1 ಮಿಲಿಯನ್ ಪ್ಲಸ್ ವೀವ್ಸ್ ಕಂಡ ಕಾಡು ಮಳೆ..
ಭರವಸೆ ಹುಟ್ಟಿಸಿದ ನಿರೀಕ್ಷೆ ಹೆಚ್ಚಿಸಿದ ಕಾಡುಮಳೆ…
ಸಿನಿಮೋತ್ಸಾಹ ಇದ್ರೆ, ಸಿನಿಮಾ ಹಸಿವು ಇದ್ರೆ , ಪ್ರೇಕ್ಷಕರ ನಾಡಿಮಿಡಿತ ಸರಿಯಾಗಿ ಅರೆತಿದ್ರೆ, ಯಾರು ಬೇಕಾದ್ರೂ ಸಿನಿಮಾ ಮಾಡಬಹುದು.. ಅದು ಕ್ವಾಲಿಟಿಯಾಗಿ, ಎಂಟರ್ಟೈನಿಂಗ್ ಆಗಿ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಕಾಡುಮಳೆ. ಜಸ್ಟ್ ಸಿಂಗಲ್ ಟೀಸರ್ ನಿಂದ ಈ ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ.

ಕಂಪ್ಲೀಟ್ ಹೊಸಬರೇ ಕೂಡಿ ಮಾಡಿರೋ ಈ ಸಿನಿಮಾದ ಟೀಸರ್ ಸದ್ಯ 1 ಮಿಲಿಯನ್ ವೀವ್ಸ್ನ ಕ್ರಾಸ್ ಮಾಡಿದೆ. ಯಾವುದೇ ಬ್ರ್ಯಾಂಡ್ ಇಲ್ಲದೇ, ಸ್ಟಾರಿಸಂ ಇಲ್ಲದೇ ಯಾವುದೇ ಪ್ರಚಾರವಿಲ್ಲದೇ, ತುಂಬು ಸಿನಿಮೋತ್ಸಾಹದಲ್ಲಿ ಮಾಡಿರೋ ಸಿನಿಮಾ ಕಾಡುಮಳೆ. ಸಮರ್ಥ್ ಅನ್ನೋ ಹೊಸ ನಿರ್ದೇಶಕನ ಕನಸಿಗೆ ನಾಲ್ಕೈದು ಜನ ಗೆಳೆಯರೆಲ್ಲಾ ಸೇರಿ ಬಂಡವಾಳ ಹೂಡಿದ್ದಾರೆ.

ಕಾಸ್ಮೂಸ್ ಮೂವೀಸ್ ಬ್ಯಾನರ್ ನಡಿಯಲ್ಲಿ ತಯಾರಾಗಿರೋ ಈ ಚಿತ್ರದಲ್ಲಿ ಹರ್ಷನ್, ಸಂಗೀತ, ಗೌತಮ್, ಗಿಲ್ಲಿ ಮಂಜು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟಿ ವಿಜಯಲಕ್ಷ್ಮಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿಭಾವಂತ ತಂತ್ರಜ್ಞರ ತಂಡ ಕೂಡಿ ಮಾಡಿರೋ ಕಾಡುಮಳೆ ಬೇರೆ ಬೇರೆ ವಿಚಾರಗಳಿಂದ ತುಂಬಾ ಪಾಸಿಟೀವ್ ಆಗಿ ಗಮನ ಸೆಳೆಯುತ್ತಿದೆ. ಅಂದ್ಹಾಗೆ ರೀಸೆಂಟಾಗಿ ಹೊಸಬರ ತಂಡವೊಂದು ಮಾಡಿರೋ ಸಿನಿಮಾ ಇಷ್ಟರ ಮಟ್ಟಿಗೆ ಗಮನ ಸೆಳೆಯುತ್ತಿರೋದು ಉದ್ಯಮದಲ್ಲಿ ಭರವಸೆ ಹುಟ್ಟಿಸಿದೆ.
