29.4 C
Bengaluru
Sunday, February 5, 2023
spot_img

ಪ್ರೇಮ್ – ಧ್ರುವಾ ಕಾಂಬಿನೇಷನ್ನಲ್ಲಿ ಬರಲಿದೆ ಸಿನಿಮಾ..!

ಕನ್ನಡ ಚಿತ್ರ ಜಗತ್ತಿನ ಖ್ಯಾತ ನಿರ್ದೇಶಕ ಜ್ಯೋಗಿ ಪ್ರೇಮ್ ಸದ್ಯ ಏಕ್ ಲವ್ ಯಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರೇಮ್ ಪತ್ನಿ, ನಟಿ ರಕ್ಷಿತಾ ಸಹೋದರ ರಾಣಾ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ‘ಏಕ್ ಲವ್ ಯಾ’ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ.

ಪ್ರೇಮ್ - ಧ್ರುವಾ ಕಾಂಬಿನೇಷನ್ನಲ್ಲಿ ಬರಲಿದೆ ಸಿನಿಮಾ..!
ಪ್ರೇಮ್ – ಧ್ರುವಾ ಕಾಂಬಿನೇಷನ್ನಲ್ಲಿ ಬರಲಿದೆ ಸಿನಿಮಾ..!

ಇದರ ಬೆನ್ನಲ್ಲೇ ಪ್ರೇಮ್ ಹೊಸ ಸಿನಿಮಾದ ಸುದ್ದಿ ಸದ್ದು ಮಾಡುತ್ತಿದ್ದಾರೆ. ನಿರ್ದೇಶಕ ಪ್ರೇಮ್ ಮುಂದಿನ ಸಿನಿಮಾ ಯಾರ ಜೊತೆ ಎನ್ನುವ ಚರ್ಚೆ ನಡೆಯುತ್ತಿದೆ. ಪ್ರೇಮ್ ಮುಂದಿನ ಸಿನಿಮಾದಲ್ಲಿ ಸ್ಟಾರ್ ನಟರ ಹೆಸರು ಕೇಳಿಬರುತ್ತಿತ್ತು. ಇದೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ನಟ ಧ್ರುವ ಸರ್ಜಾ ಜೊತೆ ಪ್ರೇಮ್ ಹೊಸ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ.

ಈಗಾಗಲೇ ಸಿನಿಮಾ ವಿಚಾರವಾಗಿ ಪ್ರೇಮ್ ಮತ್ತು ಧ್ರುವ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಇದೊಂದು ಮಾಸ್ ಕಮರ್ಷಿಯಲ್ ಸಿನಿಮಾವಾಗಿದ್ದು, ಪ್ರೇಮ್ ಮತ್ತು ಧ್ರುವ ಒಟ್ಟಿಗೆ ಕೆಲಸ ಮಾಡುವುದು ಬಹುತೇಕ ಖಚಿತ ಎನ್ನುತಿವೆ ಮೂಲಗಳು. ಅಂದಹಾಗೆ ಈ ಮೇಗಾ ಪ್ರಾಜೆಕ್ಟ್ ಗೆ ದೊಡ್ಡ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲು ಮುಂದಾಗಿದೆಯಂತೆ.

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles