ಸ್ಯಾಂಡಲ್ ವುಡ್ ನ ಜನಪ್ರಿಯ ಜೋಡಿಗಳಾಗಿ ಯಶಸ್ವೀಯಾಗಿ ನಿಜ ಬದುಕಿನಲ್ಲು ಜೋಡಿಯಾದ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಪ್ರೀತಿಯ ಪುಟ್ಟ ಮಕ್ಕಳಾದ ಐರಾ ಮತ್ತು ಯಥರ್ವ ಅವರ ಕ್ಯೂಟ್ ಕ್ಯೂಟ್ ಫೋಟೋ ಮತ್ತು ವೀಡಿಯೋಗಳನ್ನ ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.

ರಾಧಿಕಾ ಪಂಡಿತ್ ಶೇರ್ ಮಾಡುವ ವೀಡಿಯೋಗಳಗೆ ಅಭಿಮಾನಿ ಮತ್ತು ಸ್ನೇಹಿತರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತದೆ. ಮತ್ತೀಗ ಅಪ್ಪ ಯಶ್ ಮತ್ತು ಮಗ ಯಥರ್ವ ಇಬ್ಬರು ಆಟವಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಬಾರಿ ವೈರಲ್ ಆಗಿದೆ. ಮಗ ಯಥರ್ವ ತನ್ನ ತಂದೆಯ ಎದೆಯ ಮೇಲೆ ಕುಳಿತು ಆಟವಾಡುತ್ತಾ ಯಶ್ ಅವರ ಮೂಗನ್ನು ಕಚ್ಚುತ್ತಿರುವ ವೀಡಿಯೋ ಸಕತ್ ಕ್ಯೂಟ್ ಆಗಿದೆ. ಯಶ್ ಎದೆಯ ಮೇಲೆ ಕುಳಿತು ಪದೇ ಪದೇ ಮೂಗನ್ನು ಕಚ್ಚಲು ಬಂದಾಗ ಮೂಗನ್ನು ಮುಚ್ಚಿಕೊಳ್ಳುವ ಯಶ್ , ಮಗನಿಗೆ ಆರ್ ಯೂ ಜೋಂಬಿ ಎಂದು ಕೇಳುತ್ತಿರುವ ವೀಡಿಯೋವನ್ನುಹಂಚಿಕೊಂಡಿರುವ ರಾಧಿಕಾ ಪಂಡಿತ್ “ಊಟಕ್ಕಿಂತ ತಂದೆಯ ಮೂಗು ಹೆಚ್ಚು ರುಚಿಯಾದಾಗ ಎಂದು ಕ್ಯಾಪ್ಷನ್ ನೀಡಿದ್ದಾರೆ”
****