
ಸ್ಯಾಂಡಲ್ ವುಡ್ ನಲ್ಲಿ ಹೊಸ ಬಗೆಯ ಸಕ್ಸಸ್ ಸಿನಿಮಾಗಳನ್ನು ಕೊಡುತ್ತಾ ಬಂದಿರುವ ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ಸಾಲು ಸಾಲು ಹೊಸ ಸಿನಿಮಾಗಳನ್ನು ಅನೌನ್ಸ್ ಮಾಡ್ತಾ ಸಿನಿ ಪ್ರೀಯರ ಮನಗೆದ್ದಿರುವ ಸಂಸ್ಥೆ ಇಂದು ಮತ್ತೊಂದು ಹೊಸ ಚಿತ್ರದ ಪೋಸ್ಟರ್ ಒಂದನ್ನ ರಿಲೀಸ್ ಮಾಡಿದ್ದು ಚಿತ್ರ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದನ್ನ ನೀಡಿದೆ. ಹೊಸ ಚಿತ್ರಕ್ಕೆ ಕಾಂತಾರಾ ಎಂದು ಟೈಟಲ್ ಇಟ್ಟಿದ್ದು, ಚಿತ್ರದ ನಾಯಕನಾಗಿ ರಿಷಬ್ ಶೆಟ್ಟಿ ಅಭಿನಯಿಸಲಿದ್ದಾರೆ. ಚಿತ್ರದ ಮತ್ತೊಂದು ವಿಶೇಷ ಎಂದರೆ ನಿರ್ದೇಶನದ ಹೊಣೆಯೂ ರಿಷಬ್ ಶೆಟ್ಟಿ ಅವರದ್ದೇ ಆಗಿದೆ.
****