ನಟ, ನಿರ್ದೇಶಕ, ನಿರ್ಮಾಪಕ ಕಾಶಿನಾಥ್ ಅವ್ರ ಜನ್ಮದಿನದ ನೆನಪಿನಲ್ಲಿ ಕನ್ನಡ ಪಿಚ್ಚರ್ ತುಂಬಾ ಜನರಿಗೆ ಗೊತ್ತಿರದ ಅಪರೂಪದ ಮಾಹಿತಿಯನ್ನ ನಿಮಗೆ ನೀಡ್ತಿದೆ.

1.ಕಾಶಿನಾಥ್ ನಿಧನರಾಗುವವರೆಗೂ ಅವ್ರ ವಯಸ್ಸು ಎಷ್ಟು ಅಂತ ಯಾರಿಗೂ ಗೊತ್ತಿರ್ಲಿಲ್ಲ, ಅವ್ರು ಬರ್ತ್‌ಡೇ ಕೂಡ ಆಚರಿಸಿಕೊಳ್ತಾ ಇರ್ಲಿಲ್ಲ. ಅವ್ರು ನಮ್ಮನ್ನಗಲಿದ ನಂತ್ರ ಅವ್ರ ಡ್ರೈವಿಂಗ್ ಲೈಸೆನ್ಸ್… ಅವ್ರ ಜನ್ಮದಿನಾಂಕ 8 ಮೇ 1951 ಅಂತ ತಿಳಿಸಿತ್ತು.
2.ವಿಜ್ಞಾನವನ್ನ ತುಂಬಾ ಬೆಂಬಲಿಸುತ್ತಿದ್ದ ಕಾಶಿನಾಥ್, ಬೆಂಗಳೂರಿನ ಸಿಗ್ನಲ್‌ಗಳಿಗೆ ಟೈಮರ್ ಬರಲು ಪ್ರಮುಖ ಕಾರಣರು. ಆಗಿನ ಕಾಲಕ್ಕೆ ಸರ್ಕಾರಕ್ಕೆ ಹೀಗೊಂದು ಪ್ರಪೋಸಲ್ ಇಟ್ಟರು, 2000 ಇಸವಿಯ ನಂತ್ರ ಬೆಂಗಳೂರಿನ ಸಿಗ್ನೆಲ್‌ಗಳ ಸ್ವಯಂಚಾಲಿತ ಟೈಮರ್‌ಗಳ ಅಳವಡಿಕೆಯಾಯ್ತು.
3.ಕಾಶಿನಾಥ್ 1984ರಲ್ಲಿ ಅನುಭವ ಸಿನಿಮಾ ಮೂಲಕ ನಾಯಕ ನಟನಾಗಿ ತೆರೆಗೆ ಬಂದ್ರು, ಇದೇ ವರ್ಷ ಅನುಭವ ಸಿನಿಮಾ ಹಿಂದಿಗೆ ರಿಮೇಕ್ ಆಯ್ತು. ಈ ಸಿನಿಮಾವನ್ನೂ ಕಾಶಿನಾಥ್ ಅವ್ರೇ ನಿರ್ದೇಶನ ಮಾಡಿದ್ರು, ಇದಕ್ಕೂ ಮೊದಲೇ ಅವ್ರ ಅಪರಿಚಿತ ಸಿನಿಮಾ ಹಿಂದಿ ಹಾಗೂ ಮಲಯಾಳಂಗೆ ರಿಮೇಕ್ ಆಗಿತ್ತು.
4.ಕಾಶಿನಾಥ್ 2016ರಲ್ಲಿ ಕಮ್ ಬ್ಯಾಕ್ ಮಾಡಿದ ನಂತ್ರ ಒಟ್ಟು 3 ಸಿನಿಮಾಗಳಲ್ಲಿ ನಟಿಸಿದ್ರು, ಅದ್ರಲ್ಲಿ ಮೊದಲನೇಯದು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಜೂಮ್, ಮಲ್ಟಿಸ್ಟಾರರ್ ಸಿನಿಮಾ ಚೌಕ ಹಾಗೂ ಓಳ್ ಮುನ್ಸಾಮಿ..
5.ಕಾಶಿನಾಥ್ ಅಭಿನಯದ ಅನುಭವ ಸಿನಿಮಾ 2013ರಲ್ಲಿ 3ನೇ ಬಾರಿಗೆ, 5.1 ಸರೌಂಡ್ ಸೌಂಡ್ ಹಾಗೂ ಸಿನಿಮಾ ಸ್ಕೋಪ್‌ನ ಜೊತೆಗೆ ರೀ ರಿಲೀಸ್ ಆಗಿತ್ತು, ಆಗಲೂ ಸಿನಿಮಾಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು.
6.ನಾಲ್ಕು ದಶಕಗಳ ಕಾಲ ಕನ್ನಡ, ತೆಲುಗು, ಹಿಂದಿ, ಮಲಯಾಳಂ ಪ್ರೇಕ್ಷಕರನ್ನ ರಂಜಿಸಿದ ಕಾಶಿನಾಥ್ ನಿರ್ದೇಶಕರಾಗಿ, ನಿರ್ಮಾಪಕರಾಗಿ, ನಟರಾಗಿ ಕೆಲಸ ಮಾಡಿದ ಒಟ್ಟು ಸಿನಿಮಾಗಳು 46.. ಆದ್ರೆ ಅವ್ರ ಪಾಪ್ಯುಲಾರಿಟಿ ಅನಿಯಮಿತ.
7.ಕಾಶಿನಾಥ್ ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಆ ಕಾಲಕ್ಕೆ, ವಿಜ್ಞಾನ ವಿಷಯದಲ್ಲಿ ಪದವಿಧರರಾಗಿದ್ದರು, ಅವ್ರ ಆಲೋಚನೆಗಳೂ ಕೂಡ ತೀಕ್ಷ್ಣವಾಗಿರುತ್ತಿದ್ದವು.
8.ಕಾಶಿನಾಥ್ ಸುಮಾರು 10 ಸಿನಿಮಾ ʻಎʼ ಅಕ್ಷರದಿಂದ ಆರಂಭವಾಗುವ ಸಿನಿಮಾಗಳು, ಈ ಎಲ್ಲಾ ಸಿನಿಮಾಗಳಿಗೂ ಅವ್ರೇ ನಿರ್ದೇಶಕರು, ಕಾಶಿನಾಥ್ ಒಟ್ಟು 16 ಸಿನಿಮಾ ನಿರ್ದೇಶನ ಮಾಡಿದ್ದಾರೆ.
9.ಕಾಶಿನಾಥ್ ನಿರ್ದೇಶನ ನಿರ್ಮಾಣದ ಜೊತೆಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ರು, ಇವ್ರು ಮ್ಯೂಸಿಕ್ ಡೈರೆಕ್ಟರ್ ವಿ ಮನೋಹರ್ ಅವರ ಗುರುಗಳು.
10.ಕಾಶಿನಾಥ್ 25 ವರ್ಷಕ್ಕೆ ನಿರ್ದೇಶಕರಾಗಿ ಮೊದಲ ಬಾರಿಗೆ 1976ರಲ್ಲಿ ಅಪರೂಪದ ಅತಿಥಿಗಳು ಸಿನಿಮಾ ನಿರ್ದೇಶನ ಮಾಡಿದ್ರು, 1977ಕ್ಕೆ ಈ ಸಿನಿಮಾ ತೆರೆಗೆ ಬಂದಿತ್ತು. ಈ ಸಿನಿಮಾ ಆ ಕಾಲಕ್ಕೆ ವಿಮರ್ಶಕರಿಂದ ಪ್ರಶಂಸೆ ಗಿಟ್ಟಿಸಿಕೊಂಡಿತ್ತು. ಆದ್ರೆ ಅಪರಿಚಿತ ಅವ್ರಿಗೆ ಮೊದಲ ಬಾರಿಗೆ ಕಮರ್ಶಿಯಲ್ ಸಕ್ಸಸ್ ತಂದು ಕೊಟ್ಟ ಸಿನಿಮಾ.