ಈ ಸಂಕಷ್ಟ ಕಾಲದಲ್ಲಿ, ಇಡೀ ದೇಶದ ಜನರ ಏಕ ಮಾತ್ರ ಭರವಸೆ, ಏಕಮಾತ್ರ ಸಹಾಯಹಸ್ತವಾಗಿ ಕಾಣಸಿಗ್ತಿರೋದು one & ONLY ನಟ ಸೋನು ಸೂದ್. ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಸಾವಿರಾರೂ ಜನರಿಗೆ ರಕ್ಷಾ ಕವಚವಾಗಿನಿಂತ ಮನವತವಾದಿ ಸೋನು ಸೂದ್.
ದಿಕ್ಕೇ ತೋಚದ ಸ್ಥಿತಿಯಲ್ಲಿದ್ದ ಸಾಮಾನ್ಯರಿಗೆ ಅಸಾಮಾನ್ಯನಾಗಿ ನಿಂತು, ಯಾವುದೇ ರಾಜಕೀಯ ಪ್ರೆರೇಪಣೆಯಿಲ್ಲದೆ, ಯಾವುದೇ ಸ್ವಾರ್ಥತೆ ಇಲ್ಲದೇ, ನಿಸ್ವಾರ್ಥವಾಗಿ ಸೇವೆ ಮಾಡಿದರು.ಅದೇ ಭರವಸೆಯಲ್ಲಿ, ಅದೇ ನಿರೀಕ್ಷೆಯಲ್ಲಿ ಈ ವರ್ಷದ, ಈ ಕರಾಳ ಸ್ಥಿತಿಯಲ್ಲಿ ಮತ್ತೆ ಮುಂಬೈನ ಸೋನು ಸೂದ್ ಮನೆ ಮುಂದೆ ಹಲವಾರು ನಿರಾಶ್ರೀತರು, ಅಸಹಾಯಕರು ಸಾಹಯಕ್ಕಾಗಿ ನಿಲ್ತಿದ್ದಾರೆ. ಈ ಸ್ಥಿತಿಯಲ್ಲೂ ಸೋನು ಯಾವುದೇ ಕಷ್ಟವಿರಲಿ, ಯಾರಿಗೆ ಕಷ್ಟ ಇರಲಿ ಅವ್ರ ಪಾಲಿಗೆ ನಾನಿದ್ದೀನಿ ಅಂತ ಸಹಾಯ ಕೇಳಿ ಬಂದವರಿಗೆ ಮನಮಿಡಿದಿದ್ದಾರೆ. ಸಹಾಯ ಹಸ್ತ ಚಾಚುತ್ತಿದ್ದಾರೆ.
ಅಷ್ಟಕ್ಕೂ ಸೋನು ಸೂದ್ ಇಷ್ಟರ ಮಟ್ಟಿಗೆ ಸಹಾಯ ಮಾಡೋದಕ್ಕೆ ಹಣ ಎಲ್ಲಿಂದ ಬರುತ್ತೆ. ನಟನೊಬ್ಬ ಎಷ್ಟೆಲ್ಲಾ ಮಾಡೋದಕ್ಕೆ ಸಾಧ್ಯನಾ..? ಅನ್ನೋ ಪ್ರಶ್ನೆಗಳು ಹುಟ್ಟಿಕೊಳ್ಳ ಬಹುದು. ಆದ್ರೆ ನೇರವಾಗಿ ಹೇಳ ಬೇಕು ಅಂದ್ರೆ,ಸೋನು ಸೂದ್ ಬೆವರು ಸುರಿಸಿದ ದುಡಿದ ದುಡ್ಡನ್ನೇ ಇಲ್ಲಿ ಸೇವೆಗೆ ಬಳಸ್ತಿದ್ದಾರೆ.

ಸೋನು ಸೂದ್ ಒಂದು ಸಿನಿಮಾಗೆ 2ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಸಿನಿಮಾಗಿಂತ ಜಾಹೀರಾತಿನಿಂದ ಇವರಿಗೆ ಹೆಚ್ಚು ಸಂಪಾದನೆ ಇದ್ದು, ಶಕ್ತಿ ಸಾಗರ್ ಪ್ರೊಡಕ್ಷನ್ಸ್ ಅನ್ನೋ ಪ್ರೊಡಕ್ಷನ್ ಹೌಸ್ ಕೂಡ ಇದೆ. ಸುಮಾರು 130ರಿಂದ 150ಕೋಟಿ ರೂಪಾಯಿಗಷ್ಟು ಬೆಲೆಬಾಳುವಂತಹ ಸೋನು ಸೂದ್. ಸರಳವಾಗಿ ಜೀವಿಸೋ ಮನುಷ್ಯ, ಪತ್ನಿ ಮತ್ತು ಇಬ್ಬರು ಮಕ್ಕಳಿರೋ ಸೋನು ಸೂದ್ ಸಾಮಾನ್ಯರಂತೆ ಬದುಕು ನಡೆಸುತ್ತಿದ್ದಾರೆ. ಹಣ ಕ್ಷಣಿಕ, ಸೇವೆ ಶಾಶ್ವತ. ಅದೇ ಆತ್ಮತೃಪ್ತಿ. ಹಂಚಿತಿನ್ನೋದ್ರಲ್ಲೇ ಆನಂದ ಅನ್ನೋ ಮನೋಭಾವದ ಸೋನು ಸೂದ್. ತಮ್ಮದೇ ರೀತಿಯಲ್ಲಿ ಜನ ಸೇವೆ ಮಾಡ್ತಿದ್ದಾರೆ. ನಿಜಕ್ಕೂ ಈ ಮನುಷ್ಯನ ಈ ಗುಣಕ್ಕೆ ಹ್ಯಾಟ್ಸಾಫ್.

ದೇಶದಲ್ಲಿ ಸಾಕಷ್ಟು ದೊಡ್ಡ ದೊಡ್ಡ ಕಲಾವಿದರು, ಉದ್ಯಮಿಗಳು, ಶ್ರೀಮಂತರು ಇದ್ದಾರೆ. ಆದ್ರೆ ಎಲ್ಲಾರಿಗೂ ಈ ಸೇವಾ ಮನೋಭಾವ ಇಲ್ಲ. ಕೆಲವರು ಮಾತ್ರ ಅದನ್ನ ಮಾಡಲು ಮುಂದೆ ಬರುತ್ತಾರೆ. ಸಮಾಜ ನಮಗೇನು ಕೊಟ್ಟಿದೆ, ಅದನ್ನ ಮತ್ತೆ ಸಮಾಜಕ್ಕೆ ಕೊಡೋದೇ ಶ್ರೇಷ್ಠ ಸಾಧನೆ ಅನ್ನೋ ಮನಸ್ಥಿತಿ ಇರೋರು ತುಂಬಾ ವಿರಳ. ಅಂತಹ ವಿರಳರಲ್ಲಿ ಸರಳವಾಗಿ ಸೇವೆ ಮಾಡುತ್ತಾ ಅಗ್ರಮಾನ್ಯವಾಗಿ ಕಾಣ್ತಿರೋ ಸೋನು ಸೂದ್, ಸ್ವತಃ ಜನರ ನಡುವೆ ನಿಂತು, ನಿಮಗೆ ನಾನಿದ್ದೀನಿ ಅಂತ ಭರವಸೆಯ ಬೆಳಕಾಗಿದ್ದಾರೆ. ಕನ್ನಡ ಪಿಚ್ಚರ್ ಕಡೆಯಿಂದ ಈ ಮಾನವತವಾದಿಗೊಂದು ಸಲಾಂ.
