗ್ಲಟನ್ ರೆಸಾರ್ಟ್ ವ್ಯಾಪ್ತಿಯಲ್ಲಿ ಚಿತ್ರೀಕರಿಸಲಾಗುತ್ತಿತ್ತು, 11 ಕೆವಿ ಹೈ ಟೆನ್ಶನ್ ವಿದ್ಯುತ್ ಸಂಪರ್ಕ ಹಾದು ಹೋಗಿರುವ ಕೆಳಗೆ  ಕ್ರೇನ್ ನಿಲ್ಲಿಸಿ ಚಿತ್ರೀಕರಣ ಮಾಡುತ್ತಿದ್ದ ಸಮಯದಲ್ಲಿ ವಿಧ್ಯುತ್ ತಂತಿಗೆ ಕ್ರೇನ್ ತಗುಲಿ ಈ ದುರ್ಘಟನೆ ನಡೆದಿದೆ. ಯಾವುದೇ ಮುನ್ನಚಿರಿಕೆ ಇಲ್ಲದೆ ಅಜಾಗರೂಕತೆಯಿಂದ ಮಾಡಿದುವ ತಪ್ಪಿನಿಂದಾಗಿ ಒಂದು ಜೀವ ಹೋಗಿರುವುದು ದುರಾದೃಷ್ಟಕರ.

ಮೃತ ಸಾಹಸ ಕಲಾವಿದ ವಿವೇಕ್
ಮೃತ ಸಾಹಸ ಕಲಾವಿದ ವಿವೇಕ್

ಇಂತಹ ಅಪಾಯದ ಸನ್ನಿವೇಶದಲ್ಲಿ ಯಾವುದೇ ಚಿತ್ರೀಕರಣ ಮಾಡಬಾರದು ಎಂಬ ಕಾನೂನು ಇದ್ದರೂ ಅದೆಲ್ಲವನ್ನು ನಿರ್ಲಕ್ಷಿಸಿ ಚಿತ್ರೀಕರಣ ಮಾಡಿರುವ ಚಿತ್ರ ತಂಡ, ಈ ಸಾಹಸ ದೃಶ್ಯ ದ ಚಿತ್ರೀಕರಣಕ್ಕೆ ಅನುಮತಿ ಪಡೆದಿತ್ತಾ ಎಂದು ಪೋಲೀಸ್ ತನಿಖೆಯಿಂದ ಹೊರಬೀಳಬೇಕಿದೆ. ಚಿತ್ರದ ಸಾಹಸ ನಿರ್ದೇಶಕ ವಿನೋದ್ ಅವರನ್ನು ಪೋಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇಡೀ ಘಟನೆಗೆ ಚಿತ್ರತಂಡದ ನಿರ್ಲಕ್ಷವೇ ಕಾರಣ ಎಂದು ಹೇಳಲಾಗುತ್ತಿದ್ದು, ಈ ನಿರ್ಲಕ್ಷದಿಂದಾಗಿ ವಿವೇಕ್ ಎಂಬ ಯುವ  ಫೈಟಿಂಗ್ ಕಲಾವಿದನ ಜೀವ ಹೋಗಿರುವುದು ಮಾತ್ರ ದುರಾದೃಷ್ಟಕರ.

“ ಮಾಸ್ತೀಗುಡಿ” ಚಿತ್ರೀಕರಣ ವೇಳೆ ನಡೆದ ದುರಂತ ನಾಡಿನ ಜನರನ್ನ ಬೆಚ್ಚಿಬೀಳಿಸಿತ್ತು ,ಆ ಕಹಿ ನೆನಪು ಮಾಸುವ ಮುನ್ನವೇ “ಲವ್ಯೂ ರಚ್ಚು” ಚಿತ್ರಿಕರಣ ದ ವೇಳೆ ನಡೆದಿರುವುದು ದುರ್ಘಟನೆ ನೋಡಿದರೆ ತಪ್ಪುಗಳಿಂದ ನಾವು ಪಾಠ ಕಲಿಯುವಂತೆ ಕಾಣುತ್ತಿಲ್ಲಾ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles