ಲವ್ ಯು ಆಲಿಯಾ… ಡಿ.ಕೆ ಸಿನಿಮಾದ ನಂತ್ರ ಮತ್ತೊಂದು ಕನ್ನಡದ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ ಸನ್ನಿ ಲಿಯೋನ್..ಅದಿತಿ ಪ್ರಭುದೇವ ನಟಿಸ್ತಿರೋ ಚಾಂಪಿಯನ್ ಸಿನಿಮಾದಲ್ಲಿ ಸನ್ನಿ ಐಟಂ ಸಾಂಗೋದಕ್ಕೆ ಸೊಂಟ ಬಳುಕಿಸಿದ್ದಾರೆ. ಚಾಂಪಿಯನ್ ಕ್ರೀಡೆಯ ಸುತ್ತಲೂ ಹೆಣೆದಿರೋ ಕಥೆಹೊಂದಿರೊ ಸಿನಿಮಾ ಆಗಿದ್ದು. ಸಿನಿಮಾದ ಹಾಡಿಗೆ ಸೇಸಮ್ಮ ಪಡೆ ಹೈಕ್ಳನ್ನ ಜುಮ ಜುಮ ಅನ್ಸಿದ್ದಾರೆ.


ಚಾಂಪಿಯನ್ ಸಿನಿಮಾದ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದ್ದು.ಕಳೆದ ನಾಲ್ಕೈದು ದಿನಗಳಿಂದ ಸನ್ನಿ ಬೆಂಗಳೂರಿನಲ್ಲಿ ಉಳಿದಿದ್ದು, ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಹೇಗಿರಲಿದೆ ಸೇಸಮ್ಮನ ಹೊಸ ಐಟಂ ಸಾಂಗ್ ಅಂತ ನೋಡೋಕೆ ಸ್ವಲ್ಪ ದಿನ ಕಾಯ್ಲೆ ಬೇಕು ಸನ್ನಿಲಿಯೋನ್ ಫ್ಯಾನ್ಸ್..!