ಬಿಗ್ ಬಾಸ್ ಶೋನಲ್ಲಿ ಹಿಂದೆಂದು ಹೀಗಾಗಿರ್ಲಿಲ್ಲ..!
ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್, ಭಾರತದ ಸಾಕಷ್ಟು ಭಾಷೆಗಳಲ್ಲಿ, ಹಲವು ವರ್ಷಗಳಿಂದ ಪ್ರಸಾರವಾಗ್ತಾ ಇದೆ. ಕನ್ನಡದಲ್ಲೂ ಈಗಾಗ್ಲೆ 8ನೇ ಆವೃತ್ತಿ ಬಿಗ್ ಬಾಸ್ ಪ್ರಸಾರವಾಗ್ತಾ ಇದೆ. ಆದ್ರೆ ಯಾವುದೇ ಭಾಷೆಯ ಬಿಗ್ ಬಾಸ್ ಕಾರ್ಯಕ್ರಮದಲ್ಲೂ ಇಲ್ಲಿಯವರೆಗೂ ಆಗಿರದ ರೀತಿಯಲ್ಲಿ, ಕಳೆದ 2 ವಾರದಿಂದ ಬಿಗ್ ಬಾಸ್ ಶೋ ನಡೆಯುತ್ತಿದೆ.
ಕಳೆದ 2 ವಾರದಿಂದ ಕಿಚ್ಚ ಸುದೀಪ್, ವಾರಂತ್ಯದ ಪಂಚಾಯ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಇನ್ನೂ 2 ವಾರ ಬಿಗ್ ಬಾಸ್ ಶೋಗೆ ಕಿಚ್ಚ ಬರೋದಿಲ್ಲ. 14 ಸೀಸನ್ ಕಂಪ್ಲೀಟ್ ಮಾಡಿರೋ ಹಿಂದಿ ಬಿಗ್ ಬಾಸ್‌ನಲ್ಲೂ ಇಲ್ಲಿಯವರಗೂ ಹೀಗೆಂದೂ ಆಗಿರ್ಲಿಲ್ಲ. ಸಲ್ಮಾನ್ ಖಾನ್ ಆಬ್ಸೆಂಟ್ ಆಗಿರ್ಲಿಲ್ಲ. ಆದ್ರೆ ಕಿಚ್ಚ ಸುದೀಪ್ ನಿರಂತರ ಚಿತ್ರೀಕರಣದ ಸುಸ್ತಿನಿಂದ, ನಿರಂತರವಾಗಿ ನಿಂತು ಕೆಲಸ ಮಾಡಿದ ಕಾರಣ, ಅತಿಯಾದ ಕಾಲುನೋವಿನ ಕಾರಣದಿಂದಾಗಿ ಏಪ್ರಿಲ್ ಕೊನೆಯ ವಾರ ಬಿಗ್ ಬಾಸ್ ವಾರಾಂತ್ಯದ ಎಪಿಸೋಡ್‌ನಲ್ಲಿ ಭಾಗಿಯಾಗಲಿಲ್ಲ.

ಹಾಗೋ ಹೀಗೋ ಒಂದು ವಾರ ತಳ್ಳಿದ ಬಿಗ್ ಬಾಸ್ ಕಾರ್ಯಕ್ರಮದ ಶೋ ನಿರ್ವಾಹಕರಿಗೆ, ರಾಜ್ಯದ ಲಾಕ್‌ಡೌನ್ ಮುಳುವಾಯ್ತು. ಲಾಕ್ ಡೌನ್‌ನಿಂದಾಗಿ ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಶೋ ಶೂಟ್ ಮಾಡಲು ಸರ್ಕಾರದಿಂದ ಅನುಮತಿ ಇರಲಿಲ್ಲ. ಅನಾರೋಗ್ಯದಿಂದ ಸುದೀಪ್ ಚೇತರಿಸಿಕೊಂಡಿದ್ದರೂ ಶೋಗೆ ಬರಲಾಗಲಿಲ್ಲ. ಈಗ ಲಾಕ್‌ಡೌನ್ ಮುಂದುವರೆಯುತ್ತಿರುವ ಕಾರಣ ಇನ್ನೂ 2 ವಾರ ಸುದೀಪ್ ಮನೆಯವರ ಯೋಗ-ಕ್ಷೇಮ ಕೇಳಲು ಬರುವುದಿಲ್ಲ.

ಬಿಗ್ ಬಾಸ್ ಮಾತ್ರವಲ್ಲ, ಕಲರ್ಸ್ ಕನ್ನಡದ ಮತ್ತೊಂದು ಶೋ ಮಜಾ ಟಾಕೀಸ್, ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕಾಮಿಡಿ ಕಿಲಾಡಿಗಳು ಶೋ ಕೂಡ ಶೂಟ್ ಮಾಡಲು ಸಾಧ್ಯವಾಗದ ಕಾರಣ ಇನ್ನೆರಡು ವಾರ ಪ್ರಸಾರವಾಗುವುದಿಲ್ಲ. ಇನ್ನುಳಿದಂತೆ ಸೀರಿಯಲ್‌ಗಳು ಇನ್ನೆರಡು ವಾರ ನಿರಾಂತಕವಾಗಿ ಪ್ರಸಾರವಾಗಬಹುದು, ಆದ್ರೆ ಅದಾದ ಬಳಿಕವೂ ಲಾಕ್‌ಡೌನ್ ಮುಂದುವರೆದರೆ, ಸೀರಿಯಲ್‌ಗಳೂ ಮರುಪ್ರಸಾರ ಮಾಡಬೇಕಾದ ಅನಿವಾರ್ಯತೆ ಬರಲಿದೆ.