ಕಳೆದ ವರ್ಷ ಇದೇ ಟೈಮ್‌ನಲ್ಲಿ, ಲಾಕ್‌ಡೌನ್ ಇದ್ರೂ ರಾತ್ರಿಯ ವೇಳೆ ಕಾರಿನಲ್ಲಿ ವೇಗವಾಗಿ ಚಲಿಸಿ, ಅಪಘಾತ ಮಾಡಿಕೊಂಡು ಸುದ್ದಿಯಾಗಿದ್ರು ನಟಿ ಶರ್ಮಿಳಾ ಮಾಂಡ್ರೆ. ಇದಾದ ಬಳಿಕ ಕಣ್ಮರೆಯಾಗಿದ್ರು, ನಂತ್ರ ಸದ್ದಿಲ್ಲದೆ ಗಾಳಿಪಟ-2 ಸಿನಿಮಾ ತಂಡ ಸೇರಿಕೊಂಡು ಶೂಟಿಂಗ್‌ನಲ್ಲಿ ಭಾಗಿಯಾಗಿದ್ರು. ವಿದೇಶದಲ್ಲಿ ಸಿನಿಮಾ ಶೂಟ್‌ಮುಗಿಸಿ ಬಂದ ಶರ್ಮಿಳಾ ಮಾಂಡ್ರೆ ಈಗ ಹಾಲಿವುಡ್ ಮಟ್ಟದಲ್ಲಿ ಕನ್ನಡ ಸಿನಿಮಾಗಳ ಹೆಸರು ರಾರಾಜಿಸುವಂತೆ ಮಾಡಿದ, ಖ್ಯಾತ ನಿರ್ದೇಶಕರಿಂದ ಮನೆಗೆಲಸ ಮಾಡಿಸಿದ್ದಾರೆ.
ಅಂದಹಾಗೆ ಶರ್ಮಿಳಾ ಮಾಂಡ್ರೆಗಾಗಿ ಮನೆಗೆಲಸ ಮಾಡಿದ ನಿರ್ದೇಶಕ ಮತ್ಯಾರು ಅಲ್ಲ ಲೂಸಿಯಾ, ಯೂಟರ್ನ್‌ನಂಥಾ ವಿಭಿನ್ನ ಸಿನಿಮಾಗಳನ್ನೂ ನೀಡಿದ ಪವನ್ ಕುಮಾರ್. ಹೌದು ಲಾಕ್ ಡೌನ್ ಟೈಮ್‌ನಲ್ಲಿ ಶರ್ಮಿಳಾ ಮಾಂಡ್ರೆ ಹೇಳಿದಂತೆ ಮನೆಯ ಕಸ ಗುಡಿಸಿ, ನೆಲ ಒರೆಸಿ ಮನೆಗೆಲಸ ಮಾಡಿದ್ದಾರೆ. ಟ್ವಿಸ್ಟ್ ಏನಪ್ಪ ಅಂದ್ರೆ ಪವನ್ ಶರ್ಮಿಳಾ ಮಾಂಡ್ರೆ ಮಾಡಿದ ಚಾಲೆಂಜ್ ಒಪ್ಪಿ ತಮ್ಮ ಮನೆಯಲ್ಲಿ ಕೆಲಸ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.



ಇದಕ್ಕೆ ಉತ್ತರಿಸಿರೋ ಶರ್ಮಿಳಾ ಮಾಂಡ್ರೆ, ಪವನ್ ನೀವು ಮನೆಯ ಕಸವನ್ನ ಹೊರಹಾಕಬಹುದು, ಮನದ ಕಸವನ್ನೂ ಹೊರಹಾಕಲು ಸಾಧ್ಯವೆ ಅಂತ ರಿಪ್ಲೈ ಮಾಡಿದ್ದಾರೆ. ಪವನ್ ಹಾಗೂ ಶರ್ಮಿಳಾ ಮಾಂಡ್ರೆ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳ್ತಿರೋ ಗಾಳಿಪಟ-2 ಸಿನಿಮಾದಲ್ಲಿ, ಜೋಡಿಯಾಗಿ ನಟಿಸಿದ್ದಾರೆ. ಈ ಚಾಲೆಂಜ್‌ಗೂ ಈ ಸಿನಿಮಾದಲ್ಲಿನ ಈ ಜೋಡಿಯ ಪಾತ್ರಕ್ಕೂ ಏನಾದ್ರು ಲಿಂಕ್ ಇದ್ಯಾ ಕಾದು ನೋಡ್ಬೇಕು..!