23.8 C
Bengaluru
Thursday, December 8, 2022
spot_img

ಅಣ್ಣಾವ್ರ ಮೊಮ್ಮಗಳಿಂದ ಪ್ರೀತಿ ಪಾಠ: ಜನ ಮೆಚ್ಚಿದ ನಿನ್ನ ಸನಿಹಕೆ ಟ್ರೈಲರ್..

ಕನ್ನಡ ಚಿತ್ರರಂಗದಲ್ಲಿ, ಕನ್ನಡಿಗರ ಮನದಲ್ಲಿ ಮೇರು ವ್ಯಕ್ತಿತ್ವದಿಂದ ಅಚ್ಚಳಿಯದ ನೆನಪಾಗಿ ಉಳಿದಿರುವವರಲ್ಲಿ ಮೊದಲಿಗರು ಅಂದ್ರೆ ಅದು ಡಾ. ರಾಜ್ ಕುಮಾರ್ ಅವರು ಅಂತಾನೇ ಹೇಳಬಹುದು. ಇದೀಗ ಅಣ್ಣಾವ್ರ ಕುಟುಂಬದ ಮತ್ತೊಂದು ಕುಡಿ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಹೌದು ಡಾ. ರಾಜ್ ಅವರ ಅಳಿಯ ನಟ ರಾಮ್ ಕುಮಾರ್ ಅವರ ಮಗಳು ‘ಧನ್ಯಾ ರಾಮ್ ಕುಮಾರ್’ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ.

“ನಿನ್ನ ಸನಿಹಕೆ”

“ನಿನ್ನ ಸನಿಹಕೆ” ಚಿತ್ರದ ಮೂಲಕ ಧನ್ಯಾ ರಾಮ್ ಕುಮಾರ್ ಹಾಗೂ ಸೂರಜ್ ಗೌಡ ಇಬ್ಬರೂ ಮೊದಲ ಬಾರಿಗೆ ನಟಿಸಿದ್ದು, ಇಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಈ ಚಿತ್ರಕ್ಕೆ ಸಂಗೀತ ಮಾಂತ್ರಿಕ ರಘು ದೀಕ್ಷಿತ್ ರ ಸಂಗೀತ, ವಾಸುಕಿ ವೈಭವ್ ರ ಸಾಹಿತ್ಯವಿದೆ. ನಿನ್ನ ಸನಿಹಕೆ ಚಿತ್ರವನ್ನ ಸೂರಜ್ ಗೌಡ ನಿರ್ದೇಶನ ಮಾಡುತ್ತಿದ್ದು, ವೈಟ್ ಅಂಡ್ ಗ್ರೇ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡಲಿದೆ. ಅಕ್ಷಯ್ ರಾಜಶೇಖರ್ ಮತ್ತು ರಂಗನಾಥ್ ಕೂಡ್ಲಿ
ನಿರ್ಮಾಪಕರಾಗಿದ್ದಾರೆ.

ಇನ್ನೂ ನಿನ್ನ ಸನಿಹಕೆ ಚಿತ್ರ ಇದೇ ಆಗಸ್ಟ್ 20ಕ್ಕೆ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ವರನಟ ಡಾ. ರಾಜ್ ಕುಮಾರ್ ಅವರ ಮೂವರು ಪುತ್ರರಾದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹೆಸರಾಂತ ನಟರಾಗಿದ್ದಾರೆ. ಅಲ್ಲದೆ, ರಾಘವೇಂದ್ರ ರಾಜ್‍ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಸ್ಯಾಂಡಲ್ ವುಡ್ ನಲ್ಲಿ ನಟನಾಗಿ ಮಿಂಚಿದ್ದು, ಯುವರಾಜ್ ಕುಮಾರ್ ಸಿನಿಮಾ ಕ್ಷೇತ್ರದಲ್ಲಿ ಚಾಪು ಮೂಡಿಸಲು ರೇಡಿಯಾಗಿದ್ದಾರೆ. ಇದೀಗ ರಾಮ್ ಕುಮಾರ್ ಪುತ್ರಿ ಕೂಡ ಸಿನೆಮಾ ಜರ್ನಿ ಸ್ಟಾರ್ಟ್ ಮಾಡಿದ್ದು ಕನ್ನಡಿಗರ ಆಶಿರ್ವಾದ ಪಕ್ಕಾ ಎನ್ನುವಂತಿದೆ.

ನೋಡೋಣ ರಾಜ್ ಕುಟುಂಬದ ಈ ಕುವರಿಯ ನಟನೆ ತೆರೆ ಮೇಲೆ ಹೇಗೆ ಮೂಡಿ ಬರಲಿದೆ ಮತ್ತು ಧನ್ಯಾ ರಾಮ್ ಕುಮಾರ್ ಅವರನ್ನ ಪ್ರೇಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ.
**

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles