‘ನಿನ್ನ ಸನಿಹಕೆ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ಸದ್ದು ಮಾಡ್ತಿದೆ, ಡಾ. ರಾಜ್ ಕುಟುಂಬದ ಕುಡಿ ಧನ್ಯ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ ಇದರ ಜೊತೆಗೆ ಚಿತ್ರದ ಹಾಡೊಂದನ್ನು ಹಾಡಿರುವ ಧನ್ಯ ಗಾಯಕಿಯಾಗಿಯೂ ಸೈ ಎನ್ನಿಸಿಕೊಂಡಿದ್ದಾರೆ. ಈಗಾಗಲೇ ಸಾಂಗ್ ಸಕತ್ ಕ್ರೇಜ್ ಕ್ರಿಯೇಟ್ ಮಾಡಿದ್ದು ಸಿನಿ ಪ್ರಿಯರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ಧನ್ಯ ರ ಸಿನಿಮಾ ಎಂಟ್ರಿ ಗೆ ಅಣ್ಣವ್ರ ಕುಟುಂಬವು ಕೂಡ ಫುಲ್ ಖುಷಿಯಾಗಿದ್ದು ಪುನೀತ್ ರಾಜಕುಮಾರ್ ಅವರು ಸಂತಸ ಹಂಚಿಕೊಂಡಿದ್ದಾರೆ. ಧನ್ಯ ಪುನೀತ್ ಗೆ ಅಕ್ಕನ ಮಗಳಾಗಿದ್ದು ಪ್ರೀತಿಯಿಂದ ಅವರು ಡಿಂಪಿ ಎಂದು ಕರೆಯುತ್ತಾರೆ, ಅಕ್ಕನ ಮಗಳ ಸಿನಿ ಜರ್ನಿಯಿಂದ ಸಕತ್ ಖಷಿಯಾಗಿರುವ ಪುನೀತ್ ಧನ್ಯಾ ಅವರಿಗೆ ಶುಭ ಹಾರೈಸಿದ್ದಾರೆ. ಈಗಾಗಲೆ ರಿಲೀಸ್ ಆಗಿರುವ ಟ್ರೈಲರ್ ನೋಡುಗರ ಕುತೂಹಲವನ್ನು ಹೆಚ್ಚಿಸಿದೆ, ಹಾಡುಗಳು ಕೂಡ ಹೆಚ್ಚು ಜನಪ್ರಿಯ ಆಗಿದ್ದು ಇದೇ ಆಗಸ್ಟ್ 20 ರಂದು ಬಿಡುಗಡೆ ಆಗುತ್ತಿರುವ ನಿನ್ನ ಸನಿಹಕೆ ಚಿತ್ರವನ್ನು ಸುರಕ್ಷತೆಯಿಂದ ಚಿತ್ರಮಂದಿರಕ್ಕೆ ಬಂದು ನೋಡಿ ಯುವ ಪ್ರತಿಭೆಗಳನ್ನ ಪ್ರೋತ್ಸಾಹಿಸುವಂತೆ ಮನವಿ ಮಾಡಿದ್ದಾರೆ.