ಎರಡನೇ ಲಾಕ್‌ಡೌನ್ ಆದ್ಮೇಲೆ ಮೊದಲ ಹೊಸ ಚಿತ್ರ ಥಿಯೇಟರ್‌ಗೆ ಬರ್ತಿದೆ. ಆಗಸ್ಟ್ 6ನೇ ತಾರೀಖು ಕಲಿವೀರ ಸಿನಿಮಾ ರಿಲೀಸ್ ಅಗುತ್ತಿದ್ದು, ಬಹಳ ತಿಂಗಳ ನಂತರ ಚಿತ್ರಮಂದಿರಕ್ಕೆ ಬರುತ್ತಿರುವ ಮೊದಲ ಸಿನಿಮಾ ಎನ್ನುವ ಕಾರಣಕ್ಕೆ ವಿಶೇಷವಾಗಿ ಗಮನ ಸೆಳೆಯುತ್ತಿದೆ.

‘ಕನ್ನಡ ದೇಶದೋಳ್’ ಚಿತ್ರ ನಿರ್ದೇಶಿಸಿದ್ದ ಅವಿ, ಈಗ ಕಲಿವೀರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಉತ್ತರ ಕರ್ನಾಟಕ ಮೂಲದ ಏಕಲವ್ಯ ಈ ಚಿತ್ರದ ನಾಯಕ. ಕಲಿವೀರ ಔಟ್ ಅಂಡ್ ಔಟ್ ಆಕ್ಷನ್ ಮನರಂಜನಾ ಪ್ಯಾಕೇಜ್ ಆಗಿದ್ದು, ಈ ಪ್ರಾಜೆಕ್ಟ್‌ಗಾಗಿ ನಟ ಏಕಲವ್ಯ ಕಲರಿಯಪಟ್ಟು, ಯೋಗ, ಮಾರ್ಷಲ್ ಅರ್ಟ್ಸ್ ತರಬೇತಿ ಪಡೆದುಕೊಂಡಿದ್ದಾರೆ.
‘ಕಲಿವೀರ’ ಸಿನಿಮಾದಲ್ಲಿ ಪಾವನಗೌಡ, ಚಿರಶ್ರಿ ಅಂಚನ್ ನಾಯಕಿಯಾಗಿ ನಟಿಸಿದ್ದಾರೆ. ತಬಲ ನಾಣಿ, ಟಿಎಸ್ ನಾಗಾಭರಣ, ಡ್ಯಾನಿ ಕುಟ್ಟಪ್ಪ, ಅನಿತಾ ಭಟ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಜ್ಯೋತಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಿಸಲಾಗಿದ್ದು, ವಿ ಮನೋಹರ್ ಸಂಗೀತ ಸಂಯೋಜನೆ ಮಾಡಿದ್ದಾರೆ.