ಸನ್ನಿ ಲಿಯೋನ್ ಬರ್ತ್‌ಡೇ ಇವತ್ತು, ತುಂಬಾ ಜನರಿಗೆ ಸನ್ನಿ ಲಿಯೋನ್ ಒಬ್ಬ ಮಾಡೆಲ್ ಆಗಿ ಗೊತ್ತು, ನೀಲಿ ಚಿತ್ರತಾರೆಯಾಗಿ ಗೊತ್ತು, ನಟಿಯಾಗಿ ಗೊತ್ತು, ಕೆಲವರಿಗೆ ಅವರ ಸಹಾಯ ಮಾಡುವ ಗುಣವೂ ಗೊತ್ತು, ಆದ್ರೆ ಸನ್ನಿ ಲಿಯೋನ್ ಎಲ್ಲರಿಗಿಂತ ವಿಭಿನ್ನವಾಗಿ ನಿಲ್ಲೋದಕ್ಕೆ ವಿಶೇಷ ಕಾರಣಗಳಿವೆ, ಅದ್ರಲ್ಲಿ ೧೦ ಇಲ್ಲಿವೆ

- ಸನ್ನಿ ಲಿಯೋನ್ ಪ್ರಾಣಿ ದಯಾ ಸಂಘ(ಪೇಟಾ)ಗೆ ರಾಯಭಾರಿಯಾದ ನಂತ್ರ, ಅವ್ರಲ್ಲಿದ್ದ ಪ್ರಾಣಿ ಪ್ರೀತಿ ಜಾಗೃತಿಗೊಂಡ ನಂತ್ರ, ತಮ್ಮ ಇಡೀ ಕುಟುಂಬವನ್ನ ಸಸ್ಯಹಾರಿಗಳನ್ನಾಗಿ ಮಾಡಿದ್ರು. ಇವತ್ತಿಗೂ ಸನ್ನಿ ಲಿಯೋನ್ ಶುದ್ಧ ಸಸ್ಯಹಾರಿ.

2.ಸನ್ನಿ ಲಿಯೋನ್ ಮಹಾರಾಷ್ಟ್ರದ ಲತೂರ್ ಅನ್ನೋ ಸಣ್ಣ ಪಟ್ಟಣದಲಿರೋ ಅನಾಥಾಶ್ರಮದಿಂದ ಒಂದು ಹೆಣ್ಣುಮಗುವನ್ನ ದತ್ತು ಪಡೆದಿದ್ದಾರೆ. ಆ ಮಗುವಿನ ಹೆಸರು ನಿಶಾ. ಸನ್ನಿ ಹಾಗೂ ಡೇನಿಯಲ್ ವೆಬರ್ ಉಳಿದಿಬ್ಬರು ಮಕ್ಕಳನ್ನೂ ಕೂಡ ಆರ್ಥಿಕ ಸಂಕಷ್ಟದಲ್ಲಿದ್ದ ಇಬ್ಬರು ಮಹಿಳೆಯರನ್ನ ಬಾಡಿಗೆ ತಾಯಿಯಾಗಿಸಿ ಪಡೆದರು.

- ಸನ್ನಿ ಲಿಯೋನ್ ಮುಂಬೈನ ಶಾಲೆಯೊಂದನ್ನ ದತ್ತು ಪಡೆದಿದ್ದಾರೆ. ಈ ವಸತಿ ಶಾಲೆಯಲ್ಲಿ 300 ಮಕ್ಕಳಿದ್ದು, ಈ ಮಕ್ಕಳ ವಸತಿ ಹಾಗೂ ಶಿಕ್ಷಣದ ಜವಾಬ್ದಾರಿಯನ್ನ ಸನ್ನಿ ಹೊತ್ತಿದ್ದಾರೆ.

4. ಸನ್ನಿ ಲಿಯೋನ್ ಗೀಗ 40 ವರ್ಷ, ಆದ್ರೆ ನೋಡೋದಕ್ಕೆ ಅಷ್ಟು ಏಜ್ ಆದಂತೆ ಕಾಣೋದಿಲ್ಲ, ಇದಕ್ಕೆ ಕಾರಣ ಸನ್ನಿಯ ಶಿಸ್ತು ಬದ್ಧ ಜೀವನ ಶೈಲಿ ಹಾಗೂ ಆಹಾರ ಕ್ರಮ.

5. ತುಂಬಾ ಜನರಿಗೆ ಗೊತ್ತಿಲ್ಲದ ವಿಷಯ ಅಂದ್ರೆ ನಿಜ ಜೀವನದಲ್ಲಿ ಸನ್ನಿ ತುಂಬಾನೇ ನಾಚಿಕೆ ಸ್ವಭಾವದ ವ್ಯಕ್ತಿ, ಅದಕ್ಕಿಂತ ಹೆಚ್ಚಾಗಿ ಅಂತರ್‌ಮುಖಿ, ಹೆಚ್ಚು ಮಾತನಾಡದ ಸರಳ ಜೀವಿ

6.ಸನ್ನಿ ಬಾಲಿವುಡ್ ಸಿನಿಮಾ ಮೂಲಕ ಭಾರತೀಯ ಚಿತ್ರರಂಗಕ್ಕೆ ಕಾಲಿಟ್ಟು 2021ಕ್ಕೆ ಹತ್ತು ವರ್ಷಗಳು ತುಂಬಿವೆ, ಬಿಗ್ ಬಾಸ್ ನಂತ್ರ ಸನ್ನಿ ಬಾಲಿವುಡ್ ನಲ್ಲಿ ನಟಿಸಿದ ಮೊದಲ ಚಿತ್ರ ಜಿಸ್ಮ-2

7.ಸನ್ನಿ ಲಿಯೋನ್ ʻಸ್ವೀಟ್ ಡ್ರೀಮ್ಸ್ʼಅನ್ನೋ ಪುಸ್ತಕ ಪಡೆದಿದ್ದು, ಈ ಪುಸ್ತಕದಲ್ಲಿ 12 ಸಣ್ಣ ಕಥೆಗಳಿವೆ.

8.ಸನ್ನಿ ಇಲ್ಲಿಯವರೆಗೂ ಒಟ್ಟು 30 ಭಾರತೀಯ ಸಿನಿಮಾಗಳಲ್ಲಿ ನಟಿಸಿದ್ದು, 5 ಸಿನಿಮಾಗಳು ಚಿತ್ರೀಕರಣ ಹಂತದಲ್ಲಿವೆ, ಈ ಮೂವತ್ತು ಸಿನಿಮಾಗಳಲ್ಲಿ ಹಿಂದಿ, ಕನ್ನಡ, ತಮಿಳು, ತೆಲುಗು, ಬೆಂಗಾಲಿ, ಮರಾಠಿ ಸಿನಿಮಾಗಳು ಸೇರಿವೆ

9.ಸನ್ನಿ ಲಿಯೋನ್‌ಗೆ ಅಮಿರ್ ಖಾನ್ ಅಂದ್ರೆ ತುಂಬಾ ಇಷ್ಟ, ಅವ್ರ ಜೊತೆ ನಟಿಸಬೇಕು ಅನ್ನೋದು ಅವ್ರ ಕನಸು, ಇದಕ್ಕಾಗಿ ಅಮಿರ್ ಖಾನ್‌ರ ಪರ್ಸನಲ್ ಟ್ರೈನರ್ ಕೂಡ ತಮ್ಮ ಆಕ್ಟಿಂಗ್ ಸ್ಕಿಲ್ಸ್ ಹೆಚ್ಚಸಿಕೊಳ್ಳಲು ಕೆಲವು ದಿನದ ಮಟ್ಟಿಗೆ ಟ್ರೈನರ್ ಆಗಿ ಪಡೆದುಕೊಂಡಿದ್ರು.

10.ಭಾರತದಲ್ಲಿ ಮೊದಲ ಬಾರಿಯ ನಟಿಯೊಬ್ಬರ ಆಪ್ ಲಾಂಚ್ ಆಗಿದ್ದು, ಸನ್ನಿ ಲಿಯೋನ್ ಅವ್ರದ್ದು, 2016ರಲ್ಲಿ ಈ ಆಪ್ ಲಾಂಚ್ ಆಗಿದೆ.