ರಾಜ್ ಮೊಮ್ಮಗಳು ಧನ್ಯಾ ಅಭಿನಯಿಸುತ್ತ್ತಿರುವ ನಿನ್ನ ಸನಿಹಕೆ ಟ್ರೈಲರ್ ಸಕತ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು ಇದೇ ಆಗಸ್ಟ್ 20 ರಂದು ಚಿತ್ರ ಬಿಡುಗಡೆ ಆಗ್ತಿರೋದಕ್ಕೆ ಅಣ್ಣವ್ರ ಕುಟುಂಬ ಫುಲ್ ಖುಷಿಯಾಗಿದೆ. ಟ್ರೇಲರ್ ನೋಡಿ ಮೆಚ್ಚಿರುವ ಶಿವಣ್ಣ ತನ್ನ ತಂಗಿಯ ಮಗಳ ಸಿನಿ ಜರ್ನಿಗೆ, ಹ್ಯಾಪಿ ಜರ್ನಿ ಎಂದು ಶುಭ ಹಾರೈಸಿದ್ದಾರೆ. ಈಗಾಗಲೆ ರಿಲೀಸ್ ಆಗಿರುವ ಸಾಂಗ್ಸ್ ಹಿಟ್ ಆಗಿರುವುದು ಶಿವಣ್ಣ ನ ಖುಷಿ ಹೆಚ್ಚುವಂತೆ ಮಾಡಿದೆ

ಇದೇ ವೇಳೆ ಚಿತ್ರಕ್ಕೆ ಸಂಗೀತ ನೀಡಿರುವ ರಘು ಧೀಕ್ಷಿತ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರೋ ರಘು ಅವರ ಸಂಗೀತ ವಯಕ್ತಿಕವಾಗಿ ಬಹಳ ಇಷ್ಟ ಪಡುವ ಶಿವಣ್ಣ ನಿನ್ನ ಸನಿಹಕೆ ಚಿತ್ರಕ್ಕೆ ನೀಡಿರುವ ಮ್ಯೂಸಿಕ್ ಬಗ್ಗೆ ಪುಲ್ ಇಂಪ್ರೆಸ್ ಆಗಿದ್ದಾರೆ. ಆಗಸ್ಟ್ 20 ರಂದು ಬಿಡುಗಡೆ ಆಗುತ್ತಿರುವ ನಿನ್ನ ಸನಿಹಕೆ ಚಿತ್ರ ತಂಡಕ್ಕೆ ಶಿವಣ್ಣ ಶುಭ ಹಾರೈಸಿದ್ದಾರೆ.
****