ಪ್ರಮೋಷನಲ್ ಸಾಂಗ್ ಬಿಡುಗಡೆ ಮಾಡಿ ಖುಷಿಯಲ್ಲಿರುವ ಸಲಗ ಸಿನಿಮಾ ತಂಡಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಮಾಡಿರುವ ವಿಶ್ ಮತ್ತೊಂದು ಖುಷಿಗೆ ಕಾರಣವಾಗಿದೆ. ಸಿನಿಮಾ ರಿಲೀಸ್ ಗೂ ಮುನ್ನವೇ ಬಾರಿ ಸದ್ದು ಮಾಡ್ತಿರೊ ಸಲಗ ಚಿತ್ರದ ಹಾಡುಗಳ ಬಗ್ಗೆ ಶಿವರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಮೋಷನಲ್ ಸಾಂಗ್ ಜುಟ್ಟು.. ಹಾಡು ಕೇಳಿ ವಿಜಿ ಅಭಿಮಾನಿಗಳು ಸಕತ್ ಎಂಜಾಯ್ ಮಾಡ್ತಿದ್ದಾರೆ. ಸಲಗ ಚಿತ್ರದ ಹಾಡುಗಳು ಒಂದಕ್ಕಿಂತ ದು ವಿಭಿನ್ನವಾಗಿದ್ದು ಕೇಳುಗರಿಗೆ ಮಸ್ತ್ ಕಿಕ್ ಕೊಡ್ತಿವೆ.

ಸಾಂಗ್ ನ ಮತ್ತೊಂದು ವಿಶೇಷ ಅಂದ್ರೆ ಸಿದ್ದಿ ಜನಾಂಗದ ಗಿರೀಜಾ ಸಿದ್ದಿ, ಗೀತಾ ಸಿದ್ದಿ ಮುಂತಾದವ್ರಿಂದ ಹಾಡನ್ನು ಹಾಡಿಸಲಾಗಿದೆ.., ಈ ಸಾಂಗ್ ಒಂದು ಟ್ರೆಂಡ್ ಕ್ರಿಯೇಟ್ ಮಾಡ್ಬೋದು ಅಂತ ಸಿನಿ ಪ್ರೀಯರು ಹೇಳ್ತಿರೋದು ಚಿತ್ರ ತಂಡದ ಹುರುಪು ಹೆಚ್ಚಾಗುವಂತೆ ಮಾಡಿದೆ.
****