25.6 C
Bengaluru
Thursday, December 8, 2022
spot_img

ರಿಯಲ್ ಹಿರೋಗೆ ಹ್ಯಾಪಿ ಬರ್ತಡೆ ಎನ್ನುತ್ತಿದೆ ಭಾರತ

ಬಹುಭಾಷಾ ನಟ ಸೋನು ಸೂದ್ ಇಂದು ತಮ್ಮ 48ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಭಾಷೆ, ಇಂಡಸ್ಟ್ರೀಯ ಮಿತಿಯಿಲ್ಲದೆ ಸೋನುಸೂದ್ ಗೆ ಇಡೀ ದೇಶಾದ್ಯಂತ ಅಭಿಮಾನಿ ಬಳಗವಿದ್ದು, ಎಲ್ಲರೂ ನೆಚ್ಚಿನ ನಟನಿಗೆ ಬರಪೂರ ಶುಭಾಶಯ ಕೋರಿ ಸಂಭ್ರಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಸೋನುಗೆ ಅಭಿಮಾನಿಗಳ ದಂಡಿದೆ.

ಇಡೀ ವಿಶ್ವದ ಜನರ ಬದುಕನ್ನ ಹೈರಾಣಾಗಿಸಿದ ಕೊರೊನಾ ಭಾರತೀಯರನ್ನಂತು ಅಕ್ಷರಶಃ ಹೈರಾಣಾಗಿಸಿತ್ತು. ಮೊದಲ ಬಾರಿ ಜಾರಿಯಾದ ಕೊರೊನಾ ಲಾಕ್ ಡೌನ್ ಜನರನ್ನು ಕಂಗಾಲಾಗಿಸಿತ್ತು. ಊರ ದಾರಿ ಕಾಣಲು ಹೋರಟವರಿಗೆ ಸೌಲಭ್ಯ ಕಲ್ಪಿಸದೆ ಕೇಂದ್ರ-ರಾಜ್ಯ ಸರ್ಕಾರಗಳು ತಮ್ಮ ಹೊಣಗೇಡಿತನವನ್ನು ಪ್ರದರ್ಶನ ಮಾಡಿದವು ಆ ಸಂದರ್ಭದಲ್ಲಿ ಸಾಮಾನ್ಯರ ನೆರವಿಗೆ ನಿಂತ ರೀಲ್ ಖಳನಟ ನೊಂದವರಿಗೆ ರಿಯಲ್ ಹಿರೋ ಆಗಿಬಿಟ್ಟರು.

ಕಳೆದೆರಡು ವರ್ಷಗಳಿಂದ ಜನರ ಜೀವನವನ್ನು ಸಂಕಷ್ಟಕ್ಕೆ ದೂಡಿರುವ ಕೊರೊನಾ ವಿರುದ್ಧ ಸೆಡ್ಡು ಹೊಡೆದು ಸಾಮಾಜಿಕ ಕೆಲಸಗಳಿಗೆ ತಮ್ಮನ್ನು ತೊಡಗಿಸಿಕೊಂಡಿರುವ ಸೋನುಸೂದ್ ನಿರೀಕ್ಷೆಯಿಲ್ಲದ ಲಾಕ್ ಡೌನ್ ನಿಂದ ಕಂಗಾಲಾದ ವಲಸೆ ಕಾರ್ಮಿಕರನ್ನು ಅವರ ಮನೆಗೆ ಸೇರಿಸುವ ಮಹತ್ವದ ಕೆಲಸ ಜೊತೆಗೆ ಅಗತ್ಯ ವಸ್ತುಗಳನ್ನು ಪೂರೈಸಿದ್ದರು. ಅಲ್ಲದೆ ಕಾರ್ಮಿಕರಿಗೆ ಉದ್ಯೋಗ ವ್ಯವಸ್ಥೆ ಕೂಡ ಮಾಡಿದ್ದರು. ಎರಡನೇ ಅಲೆಯ ಸಂದರ್ಭದಲ್ಲಂತೂ ಆಂಬುಲೇನ್ಸ್-ಆಕ್ಸಿಜನ್ ಒದಗಿಸುವುದು, ಸಹಾಯ ಕೇಳಿದ ರೋಗಿಗಳ ಚಿಕಿತ್ಸಾ ವೆಚ್ಚ ಭರಿಸುವುದು, ಅಗತ್ಯ ಔಷಧಿಗಳನ್ನು ತಲುಪಿಸುವ ಕಾಯಕದಲ್ಲಿ ನಿರತರಾದ ಈ ನಟ ಇದೀಗ ಭಾರತೀಯರ ನೆಚ್ಚಿನ ಹಿರೋ.

ತೆಲುಗು, ಕನ್ನಡ, ಪಂಜಾಬಿ ಸಿನಿಮಾಗಳಲ್ಲಿ ನಟಿಸಿರುವ ಸೋನು ಸೂದ್ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ಚೈನೀಸ್ ಭಾಷೆಯಲ್ಲೂ ಅಭಿನಯಿಸಿದ್ದಾರೆ. ಶಕ್ತಿ ಸಾಗರ್ ಸಂಸ್ಥೆ ನಿರ್ಮಾಣ ಮಾಡಿರುವ ಸೋನು ಸೂದ್ ಅದರಿಂದ ಸಾಮಾಜಿಕ ಕೆಲಸಗಳನ್ನು ಮುಂದುವರೆಸಿದ್ದಾರೆ.


Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles